ಆಂಬುಲೆನ್ಸ್’ನಲ್ಲಿ ಬಂದು ಅಪರಿಚಿತನನ್ನು ಬಿಟ್ಟು ಹೋದರು, ಕೆಲವೇ ಗಂಟೆಯಲ್ಲಿ ಆತ ಸಾವು, ಸ್ಥಳೀಯರಲ್ಲಿ ಕೆಲಕಾಲ ಕರೋನ ಆತಂಕ

010420 Man Left in Ratnagiri Layout Dies 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಏಪ್ರಿಲ್ 2020 ಅಪರಿಚಿತ ವ್ಯಕ್ತಿಯೊಬ್ಬನನ್ನು ಆಂಬುಲೆನ್ಸ್’ನಲ್ಲಿ ಕರೆತಂದು ಮನೆಯೊಂದರ ಮುಂದೆ ಬಿಡಲಾಗಿದೆ. ಕೆಲವೇ ಗಂಟೆಯಲ್ಲಿ ಆ ವ್ಯಕ್ತಿ ಪ್ರಾಣಿ ಬಿಟ್ಟಿದ್ದಾನೆ. ಇದು ಶಿವಮೊಗ್ಗದ ರತ್ನಗಿರಿ ಬಡಾವಣೆಯಲ್ಲಿ ಕೆಲಕಾಲ ‘ಕರೋನ’ ಆತಂಕ ಸೃಷ್ಟಿಸಿತ್ತು. ಮೃತನನ್ನು ಮಂಜುನಾಥ್ (68) ಎಂದು ಗುರುತಿಸಲಾಗಿದೆ. ಅಬ್ಬಲಗೆರೆ ಸಮೀಪದ ರತ್ನಗಿರಿ ಬಡಾವಣೆಯಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ಆಂಬುಲೆನ್ಸ್’ನಲ್ಲಿ ಕರೆತಂದಿದ್ದು ಏಕೆ? ಮಂಜುನಾಥ್’ನನ್ನು ರಾಮನಗರ ಜಿಲ್ಲೆಯ ಕನಕಪುರದಿಂದ ಶಿವಮೊಗ್ಗದ ಅಬ್ಬಲಗೆರೆಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಬುಲೆನ್ಸ್ … Read more

ಕರೋನ ಲಾಕ್’ಡೌನ್, 144 ಸೆಕ್ಷನ್ ನಡುವೆ ಶಿವಮೊಗ್ಗದಲ್ಲಿ ತಿಥಿ ಕಾರ್ಯ, ನೂರಕ್ಕೂ ಹೆಚ್ಚು ಜನರು ಭಾಗಿ

010420 Thiti During Corona Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಏಪ್ರಿಲ್ 2020 ಕರೋನ ಲಾಕ್’ಡೌನ್ ಮತ್ತು ಸೆಕ್ಷನ್ 144 ವಿಧಿಸಿದ್ದರೂ ಶಿವಮೊಗ್ಗದ ತುಂಗಾ ನದಿ ದಂಡೆ ಮೇಲೆ ತಿಥಿ ಕಾರ್ಯ ನಡೆದಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕೋರ್ಪಲಯ್ಯ ಛತ್ರ ಮಂಟಪದಲ್ಲಿ ತಿಥಿ ಕಾರ್ಯ ನಡೆದಿದೆ. ಅಶೋಕ ನಗರ, ಹನುಮಂತನಗರ, ವಿನಾಯಕ ನಗರದ ಕೆಲವರು ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದರು. ನೂರಕ್ಕೂ ಹೆಚ್ಚು ಜನರು ಕಾರ್ಯದಲ್ಲಿ ಭಾಗವಹಿಸಿರುವುದು ತಿಳಿಯುತ್ತಿದ್ದಂತೆ, ಪೊಲೀಸರು ಮತ್ತು ಸ್ಥಳೀಯ ಕಾರ್ಪೊರೇಟರ್ ಸ್ಥಳಕ್ಕೆ ಆಗಮಿಸಿದರು. ಪೊಲೀಸರು … Read more

ಶಿವಮೊಗ್ಗದಲ್ಲಿ ಪೆಟ್ರೋಲ್ ಬಂಕ್ ಟೈಮಿಂಗ್ಸ್ ಬದಲು, ಹೊಸ ಸಮಯ ಯಾವುದು ಗೊತ್ತಾ?

310320 Petrol Bunk Close Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 31 ಮಾರ್ಚ್ 2020 ಶಿವಮೊಗ್ಗದಲ್ಲಿ ಪೆಟ್ರೋಲ್ ಬಂಕ್’ಗಳು ತೆರೆಯುವ ಅವಧಿಯನ್ನು ಕಡಿತಗೊಳಿಸಲಾಗಿದೆ. ಜಿಲ್ಲಾಡಳಿತದ ಸೂಚನೆ ಹಿನ್ನೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕರೋನ ಲಾಕ್’ಡೌನ್ ಹಿನ್ನೆಲೆ ಪೆಟ್ರೋಲ್ ಬಂಕ್’ಗಳು ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರೆ ತೆರೆಯಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಜಿಲ್ಲಾ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ತಿಳಿಸಿದ್ದಾರೆ. ಈವರೆಗು ಪೆಟ್ರೋಲ್ ಬಂಕ್’ಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ 10 ಕರೋನ ಕಂಟ್ರೋಲ್ ರೂಂ, ಯಾವ್ಯಾವ ತಾಲೂಕಿನ ಕಂಟ್ರೋಲ್ ರೂಂ ನಂಬರ್’ಗಳೇನು?

DC Office 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ಕರೋನ ವೈರಸ್ ನಿಯಂತ್ರಣಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಹತ್ತು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಇರಲಿದೆ. ಇನ್ನು, ತಾಲೂಕುವಾರು ಒಂದೊಂದು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಯಾವ್ಯಾವ ಕಂಟ್ರೋಲ್ ರೂಂ ನಂಬರ್ ಏನು? ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ … Read more

ಶಿವಮೊಗ್ಗ ಕರೋನ ರಿಪೋರ್ಟ್, ಮಾರ್ಚ್ 30ರ ಸಂಜೆ ವರೆಗೆ ಎಷ್ಟು ಮಂದಿ ಮೇಲೆ ನಿಗಾ? ಎಷ್ಟು ಜನರ ಪರೀಕ್ಷೆಯಾಗಿದೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 30ರ ಸಂಜೆ 6.45ರವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ಸಮಾಧಾನಕರವಾಗಿದೆ. ಮಾರ್ಚ್ 30ರ ಸಂಜೆ 6.45ರವರೆಗಿನ ರಿಪೋರ್ಟ್ ಹೀಗಿದೆ ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 430 ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 298 ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 9 14 ದಿನ ನಿಗಾ … Read more

ಶಿವಮೊಗ್ಗದಲ್ಲಿ ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ, ವ್ಯಾಪಾರಿ ಮೇಲೆ ಕೇಸ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಮಾರಾಟಗಾರರೊಬ್ಬರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಕ್ಕೆ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ತರಕಾರಿ ಅಂಗಡಿ ಶಿವಮೊಗ್ಗ ತಹಶೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಎಪಿಎಂಸಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಮಹಾನಗರ ಪಾಲಿಕೆಯಿಂದ ಅನುಮತಿಯನ್ನೇ ಪಡೆಯದೆ ಅಂಗಡಿ ನಡೆಸುತ್ತಿರುವುದು ದಾಳಿ ವೇಳೆ ಬೆಳಕಿಗೆ … Read more

ನೀರು, ಬಿಸ್ಕೇಟ್ ತಿಂದು ಬದುಕುತ್ತಿದ್ದೇವೆ, ಈಗ ಉಳಿಯಲು ಜಾಗವಿಲ್ಲ, ರಾತ್ರಿ ಆದ್ಮೇಲೆ ನಡೆದುಕೊಂಡೇ ಊರಿಗೆ ಹೋಗ್ತೀವಿ

300320 Uttara Pradesh Workers during Corona 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ‘ಮೂರು ದಿನದಿಂದ ಬಿಸ್ಕೇಟ್ ತಿಂದು ಬದುಕುತ್ತಿದ್ದೇವೆ. ಉಳಿಯಲು ಜಾಗವಿಲ್ಲ. ಲಾಡ್ಜ್’ನವರು ಹೊರಗೆ ಹೋಗಿ ಎಂದಿದ್ದಾರೆ. ಈಗ ಡಿಸಿ ಆಫೀಸ್ ಮುಂದೆಯೆ ಇರಬೇಕಾಗಿದೆ. ರಾತ್ರಿವರೆಗು ಕಾದು ನೋಡುತ್ತೇವೆ. ಆನಂತರ ನಡೆದುಕೊಂಡೇ ಊರಿಗೆ ಹೋಗುತ್ತೇವೆ..’ ಶಿವಮೊಗ್ಗದಲ್ಲಿ ಗೊಂಬೆ ಮಾರಲು ಬಂದಿದ್ದ ಉತ್ತರ ಪ್ರದೇಶದ ಯುವಕರ ಆತಂಕದ ಮಾತುಗಳಿವು. ಮಾರ್ಚ್ 10ರಂದು ಈ ಯುವಕರು ಶಿವಮೊಗ್ಗಕ್ಕೆ ಬಂದಿದ್ದಾರೆ. ಇನ್ನೇನು ವ್ಯಾಪಾರ ಆರಂಭಿಸಬೇಕು ಅನ್ನುವ ಹೊತ್ತಿಗೆ ಕರೋನ ಲಾಕ್’ಡೌನ್ ಶುರುವಾಗಿತ್ತು. ಹಾಗಾಗಿ … Read more

‘ಬೀದಿಗಿಳಿದರೆ ನೀನು, ನಿಮ್ಮ ಮನೆಗೆ ಬರುತ್ತೇನೆ ನಾನು’, ಶಿವಮೊಗ್ಗ ಗೋಪಿ ಸರ್ಕಲ್’ನಲ್ಲಿ ಕರೋನ ವಾರ್ನಿಂಗ್, ಏನಿದು?

300320 Painting On road Corona 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ಕರೋನ ಕುರಿತು ಜಾಗೃತಿ ಮೂಡಿಸಲು ಶಿವಮೊಗ್ಗದ ಕಲಾವಿದರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ತಮ್ಮ ಕುಂಚದ ಮೂಲಕ ರಸ್ತೆ ಮೇಲೆಯೆ ಜಾಗೃತಿ ಪೇಂಟಿಂಗ್ ಅರಳಿಸಿದ್ದಾರೆ. ರಾಜ್ಯ ನಾಮಫಲಕ ಕಲಾವಿದರ ಸಂಘದ ವತಿಯಿಂದ ಗೋಪಿ ಸರ್ಕಲ್’ನಲ್ಲಿ ಕರೋನ ಜಾಗೃತಿ ಪೇಟಿಂಗ್ ಮಾಡಲಾಗಿದೆ. ಕರೋನ ಮಹಾಮಾರಿ ಜಗತ್ತನ್ನು ಆವರಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಕಾರಣವಿಲ್ಲದೆ ಮನೆಯಿಂದ ಹೊರಗೆ ಸುತ್ತಾಡುವವರಿಗೆ ಎಚ್ಚರಿಕೆ ಸಂದೇಶವನ್ನು ಬರೆಯಲಾಗಿದೆ. ಕಾರಣವಿಲ್ಲದೆ ಹೊರಗೆ ಬಂದರೆ ನೀವು, ನಿನ್ನ ಮನೆಗೆ … Read more

ಸುಳ್ ಸುದ್ದಿಗೆ ಕವಿಗೊಡಬೇಡಿ, ಶಿವಮೊಗ್ಗದಲ್ಲಿ ಕರೋನ ಪಾಸಿಟಿವ್ ಇಲ್ಲ

DC Office 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ಶಿವಮೊಗ್ಗದಲ್ಲಿ ಕರೋನ ಪಾಸಿಟಿವ್ ಬಂದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ವದಂತಿಗಳಿಗೆ ಜನರು ಕಿವಿಗೊಡದೆ, ಮನೆಯಲ್ಲಿ ಸುರಕ್ಷಿತವಾಗಿ ಇರುವಂತೆ ಟ್ವೀಟ್ ಮೂಲಕ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹತ್ತು ಹಂಟಿಂಗ್ ಲೈನ್’ನ ಕಂಟ್ರೋಲ್ ರೂಂ ಇನ್ನು, ಕರೋನ ಸಂಬಂಧ ಮಾಹಿತಿಗಾಗಿ … Read more

ಕರೋನ ರಿಪೋರ್ಟ್ | ಶಿವಮೊಗ್ಗದಲ್ಲಿ ಮಾರ್ಚ್ 29ರ ಸಂಜೆವರೆಗೆ ನಿಗಾದಲ್ಲಿದ್ದವರೆಷ್ಟು? ಲ್ಯಾಬ್’ಗೆ ಕಳುಹಿಸಿದ ಸ್ಯಾಂಪಲ್’ಗಳೆಷ್ಟು?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020 ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 29ರ ಸಂಜೆ 5.30ವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ನೆಮ್ಮದಿ ಮೂಡಿಸಿದೆ. ಮಾರ್ಚ್ 29ರ ಸಂಜೆ 5.30ರವರೆಗಿನ ರಿಪೋರ್ಟ್ ಹೀಗಿದೆ ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 407 ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 283 ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 4 14 ದಿನ … Read more