ಮಂಗನ ಕಾಯಿಲೆಗೆ ಸಾಗರ ತಾಲೂಕಿನ ಕೃಷಿಕ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020 ಸಾಗರ ತಾಲೂಕು ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲುತೋಟ ಗ್ರಾಮದ ವ್ಯಕ್ತಿಯೊಬ್ಬರು ಮಂಗನಕಾಯಿಲೆಗೆ ಮೃತರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೋಮರಾಜ್ ಜೈನ್ ಮೃತರು. ಇವರು ಕೆಎಫ್’ಡಿ ಸೋಂಕಿನಿಂದ ಬಳಲುತ್ತಿದ್ದರು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಕೋಮರಾಜ್ ಜೈನ್, ಅವರು ಎರಡು ದಿನದ ಹಿಂದೆ ಅಲ್ಲಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಆರೋಗ್ಯದಲ್ಲಿ ಪುನಃ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ … Read more

ಕಾರು ಚಾಲಕ, ಪತ್ನಿ ಆತ್ಮಹತ್ಯೆ ಹಿಂದೆ ಬಿಜೆಪಿ ಮುಖಂಡನ ಕೈವಾಡದ ಆರೋಪ, ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

150320 Sagara Protest for Driver Suicide 1

ಶಿವಮೊಗ್ಗ ಲೈವ್.ಕಾಂ | SAGARA | 15 ಮಾರ್ಚ್ 2020 ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರ ಸಾವಿನ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಸಾಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಾಗರ ಪಟ್ಟಣ ಠಾಣೆ ಎದುರು ಪ್ರತಿಭಟನೆ ನಡೆಸಿ, ಸರ್ಕಲ್ ಇನ್ಸ್’ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಗಿದೆ. ಏನಿದು ಪ್ರಕರಣ? ಹುಟ್ಟುಹಬ್ಬದ ದಿನವೇ ಸಾಗರದ ಬಸವನಹೊಳೆ ಡ್ಯಾಂ ಬಳಿ ಕಾರು ಚಾಲಕ ಹರ್ಷಕುಮಾರ್ ಮತ್ತು ಪತ್ನಿ ಅನಿತಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. … Read more

ವಿದ್ಯುತ್ ಸ್ಪರ್ಶ, ಕಂಬದಿಂದ ಬಿದ್ದು ಗುತ್ತಿಗೆ ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಾಯ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA | 15 ಮಾರ್ಚ್ 2020 ವಿದ್ಯುತ್ ಕಂಬದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನಿಗೆ ವಿದ್ಯುತ್ ಶಾಕ್ ತುಗುಲಿ, ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಮತ್ತೊಬ್ಬ ಗುತ್ತಿಗೆ ಕಾರ್ಮಿಕನಿಗೆ ವಿದ್ಯತ್ ಸ್ಪರ್ಶವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುತ್ತಿಗೆ ಕಾರ್ಮಿಕ ಮಾರುತಿ (28) ಮೃತಪಟ್ಟಿದ್ದಾನೆ. ಮಹೇಶ (26)  ಎಂಬಾತನಿಗೆ ವಿದ್ಯುತ್ ಸ್ಪರ್ಶವಾಗಿದೆ. ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಸವೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ಕಂಬದ … Read more

ಶಿವಮೊಗ್ಗ ಲೈವ್ ವರದಿ ಇಂಪ್ಯಾಕ್ಟ್, ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಸೈನಿಕ ಪಾರ್ಕ್, ಏನೇನೆಲ್ಲ ಬದಲಾವಣೆಯಾಗ್ತಿದೆ ನೋಡಿ

150320 Sainika Park in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020 ಶಿವಮೊಗ್ಗದಲ್ಲಿ ಸ್ಥಾಪಿಸಲಾಗಿರುವ ರಾಜ್ಯದ ಮೊದಲ ಸೈನಿಕ ಪಾರ್ಕ್ ದುಸ್ಥಿತಿ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸೈನಿಕ ಪಾರ್ಕಿನ ನಿರ್ವಹಣೆಯನ್ನು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಇದೇ ಯೋಜನೆಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿ, ಪಾರ್ಕಿಗೆ ಹೊಸ ರೂಪ ಕೊಡಲಾಗುತ್ತಿದೆ. ಎಂಬ ಶೀರ್ಷಿಕೆ ಅಡಿಯಲ್ಲಿ, ಫೆಬ್ರವರಿ 27ರಂದು ವರದಿ ಪ್ರಟಕವಾಗಿತ್ತು. ಈಗ ಪಾರ್ಕ್’ನಲ್ಲಿ ಏನೇನೆಲ್ಲ ಅಭಿವೃದ್ಧಿ ಆಗುತ್ತಿದೆ? ಸೈನಿಕ ಪಾರ್ಕ್’ಗೆ ನೀರು … Read more

ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಏಕಾಏಕಿ ಕಟ್ಟಡಗಳ ನೆಲಸಮ, 15 ಲಕ್ಷ ನಷ್ಟ, ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ  | SHIMOGA | 13 ಮಾರ್ಚ್ 2020 ಸ್ಮಾರ್ಟ್ ಸಿಟಿ ಅಧಿಕಾರಿಗಳು ಪೂರ್ವ ಮಾಹಿತಿ ನೀಡದೆ ಕಟ್ಟಡ ಕೆಡವಿದ್ದಾರೆ. ಇದರಿಂದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್’ಗೆ ಸುಮಾರು 15 ಲಕ್ಷ ನಷ್ಟವಾಗಿದೆ ಎಂದು ಆರೋಪಿಸಿ ಸಂಸ್ಥೆಯ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿ, ಪೂರ್ವ ಮಾಹಿತಿ ನೀಡದೆ ಜನವರಿ 30ರಂದು ಏಕಾಏಕಿ ಕಟ್ಟಡ ತೆರವು ಮಾಡಿದ್ದಾರೆ. ಕಾರು ಶೆಡ್, ಶೌಚಾಲಯ ಮತ್ತು ಬಾತ್ ರೂಂಗಳನ್ನು ನೆಲಸಮ … Read more

ಪದವಿ ಮುಗಿದ್ರು ಉದ್ಯೋಗ ಸಿಗಲಿಲ್ಲ ಅನ್ನೋ ಚಿಂತೆ ಬೇಡ, ಕೈ ತುಂಬಾ ಸಂಪಾದನೆಗಿದೆ ಮಾರ್ಗ, ಶಿವಮೊಗ್ಗದಲ್ಲೇ ಮೊದಲು ಈ ಪ್ರಯೋಗ

ಶಿವಮೊಗ್ಗ ಲೈವ್.ಕಾಂ | SHIMOGA | 13 ಮಾರ್ಚ್ 2020 ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕು. ಕೈ ತುಂಬ ಸಂಬಳ ಪಡೆಯುವ ಕೆಲಸಕ್ಕೆ ಸೇರಬೇಕು ಅಂತಾ ಯೋಚಿಸುವ ಪೋಷಕರು..! ಪ್ರತಿ ತಿಂಗಳು ಲಕ್ಷ ಲಕ್ಷ ಸಂಪಾದಿಸಬೇಕು ಅಂತಾ ಕನಸು ಕಾಣುವ ಯುವ ಸಮೂಹ..! ಶಿಕ್ಷಣ ಮುಗಿಯುತ್ತಿದ್ದಂತೆ ಕೆಲವರನ್ನು ಹೊರತು ಎಲ್ಲ ಪದವೀಧರರಿಗೂ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಕೈ ತುಂಬ ಸಂಬಳದ ಕನಸು ಕನಸಾಗಿಯೇ ಉಳಿದು ಹೋಗುತ್ತಿದೆ. ಆದರೆ ಈ ಕನಸು ನನಸು ಮಾಡಿಕೊಳ್ಳಲು ಮಾರ್ಗವಿದೆ ಅಂತಾ ವಿದ್ಯಾರ್ಥಿಗಳಿಗೆ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಡೀ ದಿನ ಉಪವಾಸ ಸತ್ಯಾಗ್ರಹ

ಶಿವಮೊಗ್ಗ ಲೈವ್.ಕಾಂ | SHIMOGA | 12 ಮಾರ್ಚ್ 2020 ಜನವಿರೋಧಿ, ಸಂವಿಧಾನ ವಿರೋಧಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ ಮತ್ತು ಎನ್.ಪಿ.ಆರ್’ಗಳು ಜಾರಿಗೊಳಿಸಬಾರದು ಎಂದು ಆಗ್ರಹಿಸಿ, ಶಿವಮೊಗ್ಗದಲ್ಲಿ ಇವತ್ತು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಯಿಂಟ್ ಆಕ್ಷನ್ ಕಮಿಟಿ ಮತ್ತು ಸಂವಿಧಾನ ಉಳಿಸಿ ವೇದಿಕೆ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್’ಗಳ … Read more

ದುರ್ಗಿಗುಡಿ ರಾಘವೇಂದ್ರ ಮಠದ ಮುಂದಿದ್ದ ಭಿಕ್ಷುಕರಿಗೆ ಮಾಸ್ಕ್ ವಿತರಣೆ

120320 Mark Distribution in Durgigudi 1

ಶಿವಮೊಗ್ಗ ಲೈವ್.ಕಾಂ | SHIMOGA | 12 ಮಾರ್ಚ್ 2020 ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಿಸಿದ್ದಕ್ಕೆ ಇವತ್ತು ಅವರ ಅಭಿಮಾನಿ ಬಳಗ, ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ಬಳಿಕ ಮಠದ ಮುಂದೆ ಕುಳಿತಿದ್ದ ಭಿಕ್ಷುಕರಿಗೆ ಮಾಸ್ಕ್ ವಿತರಿಸಿದರು. ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ನೇತೃತ್ವದಲ್ಲಿ ಭಿಕ್ಷಕರು ಮತ್ತು ಬಡವರಿಗೆ ಮಾಸ್ಕ್ ವಿತರಿಸಲಾಯಿತು. ಕರೋನ ಭೀತಿಯಿಂದಾಗಿ ಎಲ್ಲರು ಮಾಸ್ಕ್ ಧರಿಸುತ್ತಿದ್ದಾರೆ. ಬಡವರಿಗೆ ಮಾಸ್ಕ್ ವಿತರಿಸುವ ಅಗತ್ಯವಿದೆ. ಹಾಗಾಗಿ ಮಾಸ್ಕ್ ನೀಡುತ್ತಿದ್ದೇವೆ ಎಂದು ಬಳಗದ … Read more

ಜಲಾನಯನ ಪ್ರದೇಶ ಪುನಶ್ಚೇತನಕ್ಕೆ ಶಿವಮೊಗ್ಗದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಭಾಗವಹಿಸ್ತಾರೆ? ಎನೆಲ್ಲ ಚರ್ಚೆಯಾಗುತ್ತೆ?

KS-Eshwarappa-DC-Office-Meeting

ಶಿವಮೊಗ್ಗ ಲೈವ್.ಕಾಂ | SHIMOGA | 12 ಮಾರ್ಚ್ 2020 ನದಿ ಹಾಗೂ ಅದರ ಸುತ್ತಲಿನ ಜಲಾನಯನ ಪ್ರದೇಶದ ಪುನಶ್ಚೇತನ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದಲ್ಲಿ ಶಿವಮೊಗ್ಗ ಸೇರಿದಂತೆ 9 ಜಿಲ್ಲೆಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಬಗ್ಗೆ ಮಾಹಿತಿ … Read more

ಲಂಡನ್’ನಿಂದ ಬಂದಿರುವ ಬಸವಣ್ಣನ ಪ್ರತಿಮೆ ಶಿವಮೊಗ್ಗದಲ್ಲಿ ಪ್ರತಿಷ್ಠಾಪನೆಗೆ ಆಗ್ರಹ

ಶಿವಮೊಗ್ಗ ಲೈವ್.ಕಾಂ  | SHIMOGA | 12 ಮಾರ್ಚ್ 2020 ಲಂಡನ್’ನಿಂದ ಶಿವಮೊಗ್ಗಕ್ಕೆ ತರಿಸಲಾಗಿರುವ ಬಸವಣ್ಣನ ಪುತ್ಥಳಿಯನ್ನು ಕೂಡಲೇ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಮಹಾನಗರ ಪಾಲಿಕೆ ಮೇಯರ್’ಗೆ ಇವತ್ತು ಮನವಿ ಸಲ್ಲಿಸಲಾಯಿತು. ಒಂದೂವರೆ ವರ್ಷದ ಹಿಂದೆ ಅನಿವಾಸಿ ಭಾರತೀಯ ಡಾ.ನೀರಜ್ ಪಟೇಲ್ ಅವರು, ಬಸವೇಶ್ವರ ಪ್ರತಿಮೆಯನ್ನು ಕೊಡುಗೆಯಾಗಿ ನೀಡಿದರು. ಗಾಂಧಿ ಪಾರ್ಕ್ ಮುಂಭಾಗ, ಡಿವಿಎಸ್ ಕಾಲೇಜು ಸರ್ಕಲ್’ನಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿತ್ತು. ಇದಕ್ಕಾಗಿ ಮಹಾನಗರ ಪಾಲಿಕೆ ವತಿಯಿಂದ 25 ಲಕ್ಷ … Read more