ಮಾಜಿ ಸೈನಿಕರೊಬ್ಬರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ, ಎಲ್ಲಿ ಗೊತ್ತಾ?

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020 ಮಾಜಿ ಸೈನಿಕ ರಾಘವೇಂದ್ರ ಮತ್ತು ರಾಘವ್ ಸಿಂಹ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಮೂರು ದಿನ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ಸ್ಪರ್ಧಾಕಾಂಕ್ಷಿಗಳ ಅನುಕೂಲಕ್ಕಾಗಿ ದುರ್ಗಿಗುಡಿ 3ನೇ ತಿರುವಿನಲ್ಲಿರುವ ಅನುದಾನಿತ ನೌಕರರ ಸಹಕಾರ ಸಂಘ ಕಟ್ಟಡದಲ್ಲಿರುವ ಅಧಿಕಾರಿ ಅಕಾಡೆಮಿಯಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಕೆಎಎಸ್, ಎಪ್’ಡಿಎ, ಎಸ್’ಡಿಎ, ಪಿಎಸ್ಐ, ಪಿಸಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಶಿಕಾರಿಪುರದ ಸಾಧನ ಅಕಾಡೆಮಿಯ … Read more

ಶಿವರಾತ್ರಿಗೆ ಅದ್ಧೂರಿ ಸಿದ್ಧತೆ, ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ನೆಹರೂ ಸ್ಟೇಡಿಯಂನಲ್ಲಿ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪಂದ್ಯ

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಶಿವರಾತ್ರಿ ಹಿನ್ನೆಲೆ ಜಿಲ್ಲೆಯ ವಿವಿಧೆಡೆಯ ಶಿವ ದೇಗುಲಗಳಲ್ಲಿ ನಾಳೆ ವಿಶೇಷ ಪೂಜೆ ಆಯೋಜಿಸಲಾಗಿದೆ. ನಗರದ ವೀರಶೈವ ಕಲ್ಯಾಣ ಮಂದಿರ ಬಳಿಯ ಶಿವನ ದೇಗುಲ, ವಿನೋಬನಗರದ ಶಿವಾಲಯ ಅರೆಕೆರೆ ದೇಗುಲಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಉದ್ಭವ ಬಸವೇಶ್ವರ ರಥೋತ್ಸವ ಪುರದಾಳು ಗ್ರಾಮದಲ್ಲಿ ಉದ್ಭವ ಬಸವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿದೆ. ವಿಶೇಷ ಪೂಜೆ ಹಿನ್ನೆಲೆ ದೇವಸ್ಥಾನದಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಆಯನೂರು … Read more

ಶಿವಮೊಗ್ಗ ಕೋರ್ಟ್’ನಲ್ಲಿ ಜಡ್ಜ್ ಮುಂದೆಯೇ ವಕೀಲರಿಗೆ ‘ನೀವು ಪಾಕಿಸ್ತಾನದವರು’ ಎಂದ ಸಾಕ್ಷಿ, ಮುಂದೇನಾಯ್ತು ಗೊತ್ತಾ?

Shivamogga-Court-General-Image

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಕೋರ್ಟ್’ನಲ್ಲಿ ಸಾಕ್ಷಿ ಹೇಳಲು ಬಂದು ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ವಕೀಲರಿಗೆ ‘ನೀವು ಪಾಕಿಸ್ತಾನದವರು’ ಎಂದು ಆರೋಪಿಸಿ, ಜೈಲು ಸೇರಿದ್ದಾನೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಇವತ್ತು ಮಧ್ಯಾಹ್ನ ಘಟನೆ ನಡೆದಿದೆ. ಶಿವಮೊಗ್ಗದ 3ನೇ JMFC ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿ ಹೇಳಲು ಬಂದಿದ್ದ ಶಿವಮೊಗ್ಗದ ಸಿದ್ಲಿಪುರದ ಶಂಕರ್ ಎಂಬಾತನನ್ನು ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ವಕೀಲ ನಯಾಜ್ ಅಹಮ್ಮದ್ ಅವರು ಪ್ರಕರಣ ಸಂಬಂಧ ಪ್ರಶ್ನೆ ಕೇಳಲು ಆರಂಭಿಸಿದರು. ಈ ವೇಳೆ … Read more

ಮ್ಯಾಕ್ಸ್ ಆಸ್ಪತ್ರೆ ಮುಂದೆ 500 ರೂ. ಹಣದ ಕಂತೆ ಬೀಳಿಸಿಕೊಂಡಿದ್ದ ವ್ಯಕ್ತಿ ಪತ್ತೆ, ಯಾರದು? ಪೊಲೀಸರು ಖಚಿತಪಡಿಸಿಕೊಂಡಿದ್ದು ಹೇಗೆ?

200220 Money Returned by Jayanagara Police 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಮ್ಯಾಕ್ಸ್ ಆಸ್ಪತ್ರೆ ಬಳಿ ದೊರೆತೆ ಹತ್ತು ಸಾವಿರ ರೂಪಾಯಿ ಹಣವನ್ನು ವಾರಸುದಾರರಿಗೆ ಒಪ್ಪಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದರು. ಹಣ ಯಾರಿಗೆ ಸೇರಿದ್ದು? ಹತ್ತು ಸಾವಿರ ರುಪಾಯಿ ಹಣವು ತೀರ್ಥಹಳ್ಳಿ ತಾಲೂಕು ಬಾಳೆಹಿತ್ಲು ಗ್ರಾಮದ ಉದಯ್ ಕುಮಾರ್ ಎಂಬುವವರಿಗೆ ಸೇರಿದೆ. ಇದನ್ನು ಖಚಿತಪಡಿಸಿಕೊಂಡ ಪೊಲೀಸರು, ಉದಯ್ ಕುಮಾರ್ ಅವರಿಗೆ ಇವತ್ತು ಹಣ ಹಿಂತಿರುಗಿಸಿದ್ದಾರೆ. ಹಣ ಕಳೆದುಕೊಂಡಿದ್ದು ಹೇಗೆ? … Read more

ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಫ್ರೀ ಆರೋಗ್ಯ ತಪಾಸಣೆ, ಆಯುಷ್ಮಾನ್ ಕಾರ್ಡ್ ಉಚಿತ ವಿತರಣೆ, ಯಾವತ್ತು? ಎಲ್ಲಿ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ‌78 ನೇ ಜನ್ಮ ದಿನದ ಪ್ರಯುಕ್ತ ವೀರಶೈವ ಕಲ್ಯಾಣ ಮಂದಿರದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಪ್ರೇರಣಾ ಎಜುಕೇಷನಲ್ ಮತ್ತು ಸೋಷಿಯಲ್ ಟ್ರಸ್ಟ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಫೆಬ್ರವರಿ 27 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಆರೋಗ್ಯ ಶಿಬಿರ ನಡೆಯಲಿದೆ. … Read more

ಕುವೆಂಪು ವಿಶ್ವವಿದ್ಯಾಲಯದಲ್ಲಿ ಏಕಾಂಗಿಯಾಗಿ ಸತ್ಯಾಗ್ರಹ ಆರಂಭಿಸಿದ ಮಹಿಳಾ ಅಧಿಕಾರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಫೆಬ್ರವರಿ 2020 ಬಡ್ತಿಯಲ್ಲಿ ವಂಚನೆಯಾಗಿರುವುದನ್ನು ವಿರೋಧಿಸಿ ಕುವೆಂಪು ವಿಶ್ವವಿದ್ಯಾಲಯ ಖರೀದಿ ವಿಭಾಗದ ಮೇಲ್ವಿಚಾರಕಿ ಪದ್ಮಲತಾ ಅವರು ವಿಶ್ವವಿದ್ಯಾಲಯದ ಕುವೆಂಪು ಶತಮಾನೋತ್ಸವ ಭವನದ ಮುಂಭಾಗದಲ್ಲಿ ಬುಧವಾರದಿಂದ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೆ ಬಡ್ತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಇದರಲ್ಲಿ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಮುಂಬಡ್ತಿ ಸಿಗದೆ ವಂಚನೆಯಾಗಿದೆ, ತಮಗಿಂತ ಕಿರಿಯರಿಗೆ ಮುಂಬಡ್ತಿ ನೀಡಲಾಗಿದೆ. ಇದರ ಬಗ್ಗೆ ಹಲವು ಬಾರಿ ಕುಲಪತಿ, ಕುಲಸಚಿವರಿಗೆ ಮನವಿ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು … Read more

ಸಾಗರದಲ್ಲಿ ಗಂಡನ ಮನೆ ಸೇರಿದ ಮಾರಿಕಾಂಬೆ, ದರ್ಶನಕ್ಕೆ ಜನವೊ ಜನ, ವಸ್ತು ಪ್ರದರ್ಶನಕ್ಕೆ ಚಾಲನೆ, ಸರ್ಕಸ್ ಉದ್ಘಾಟಿಸಿದ್ರು ಮಾಜಿ ಮಿನಿಸ್ಟರ್

ಶಿವಮೊಗ್ಗ ಲೈವ್.ಕಾಂ | SAGARA | 19 ಫೆಬ್ರವರಿ 2020 ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಾರಿಕಾಂಬ ದೇವಿ ಮೂರ್ತಿಯನ್ನು ಗಂಡನ ಮನೆಗೆ ತರಲಾಗಿದೆ. ಈ ವೇಳೆ ಅದ್ಧೂರಿಯಾದ ರಾಜಬೀದಿ ಉತ್ಸವದ ನಡೆಯಿತು. ಮಂಗಳವಾರ ರಾತ್ರಿ 10ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ಹಾಗೂ ಹೆಣ್ಣು ಒಪ್ಪಿಸುವ ವಿಧಿವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸವದಲ್ಲಿ ಭಾಗಿಯಾದರು. ಶ್ರೀ ದೇವಿಯ ದಂಡಿನ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಜನರನ್ನು ಆಕರ್ಷಿಸಿತು. ಕಣ್ಸೆಳೆದ ಸಾಂಸ್ಕೃತಿಕ ಕಲಾ ತಂಡಗಳು … Read more

ಶಿವಮೊಗ್ಗ ಮಾರಿಕಾಂಬ ಜಾತ್ರೆ, ರಕ್ಷಣಾಧಿಕಾರಿ ಜೊತೆ ಸಮಿತಿ ಸಭೆ, ಪೊಲೀಸರು ಏನೇನೆಲ್ಲ ಕ್ರಮ ಕೈಗೊಂಡಿದ್ದಾರೆ ಗೊತ್ತಾ?

190220 Marikamba Police Security copy 1

ಶಿವಮೊಗ್ಗ ಲೈವ್.ಕಾಂ | SHIMOGA | 19 ಫೆಬ್ರವರಿ 2020 ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಾಂತಿ ಮತ್ತು ಸಂಭ್ರಮದಿಂದ ಯಶಸ್ವಿಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜ್ ಹೇಳಿದರು. ಇಂದು ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿಯೊಂದಿಗೆ ಜಾತ್ರೆ ನಿಮಿತ್ತ ಬಂದೋಬಸ್ತ್  ಕುರಿತು ಸಮಾಲೋಚನೆ ನಡೆಸಿದ ಅವರು, ಜಾತ್ರೆ ಜನರ ಸಂಭ್ರಮ ಮತ್ತು ಸಂತೋಷವನ್ನು ಕೊಡುವ ಹಬ್ಬವಾಗಿದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇಬ್ಬರು … Read more

ಮಧುಗಿರಿ ಮೋದಿ ಬಂಧನಕ್ಕೆ ಶಿವಮೊಗ್ಗದಲ್ಲಿ ಒತ್ತಾಯ, ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 19 ಫೆಬ್ರವರಿ 2020 ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರಿಗೆ ಅವಾಚ್ಯ ಶಬ್ದ ಬಳಸಿ ಅಗೌರವ ತೋರಿದ ಉಲ್ಲಾಳದ ಮಧುಗಿರಿ ಮೋದಿ ಎಂಬಾತನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಸುನ್ನಿ ಜಾಮಿಯಾ ಮಸ್ಜಿದ್ ಸುನ್ನಿ ಜಮೈತುಲ್ ಉಲ್ಮ ಕಮಿಟಿ ವತಿಯಿಂದ ಪ್ರತಿಭಟನ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಮಿಟಿ ಸದಸ್ಯರು, ಮಧುಗಿರಿ ಮೋದಿ ಎಂಬಾತ ಫೇಸ್’ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ … Read more

ಬಾರ್ ಅಂಡ್ ರೆಸ್ಟೋರೆಂಟ್ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು, ಮಕ್ಕಳು, ಬೀದಿಗಿಳಿದು ಪ್ರತಿಭಟಿಸಿದ ಗ್ರಾಮಸ್ಥರು

ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020 ತಾಳಗುಪ್ಪ ಗ್ರಾಮದಲ್ಲಿ ಆರಂಭಿಸಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಆಗ್ರಹಿಸಿ ಸ್ತ್ರೀಶಕ್ತಿ ಸಂಘ, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಗ್ರಾಮದ ವಸತಿ ಪ್ರದೇಶದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರು ಸ್ಥಳೀಯರ ವಿರೋಧದ ನಡುವೆಯೂ ಮದ್ಯದಂಗಡಿಆರಂಭಿಸಿದ್ದಾರೆ. ಬಾರ್ ಲೈಸನ್ಸ್ ರದ್ದು ಮಾಡುವಂತೆ ಈ ಹಿಂದೆ ಡಿಸಿಗೆ ಗ್ರಾಪಂ ಮೂಲಕ ಮನವಿ ಸಲ್ಲಿಸಲಾಗಿತ್ತು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಬಕಾರಿ ಇಲಾಖೆ ಪರವಾನಗಿ ನೀಡಿದೆ ಎಂದು ಪ್ರತಿಭಟನಾಕಾರರು ದೂರಿದರು. ಜನವಸತಿ ಪ್ರದೇಶದಲ್ಲಿ … Read more