ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಇದೇ ಮೊದಲು ಇಂತಹ ಡಿಫರೆಂಟ್ ಪ್ರಯೋಗ, ಲಕ್ಷ ಲಕ್ಷ ಜನಕ್ಕೆ ಆಗಲಿದೆ ಉಪಯೋಗ, ಏನದು ಗೊತ್ತಾ?

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA | 03 ಫೆಬ್ರವರಿ 2020 ಜೀವನಕ್ಕೆ ಅಂತಾ ಟೂರಿಸ್ಟ್ ವಾಹನ ಕೊಂಡುಕೊಂಡಿದ್ದಾರೆ ಮಂಜುನಾಥ್. ಆದರೆ ಕೆಲವೊಮ್ಮೆ ಬ್ಯಾಂಕ್ ಸಾಲದ ತಿಂಗಳ ಕಂತು ಕಟ್ಟಲು ಕಷ್ಟ ಕಷ್ಟ ಅನಿಸುತ್ತೆ. ಆದರೂ ಪ್ರತಿದಿನ ಮನೆಯಿಂದ ಕಾರು ಸ್ಟಾಂಡ್’ಗೆ ತಲುಪುತ್ತೆ. ಅಲ್ಲಿಂದ ಸಂಜೆ ವಾಪಸ್ ಬರುತ್ತೆ. ಸ್ಟಾಂಡ್ ಮತ್ತು ಮನೆ ನಡುವಿನ ಓಡಾಟಕ್ಕೆ ಖರ್ಚಾದ ಪೆಟ್ರೋಲ್’ನ ಹಣವನ್ನೇ ಉಳಿಸಿದ್ದರೂ ಇಎಂಐ ಕಟ್ಟಬಹುದಿತ್ತಾ ಅಂತಾ ಹಲವು ಬಾರಿ ಯೋಚಿಸಿದ್ದಾರೆ ಮಂಜುನಾಥ್. ಫ್ಯಾಮಿಲಿ ಜೊತೆಗೆ ಸಿಗಂದೂರಿಗೆ ಹೋಗಬೇಕು. ಆ … Read more

ಮಿಳಘಟ್ಟದಲ್ಲಿ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯದಂತೆ ಒತ್ತಾಯ, ಮೇಯರ್’ಗೆ ಮನವಿ

ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020 ಪಾಲಿಕೆ ವಾರ್ಡ್ ನಂಬರ್ 27ರ ಮಿಳಘಟ್ಟ ಬುದ್ಧ ನಗರದಲ್ಲಿರುವ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘದ ವತಿಯಿಂದ ಇಂದು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು. KSRTC ಬಸ್ ಸ್ಟಾಂಡ್ ಹಿಂಭಾಗದ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಶೌಚಾಲಯ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ 5 ಸಾವಿರ ಕೂಲಿಕಾರ್ಮಿಕರು ಇದ್ದಾರೆ. ಇದರಲ್ಲಿ ಸುಮಾರು … Read more

ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ, ಸರ್ಕಾರಕ್ಕೆ ಮನವಿ

ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020 ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿವಿ ಮತ್ತು ಶಾಹಿನ್‌ ಬಾಗ್’ನಲ್ಲಿ ಎನ್.ಆರ್.ಸಿ, ಸಿ.ಎ.ಎ, ಎನ್.ಪಿ.ಆರ್, ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗುಂಡುಹಾರಿಸಿದ ಆರೋಪಿಗಳ ವಿರುದ್ಧ  ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಇವತ್ತು ಪೀಸ್ ಆರ್ಗನೈಸೇಶನ್ ಮಹಿಳಾ ಘಟಕದ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಂತಿಯುತ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಏಕಾಏಕಿಯಾಗಿ ರಾಮ್ ಭಕ್ತ ಗೋಪಾಲ್ ಎಂಬಾತ, ಪ್ರಚೋದನಕಾರಿ ಹೇಳಿಕೆ ಕೂಗುತ್ತ … Read more

ಹೊಸನಗರದ ಸೋನಲೆಯಲ್ಲಿ ಅಹೋರಾತ್ರಿ ಧರಣಿಯ ವಾರ್ನಿಂಗ್, ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ಶುರು

030220 Sonale Protest for doctor 1

ಶಿವಮೊಗ್ಗ ಲೈವ್.ಕಾಂ | HOSANAGARA | 3 ಫೆಬ್ರವರಿ 2020 ಕರ್ತವ್ಯನಿರತ ವೈದ್ಯರನ್ನು ಬೇರೆಡೆಗೆ ನಿಯೋಜಿಸಿರುವುದರನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಹೊಸನಗರ ತಾಲೂಕು ಸೋನಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಾರುತಿ ಅವರನ್ನು ರಿಪ್ಪನ್’ಪೇಟೆ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇದರ ವಿರುದ್ಧ ಸೋನಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು ಪ್ರಾತಿಭಟನೆ ನಡೆಸುತ್ತಿದ್ದಾರೆ. ಸೋನಲೆ ಸುತ್ತಮುತ್ತಲು ಇವರೊಬ್ಬರೇ ವೈದ್ಯರಿದ್ದಾರೆ. ಇವರನ್ನು ಈಗ ರಿಪ್ಪನ್’ಪೇಟೆಗೆ ನಿಯೋಜಿಸಿದರೆ ಈ ಭಾಗದ ಗ್ರಾಮಸ್ಥರಿಗೆ … Read more

ಅಪರಿಚಿತ ವಾಹನ ಡಿಕ್ಕಿ, ಭದ್ರಾವತಿ ಪೇಪರ್ ಟೌನ್ ನಿವಾಸಿ ಸ್ಥಳದಲ್ಲೆ ಸಾವು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 3 ಫೆಬ್ರವರಿ 2020 ಅಪರಿಚಿತ ವಾಹನ ಡಿಕ್ಕಿ ಹೊಡೆದು ಭದ್ರಾವತಿ ಪೇಪರ್ ಟೌನ್ ನಿವಾಸಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಜ್ಜಿನಿಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದೆ. ಕೇಬಲ್ ಮಂಜುನಾಥ ಗೌಡ (35) ಮೃತ ದುರ್ದೈವಿ. ಭದ್ರಾವತಿ ತಾಲೂಕು ಅಂತರಗಂಗೆಯಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಘಟನೆ ಸಂಭವಿಸಿದೆ. ಬೈಕ್’ನಲ್ಲಿ ಮನೆಗೆ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪೇಪರ್ … Read more

ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ರಾತ್ರಿ ಯುವಕನಿಗೆ ಚಾಕು ಇರಿತ, ಕ್ಷುಲಕ ಕಾರಣ ಗೆಳೆಯರ ನಡುವೆ ಕಿರಿಕ್

police jeep

ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020 ಯುವಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಒಬ್ಬನಿಗೆ ಚಾಕು ಇರಿಯಲಾಗಿದೆ. ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಇಲಿಯಾಸ್ ನಗರದ  ಮಹಮದ್ ಅವೇಜ್ (18) ಚಾಕು ಇರಿತಕ್ಕೆ ಒಳಗಾದವನು. ಈತನನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಮಹಮದ್ ಅವೇಜ್, ಅಂಜುಮನ್ ಎಂಬಾತನೊಂದಿಗೆ ಅಂಗಡಿಯೊಂದರ ಮುಂದೆ ಮಾತನಾಡುತ್ತಿ ನಿಂತಿದ್ದ. ಈ ವೇಳೆ ಇಬ್ಬರ ನಡುವೆ … Read more

ಕಾಮಗಾರಿ ಗುದ್ದಲಿ ಪೂಜೆ ಸ್ಥಳದಲ್ಲಿದ್ದ ಫ್ಲೆಕ್ಸ್’ನಲ್ಲಿ ಕಣ್ಮರೆಯಾದ ಫೋಟೊ, ಮಾಜಿ ಮೇಯರ್ ಗರಂ

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಅನುಪಿನಕಟ್ಟೆಯ ಕಸ ವಿಲೇವಾರಿ ಘಟಕದಿಂದ ಪುರದಾಳು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ಇವತ್ತು ಗುದ್ದಲಿ ಪೂಜೆ ನೆರವೇರಿಸಲಾಯಿತು. ಆದರೆ ಈ ವೇಳೆ ಫ್ಲೆಕ್ಸ್’ನಲ್ಲಿ ಫೋಟೊ ಬಳಸದೆ ಇರುವುದಕ್ಕೆ ಶಿವಮೊಗ್ಗದ ಮಾಜಿ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪ ಮೇಯರ್ ಚನ್ನಬಸಪ್ಪ ಅವರು ಗುದ್ದಲಿ ಪೂಜೆ … Read more

ಲ್ಯಾಪ್’ಟಾಪ್ ವಿತರಿಸದ ಸರ್ಕಾರದ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಪದವಿಯ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಕೂಡಲೇ ಲ್ಯಾಪ್’ಟಾಪ್ ವಿತರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಸರ್ಕಾರ ಘೋಷಿಸಿದಂತೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್ ವಿತರಿಸಬೇಕಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಲ್ಯಾಪ್’ಟಾಪ್ ವಿತರಣೆ ಮಾಡಿರಲಿಲ್ಲ. ಹಾಗಾಗಿ … Read more

ಅಂತ್ಯ ಸಂಸ್ಕಾರಕ್ಕೆ ಬಂದವನ ಮೇಲೆ ಅನುಮಾನ, ಧರ್ಮದೇಟು ಕೊಟ್ಟ ಮೇಲೆ ಹೊರಬಿತ್ತು ಸತ್ಯ, ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್’ಗೆ ಟ್ವಿಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಶಿವಮೊಗ್ಗದ ಗೋಂಧಿ ಚಟ್ನಳ್ಳಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಬ್ಬರು ಯುವಕರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಗೋಂಧಿ ಚಟ್ನಳ್ಳಿಯ ಸುಪ್ರಿಯಾ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಸುಪ್ರಿಯಾ ಅಂತ್ಯ ಸಂಸ್ಕಾರದ ವೇಳೆ ಆಗಮಿಸಿದ್ದ ಯುವಕನೊಬ್ಬನ … Read more

ವರದಕ್ಷಿಣೆಗಾಗಿ ಪತ್ನಿಯ ಕೊಲೆ ಮಾಡಿದ ಭದ್ರಾವತಿಯ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಜೈಲು, ದಂಡದ ಮೊತ್ತ ಎಷ್ಟು ಗೊತ್ತಾ?

Shivamogga Court 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪತಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಭದ್ರಾವತಿ ತಾಲೂಕು ಮಾಳೇನಹಳ್ಳಿಯ ಸತೀಶ್ (30) ಶಿಕ್ಷೆಗೆ ಒಳಗಾದವ. ಈತ 2015ರಲ್ಲಿ ಪತ್ನಿ ರುಕ್ಮಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿದ್ದ. ಈ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭದ್ರಾವತಿ ಉಪವಿಭಾಗದ … Read more