ಕಪ್ಪು ಪ್ಯಾಕೆಟ್‌ ಕೇಸ್‌, ಮೂವರು ಅರೆಸ್ಟ್‌, ಏನಿದು ಪ್ರಕರಣ? ಯಾರಿವರು ಬಂಧಿತರು?

Three-arrest-in-Black-Packet-case

ಶಿವಮೊಗ್ಗ: ನಗರದ ಸೋಗಾನೆ ಕೇಂದ್ರ ಕಾರಾಗೃಹದ ಆವರಣದೊಳಗೆ ಮೊಬೈಲ್ ಮತ್ತು ಮಾದಕ ವಸ್ತುಗಳನ್ನು ಎಸೆದಿದ್ದ ಮೂವರು ಆರೋಪಿಗಳನ್ನು (gang) ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜೈಲಿನ ಗೋಡೆಯ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ಒಳಕ್ಕೆ ಎಸೆಯುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜನವರಿ 30ರಂದು ಅಪರಿಚಿತ ವ್ಯಕ್ತಿಗಳು ಕೇಂದ್ರ ಕಾರಾಗೃಹದ ಒಳಗೆ ಕಪ್ಪು ಬಣ್ಣದ ಗಮ್ ಟೇಪ್‌ನಿಂದ ಪ್ಯಾಕೆಟ್‌ ಎಸೆದಿದ್ದರು. ಅದರ ಒಳಗೆ ಮೊಬೈಲ್ ಫೋನ್‌ಗಳು, ಸಿಗರೇಟ್ ಹಾಗೂ ಬೀಡಿಗಳ ಕಂತೆಗಳನ್ನು ಇದ್ದವು. ಈ ಬಗ್ಗೆ ಕಾರಾಗೃಹದ … Read more

ಮದ್ಯ ಸೇವಿಸಿ ಜೈಲಿಗೆ ಬಂದ ಕೈದಿ, ಬ್ಯಾಗ್‌ ಚೆಕ್‌ ಮಾಡಿದಾಗ ಸಿಕ್ತು ಓ.ಟಿ. ಪೌಚ್‌, ಏನಿದು ಪ್ರಕರಣ?

Shimoga-Central-Jail-Prison

ಶಿವಮೊಗ್ಗ: ಪೆರೋಲ್ ರಜೆ ಮುಗಿಸಿ ಕಾರಾಗೃಹಕ್ಕೆ ಮರಳುತ್ತಿದ್ದ ಸಜಾ ಬಂದಿಯೊಬ್ಬ (convict) ಕೇಂದ್ರ ಕಾರಾಗೃಹದೊಳಗೆ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೈದಿ ಮೋಹನ್ ಕುಮಾರ ಎಂಬಾತ ಪೆರೋಲ್ ಮುಗಿಸಿ ಜೈಲಿಗೆ ವಾಪಸ್ಸಾಗುವಾಗ ಮುಖ್ಯದ್ವಾರದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ಗಳಲ್ಲಿ ಪೊಲೀಸರಿಂದ ದಿಢೀರ್‌ ತಪಾಸಣೆ, ಏನೆಲ್ಲ ಪರಿಶೀಲಿಸಿದರು? ಜೈಲಿನ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್‌ನಲ್ಲಿ ಕರ್ತವ್ಯದಲ್ಲಿದ್ದ KSISF ಸಿಬ್ಬಂದಿ, ಕೈದಿ ಮೋಹನ್ ಕುಮಾರನನ್ನು ತಪಾಸಣೆ ನಡೆಸಿದರು. ಆತ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ … Read more

ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

Shimoga-Jail-inmate-breathed-last

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಬಸವ (78) ಎಂಬ ಕೈದಿ (jail Inmate) ಇಂದು ಬೆಳಗಿನ ಜಾವ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ವಯೋಸಹಜ ಕಾಯಿಲೆಗಳು ಹಾಗೂ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಜನವರಿ 12ರ ರಾತ್ರಿ ಆರೋಗ್ಯ ಹದಗೆಟ್ಟಿದ್ದರಿಂದ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ 3 ಗಂಟೆ ಹೊತಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕರು … Read more

ಕೈದಿ ಭೇಟಿಗೆ ಬಂದವರೆ ಅರೆಸ್ಟ್‌, ಒಂದು ತಿಂಗಳ ಅಂತರದಲ್ಲಿ ಇದು ಮೂರನೇ ಕೇಸ್‌, ಆಗಿದ್ದೇನು?

two-arrested-in-Shivamogga-central-prison.

ಶಿವಮೊಗ್ಗ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯ ಭೇಟಿಗೆ ಬಂದಿದ್ದ ಇಬ್ಬರು ಈಗ ಜೈಲುಪಾಲಾಗಿದ್ದಾರೆ. ಜೈಲು ಭದ್ರತೆಯನ್ನು ಕಣ್ಣಿಗೆ ಮಣ್ಣೆರಚಿ (smuggling) ತಮ್ಮ ಕಾರ್ಯ ಸಾಧನೆ ಮಾಡಬಹುದು ಅಂದುಕೊಂಡಿದ್ದವರೆ ಈಗ ಕಂಬಿ ಹಿಂದೆ ಸರಿಯುವಂತಾಗಿದೆ. ಏನಿದು ಕೇಸ್‌? ಶಿವಮೊಗ್ಗದ ಕೇಂದ್ರ ಕಾರಾಗೃಹದ ವಿಚರಣಾಧೀನ ಕೈದಿ ಸೈಯದ್‌ ವಾಸೀಮ್‌ನ ಭೇಟಿಗೆ ಬಂದಿದ್ದ ಮೊಹಮದ್‌ ಅಕ್ಬರ್‌ ಮತ್ತು ಅಜ್ಗರ್‌ ಅಲಿ ಈಗ ಬಂಧಿತರಾಗಿದ್ದಾರೆ. ವಾಸೀಮ್‌ ಭೇಟಿ ವೇಳೆ ಆತನಿಗೆ ಕೊಡಲು ಹಣ್ಣು, ಬಟ್ಟೆಗಳನ್ನು ತಂದಿದ್ದರು. ಜೈಲು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದಾಗ ಗಾಂಜಾ … Read more