ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು, ಆಗಿದ್ದೇನು?

Shimoga-Central-Jail-Prison

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ (Central Jail) ಕೈದಿಗಳ ಎರಡು ಗುಂಪುಗಳ ಮಧ್ಯೆ ಜಗಳವಾಗಿದ್ದು, ಕೆಲವು ಕೈದಿಗಳ ಮೇಲೆ ಹಲ್ಲೆ ನಡೆದಿದೆ. ಶರಾವತಿ ವಿಭಾಗದ ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಎಂಬುವವರು ಟವರ್ ವಿಭಾಗದ ಬಳಿ ಬಂದಾಗ ಅನ್ವರ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆದಿದೆ. ನಂತರ ಅನ್ವರ್ ಮತ್ತು ಆತನ ಸಹಚರರು ಭದ್ರಾ ವಿಭಾಗದ ಕೊಠಡಿಗೆ ತೆರಳಿ ಸೊಹೈಲ್ ಮತ್ತು ಜುನೈದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಕೈದಿಗಳನ್ನು ಚಿಕಿತ್ಸೆಗಾಗಿ ಕಾರಾಗೃಹದ … Read more

ಕಸ ತುಂಬುವಾಗ ಪಾಲಿಕೆ ಕಾರ್ಮಿಕನ ಪಕ್ಕ ದಿಢೀರ್‌ ಹೋಯ್ತು ಬೈಕ್‌, ಕೆಲವೇ ಕ್ಷಣದಲ್ಲಿ ನಡೆಯಿತು ಅಟ್ಯಾಕ್

Jail-Road-In-shimoga-city

ಶಿವಮೊಗ್ಗ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರ (Civic worker) ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ. ಪಾಲಿಕೆಯ 29ನೇ ವಾರ್ಡ್‌ನಲ್ಲಿ ಕಸ ತುಂಬುವ ಕೆಲಸ ಮಾಡುವ ಆಂಜಿನಿ ಎಂಬುವವರು ಭಾನುವಾರ ಬೆಳಿಗ್ಗೆ ಲಕ್ಷ್ಮೀ ಟಾಕೀಸ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದೇ ಬೈಕ್‌ನಲ್ಲಿ ಬಂದ ನಾಲ್ವರು ಯುವಕರು ಸೌಂಡ್ ಬಾಕ್ಸ್‌ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಆಂಜಿನಿ ಅವರ ಪಕ್ಕದಲ್ಲೆ ಹೋಗಿದ್ದಾರೆ. ಹಾಗಾಗಿ ಆಂಜಿನಿ ಅವರು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ … Read more

ಫೋನ್‌‌ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

soraba anavatti graphics

ಸೊರಬ: ಆನವಟ್ಟಿಯ ದಾನಮ್ಮ ಬಡಾವಣೆಯಲ್ಲಿ ಮನೆಯೊಂದರ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ (House burglary) ಮಾಡಲಾಗಿದೆ. ಹೆಚ್.ಜಿ. ಮಂಜುನಾಥ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ್ ಅವರು ತಮ್ಮ ಪತ್ನಿಯ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಹೋಗಿದ್ದ ಸಮಯ ಕೃತ್ಯ ನಡೆದಿದೆ. ನೆರೆಹೊರೆಯವರು ಕರೆ ಮಾಡಿ ಮನೆಯ ಮುಂಭಾಗದ ಬಾಗಿಲು ತೆರೆದಿರುವ ಬಗ್ಗೆ ತಿಳಿಸಿದ್ದರು. ತಕ್ಷಣ ಮಂಜುನಾಥ್ ಅವರು ಶಿವಮೊಗ್ಗದಿಂದ ವಾಪಸ್ ಬಂದು ನೋಡಿದಾಗ, ಕಳ್ಳರು ಮನೆಯ ಬಾಗಿಲು … Read more

ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕನಿಂದ ಮಾಲೀಕರ ಬೊಲೆರೋ ವಾಹನ ಕಳ್ಳತನ

THIRTHAHALLI-NEWS-UPDATE.

ತೀರ್ಥಹಳ್ಳಿ: ಅಡಿಕೆ ಸುಲಿಯುವ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ ಮಾಲೀಕರ ಬೊಲೆರೋ ವಾಹನವನ್ನೇ (Bolero Theft) ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಸಮೀಪದ ಮಂಡವಳ್ಳಿಯಲ್ಲಿ ಘಟನೆ ನಡೆದಿದೆ. ದೇವರಾಜ ಎಂಬವವರು ಅಡಿಕೆ ವ್ಯಾಪಾರಿಯಾಗಿದ್ದು, ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು. ಜನವರಿ 6ರಂದು ಮಧ್ಯರಾತ್ರಿ ಮನೆಯ ಕಾಂಪೌಂಡ್ ಪಸಕ್ಕದಲ್ಲಿ ನಿಲ್ಲಿಸಿದ್ದ ಅಳಿಯ ಮನೋಜ್ ಅವರಿಗೆ ಸೇರಿದ ಮಹೇಂದ್ರ ಬೊಲೆರೋ ವಾಹನ ಕಳ್ಳತನವಾಗಿದೆ. ಎಲ್ಲೆಡೆ ವಿಚಾರಿಸಿದಾಗ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ವಿಜಯನಗರ ಜಿಲ್ಲೆಯ … Read more

ಕೆಲಸ ಮುಗಿಸಿ ವಾಜಪೇಯಿ ಲೇಔಟ್‌ಗೆ ಹಿಂತಿರುಗಿದ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

crime name image

ಶಿವಮೊಗ್ಗ: ವಾಜಪೇಯಿ ಲೇಔಟ್ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ (Passion Bike) ಒಂದನ್ನು ಕಳ್ಳತನ ಮಾಡಲಾಗಿದೆ. ನೂರುಲ್ಲಾ ಎಂಬುವವರು ಕೆಲಸದ ನಿಮಿತ್ತ ತಮ್ಮ ಬೈಕನ್ನು ಮಧ್ಯಾಹ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ, ಸ್ನೇಹಿತನ ವಾಹನದಲ್ಲಿ ಶಿವಮೊಗ್ಗ ನಗರಕ್ಕೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. 2015ರ ಮಾಡೆಲ್‌ನ ಕಪ್ಪು ಮತ್ತು ಬಿಳಿ ಬಣ್ಣದ ಹಿರೋ ಪ್ಯಾಶನ್ ಪ್ರೋ ಬೈಕ್‌ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ … Read more