ಗೋವಾ ನಂಬರ್‌ ಕಾರು ತಡೆದ ಅಧಿಕಾರಿಗಳು, ಸಿಕ್ತು ನಾನಾ ಬ್ರಾಂಡ್‌ನ ಮದ್ಯ, ಎಷ್ಟು ಲೀಟರ್‌ ಇತ್ತು?

goa-liquor-seized-in-sagara.

ಸಾಗರ : ಗೋವಾದಿಂದ (Goa) ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಿಶ್ವನಾಥ್ ಎಂಬ ವ್ಯಕ್ತಿಯನ್ನು  ನಗರದ ಕಾಗೋಡು ತಿಮ್ಮಪ್ಪ ಬಡಾವಣೆ ಸಮೀಪದ ಲೇಔಟ್‌ವೊಂದರ ಬಳಿ ಅಬಕಾರಿ ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. ಮದ್ಯ ಸಾಗಿಸಲು ಬಳಸಲಾಗಿದ್ದ ಕಾರು ಹಾಗೂ 138.06 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಡಿವೈಎಸ್‌ಪಿ ಶೀಲಾ ದರ್ಜಕರ್, ಇನ್‌ಸ್ಪೆಕ್ಟರ್ ಭಾಗ್ಯಲಕ್ಷ್ಮಿ, ಸಂದೀಪ್ ಎಲ್.ಸಿ., ಸಿಬ್ಬಂದಿ ಗುರುಮೂರ್ತಿ, ದೀಪಕ್, ಮಲ್ಲಿಕಾರ್ಜುನ ಹಾಗೂ ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, … Read more

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

all-set-for-holi-festival-in-Shimoga-city

ಶಿವಮೊಗ್ಗ : ಹೋಳಿ (Holi) ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮನ್ಮಥ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಹಲವು ಕಡೆ ಗುರುವಾರ ಮನ್ಮಥನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲಾಗಿದೆ. ಹಬ್ಬದ ನಂತರ ಕಾಮದಹನ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಮಾ.15ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗೋಪಿ ವೃತ್ತದಲ್ಲಿ ರೈನ್‌ ಡಾನ್ಸ್‌ ಆಯೋಜಿಸಲಾಗಿದೆ. ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪನೆ ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, … Read more

ಹಿನ್ನೀರಿಗೆ ಹಾರಿ ರೈತ ಆತ್ಮಹತ್ಯೆ, ಕಾರಣವೇನು?

Crime-News-General-Image

ತೀರ್ಥಹಳ್ಳಿ : ಯುವ ರೈತನೋರ್ವ (Farmer) ವಾರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಬಳಿ ಘಟನೆ ಸಂಭವಿಸಿದೆ. ಹಾಗಲಮನೆಯ ರೈತ ಕೌಶಿಕ್‌ (30) ಮೃತರು. ಕೌಶಿಕ್‌ ಅವಿವಾಹಿತರಾಗಿದ್ದು, ತಾಯಿಯೊಂದಿಗೆ ವಾಸವಾಗಿದ್ದರು. ಕೃಷಿಗಾಗಿ ವಿವಿಧೆಡೆ ಸಾಲ ಮಾಡಿದ್ದರು. ಇನ್ನೊಂದೆಡೆ ಅಡಿಕೆಗೆ ಎಲೆ ಚುಕ್ಕೆ ರೋಗ ಬಂದಿದ್ದರಿಂದ ಕಂಗೆಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಜೆಎನ್‌ಎನ್‌ ಕಾಲೇಜಿನಲ್ಲಿ ಸದೃಡ … Read more

ಗುಡ್ಡದಿಂದ ಇಳಿದು ಬಂದ ಹುಲಿ, ಹಸುವಿನ ಮೇಲೆ ದಾಳಿ

Sagara-News-Update.

ಸಾಗರ : ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ (Tiger) ದಾಳಿ ನಡೆಸಿ ಕೊಂದಿದೆ. ಹಸು ಕುದರೂರು ಗ್ರಾಮದ ಗಣಪತಿ ತೇಕಲೆ ಅವರಿಗೆ ಸೇರಿದ್ದಾಗಿದೆ. ಗೋಮಾಳದಲ್ಲಿ ಹಸುವನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ತೇಕಲೆ ಗುಡ್ಡದಿಂದ ಬಂದ ಹುಲಿಯು ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?

ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ದಾರೆ. ರಾತ್ರಿ ಹೊತ್ತು ವಿಪರೀತ ಶಕೆಗೆ ಜನರು ಕಂಗೆಟ್ಟು ಹೋಗಿದ್ದಾರೆ. ಇವತ್ತು ಕೂಡ ಜಿಲ್ಲೆಯಲ್ಲಿ ತಾಪಮಾನ (Weather) ಹೆಚ್ಚಿರಲಿದೆ. ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 36 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ … Read more

ಜೆಎನ್‌ಎನ್‌ ಕಾಲೇಜಿನಲ್ಲಿ ಸದೃಡ 2.0, ರಾಜ್ಯದ ವಿವಿಧೆಡೆಯಿಂದ ಬರ್ತಿದ್ದಾರೆ ಸಾವಿರ ಸಾವಿರ ವಿದ್ಯಾರ್ಥಿಗಳು, ಏನಿದು?

NES-President-G-Narayanarao-press-meet

ಶಿವಮೊಗ್ಗ : ಜೆ.ಎನ್‌.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾ.15 ರಿಂದ 18ರವರೆಗೆ ರಾಜ್ಯಮಟ್ಟದ ಅಂತರಮಹಾವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟ (Sports Meet) ಸದೃಡ 2.0 ಆಯೋಜಿಸಲಾಗಿದೆ. ವಿ‍ಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ಎನ್.ಇ.ಎಸ್‌) ಪದಾಧಿಕಾರಿಗಳು, ವ್ಯವಸ್ಥೆ ಕುರಿತು ತಿಳಿಸಿದರು. ಯಾರೆಲ್ಲ ಏನೆಲ್ಲ ಹೇಳಿದರು? ಕ್ರೀಡೆಯಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಅದಕ್ಕಾಗಿ ಈ ಹಿಂದೆ ಸದೃಢ 1 ಆಯೋಜಿಸಿದ್ದೆವು. ಈಗ 2ನೇ ಅವೃತ್ತಿಯ ಸದೃಡ ಅಥ್ಲೆಟಿಕ್ಸ್‌ ಸ್ಪರ್ಧೆ ನಡೆಸಲಾಗುತ್ತಿದೆ. 220 … Read more

ಬೆಳ್ಳಂಬೆಳಗ್ಗೆ ಶುರುವಾಗಲಿಲ್ಲ ಸಿಟಿ ಬಸ್‌, ಪರಿಶೀಲಿಸಿದ ಡ್ರೈವರ್‌ಗೆ ಕಾದಿತ್ತು ಶಾಕ್‌

crime name image

ಶಿವಮೊಗ್ಗ : ಸಿಟಿ ಬಸ್‌ (Bus) ಒಂದರ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. ವಿನೋಬನಗರದ 100 ಅಡಿ ರಸ್ತೆಯಲ್ಲಿ ಪೆಟ್ರೋಲ್‌ ಬಂಕ್‌ ಮುಂಭಾಗ ರಾತ್ರಿ ನಿಲ್ಲಿಸಿದ್ದ ಬಸ್ಸಿನಲ್ಲಿ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಶಶಿಕುಮಾರ್‌ ಸಿಟಿ ಬಸ್‌ (Bus) ನಿತ್ಯ ಹರಿಗೆ – ಕಾಶಿಪುರ ಮಧ್ಯೆ ಸಂಚರಿಸುತ್ತಿದೆ. ಚಾಲಕ ರಾತ್ರಿ ಬಸ್ಸನ್ನು ಪೆಟ್ರೋಲ್‌ ಬಂಕ್‌ ಮುಂಭಾಗ ನಿಲ್ಲಿಸಿದ್ದರು. ಬೆಳಗ್ಗೆ ಬಸ್‌ ಬಳಿ ಪುನಃ ಬಂದ ಚಾಲಕ ಶುರು ಮಾಡಿದಾಗ ಸ್ಟಾರ್ಟ್‌ ಆಗಲಿಲ್ಲ. ಪರಿಶೀಲಿಸಿದಾಗ ಎರಡು ಬ್ಯಾಟರಿಗಳು ನಾಪತ್ತೆಯಾಗಿದ್ದವು. 15 ಸಾವಿರ … Read more

ಅಡಿಕೆ ಧಾರಣೆ | 13 ಮಾರ್ಚ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ, ಸಾಗರ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಅಡಿಕೆ ಮಾದರಿ ಕನಿಷ್ಠ ಗರಿಷ್ಠ ದರ ಸರಕು 52,010 89,986 ಬೆಟ್ಟೆ  45,159 56,199 ಗೋರಬಲು  17,023 27,069 ರಾಶಿ  35,006 52,009 ಸಾಗರ ಮಾರುಕಟ್ಟೆ ಅಡಿಕೆ ಮಾದರಿ ಕನಿಷ್ಠ ಗರಿಷ್ಠ ದರ ಬಿಳಿಗೋಟು 6,099 19,800 ಚಾಲಿ 16,989 33,809 ಕೋಕ 6,100 19,899 ಕೆಂಪುಗೋಟು 10,199 28,899 ರಾಶಿ 21,899 51,870 ಸಿಪ್ಪೆಗೋಟು 6,070 16,859 … Read more

ಶಿವಮೊಗ್ಗ ಸಿಟಿಯ ವಿವಿಧೆಡೆ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ : 220 ಕೆವಿ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಮಾ.14 ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕುವೆಂಪುನಗರ, ಎನ್.ಎ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆಎನ್‌ಎನ್‌ಸಿ ಕಾಲೇಜು, ಪರ್ಫೆಕ್ಟ್ ಅಲಾಯಿ ಫ್ಯಾಕ್ಟರಿ, ರೆಡ್ಡಿ ಬಡಾವಣೆ, ಶಾಂತಿನಗರ, ನವುಲೆ, ಅಶ್ವತ್ಥ ನಗರ, ಎಲ್.ಬಿ.ಎಸ್.ನಗರ, ಹೊನ್ನಾಳಿ ರಸ್ತೆ, ತ್ಯಾವರೆ … Read more

ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ, ಯುವಕನ ಕೈಗೆ ಬಂತು ನೇಮಕಾತಿ ಆದೇಶ, ಆಮೇಲೆ ಕಾದಿತ್ತು ಆಘಾತ

Crime-News-General-Image

ಶಿವಮೊಗ್ಗ : ಸಾಫ್ಟ್‌ವೇರ್‌ (Software) ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಆದೇಶ ಕಾಪಿ ನೀಡಿ ಶಿವಮೊಗ್ಗದ ಯುವಕನೊಬ್ಬನಿಗೆ (ಹೆಸರು ಗೌಪ್ಯ) 2.10 ಲಕ್ಷ ರೂ. ವಂಚಿಸಲಾಗಿದೆ. ಯುವಕನ ಸ್ನೇಹಿತನೊಬ್ಬನ ಕಡೆಯಿಂದ ಹೈದರಾಬಾದ್‌ನ ಮಹೇಶ್‌ ಎಂಬಾತನ ಪರಿಚಯವಾಗಿತ್ತು. ಆತ ಯುವಕನಿಗೆ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಹಂತ ಹಂತವಾಗಿ ಹಣ ಪಡೆದು 2023ರ ಡಿಸೆಂಬರ್‌ನಲ್ಲಿ ಸಾಫ್ಟ್‌ವೇರ್‌ (Software) ಕಂಪನಿಯೊಂದರಲ್ಲಿ ನೇಮಕಾತಿ ಪತ್ರ ಕಳುಹಿಸಿದ್ದ. ಪರಿಶೀಲಿಸಿದಾಗ ಕಾದಿತ್ತು ಶಾಕ್‌ ಪರಿಶೀಲಿಸಿದಾಗ ಆ ನೇಮಕಾತಿ ಆದೇಶ ನಕಲಿ ಎಂಬುದು … Read more