ಶಿವಮೊಗ್ಗ ವಿಮಾನ ನಿಲ್ದಾಣ, ಲಕ್ಷಕ್ಕೂ ಹೆಚ್ಚು ಜನರ ಪ್ರಯಾಣ, ವಿಮಾನಗಳು ಎಷ್ಟು ಬಾರಿ ಹಾರಾಡಿವೆ?

Indigo-ATR-Flight-in-Shivamogga-Airport-Shimoga-Live-news.webp

ಶಿವಮೊಗ್ಗ : ಸೋಗಾನೆ ಬಳಿ ಇರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ಚಾಲನೆ ದೊರೆತು ಎರಡು ವರ್ಷವಾಗಿದೆ. ಈ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ವಿಮಾನಯಾನ ಮಾಡಿದ್ದಾರೆ. 2023ರ ಫೆ.27ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದರು. ಈಗ ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈವರೆಗೂ ಓಡಾಡಿದವರೆಷ್ಟು? ಕಳೆದ ಎರಡು ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಒಟ್ಟು 1,30,587 ಜನ … Read more

ವಾರಾಹಿಗೆ ಭದ್ರಾ ಕಾಡಾ ಅಧ್ಯಕ್ಷರ ಭೇಟಿ, ರೈತರು, ಅಧಿಕಾರಿಗಳ ಜೊತೆ ಮಹತ್ವದ ಸಭೆ

Dr-amshumanth-visit-varahi-project-area.

ಶಿವಮೊಗ್ಗ : ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಭದ್ರಾ ಕಾಡಾ ವ್ಯಾಪ್ತಿಯ ವಾರಾಹಿ ಯೋಜನೆ (Project) ಅಣೆಕಟ್ಟು ಹಾಗೂ ಅಚ್ಚುಕಟ್ಟು ಭಾಗದ ಸ್ಥಳವನ್ನು ಪರಿವೀಕ್ಷಿಸಿ, ರೈತರೊಂದಿಗೆ ಯೋಜನೆಯ ಕಾರ್ಯರೂಪದ ಕುರಿತು ಚರ್ಚಿಸಿದರು. ನಂತರ ಭದ್ರಾಕಾಡಾ ಸಿದ್ದಾಪುರ ಕಚೇರಿಯಲ್ಲಿ ಕಾಡಾ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚು ನೀರು ನಾಲೆಗಳಲ್ಲಿ ವ್ಯರ್ಥವಾಗಲು ಅವಕಾಶ ನೀಡದೆ ರೈತರ ಬೆಳೆಗಳಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಸಕಾಲಕ್ಕೆ ನೀರು ಒದಗಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ. ರೈತರಿಗೆ … Read more

ಅರ್ಚಕ ವಿನಾಯಕ ಬಾಯರಿ ನಿಧನ | ನಾಳೆ ಜನತಾ ಪ್ರಣಾಳಿಕ ಬಿಡುಗಡೆ – 5 ಫಟಾಫಟ್‌ ಸುದ್ದಿ

5-PM-FATAFAT-NEWS.webp

Fatafat News ಇದನ್ನೂ ಓದಿ » ಭದ್ರಾವತಿ ಅಧಿಕಾರಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು?

ಇವತ್ತಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಶಿವಮೊಗ್ಗ ಜಿಲ್ಲೆಯಲ್ಲಿ ಪರೀಕ್ಷೆ ಬರೆಯೋರೆಷ್ಟು? ಹೇಗಿದೆ ಸಿದ್ಧತೆ?

Education News Shimoga Live Update

ಶಿವಮೊಗ್ಗ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ (Exam) ಮಾರ್ಚ್ 1ರಿಂದ 20ರ ವರೆಗೆ ನಡೆಯಲಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 39 ಪರೀಕ್ಷಾ ಕೇಂದ್ರಗಳಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು ವಿದ್ಯಾರ್ಥಿಗಳೆಷ್ಟು? ಒಟ್ಟು 18,218 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದಲ್ಲಿ 4,019, ವಾಣಿಜ್ಯ ವಿಭಾಗದಲ್ಲಿ 5,432 ಮತ್ತು ವಿಜ್ಞಾನ ವಿಭಾಗದಲ್ಲಿ 7,742 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕುವಾರು ಎಷ್ಟೆಷ್ಟು ವಿದ್ಯಾರ್ಥಿಗಳು? ಶಿವಮೊಗ್ಗ ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 7063 ವಿದ್ಯಾರ್ಥಿಗಳು ಪರೀಕ್ಷೆ … Read more

ಶಿವಮೊಗ್ಗದ ಪತ್ರಕರ್ತರಿಗೆ ಪ್ರಶಸ್ತಿ ಪ್ರಕಟ | ಮುದಸ್ಸಿರ್‌ ಅಹ್ಮದ್‌ಗೆ ಪ್ರಶಸ್ತಿ ಪ್ರದಾನ | ಬೆಜ್ಜವಳ್ಳಿಯಲ್ಲಿ ಜನ ಸಂಪರ್ಕ ಸಭೆ

9-AM-FATAFAT-NEWS.webp

ಇದನ್ನೂ ಓದಿ » ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಪ್ರಮೋದ್‌ ಮುತಾಲಿಕ್‌ಗೆ ತಡೆ, ನೊಟೀಸ್‌ ಕೊಟ್ಟು ಗಡಿ ದಾಟಿಸಿದ ಪೊಲೀಸ್‌, ಯಾಕೆ?

ಭದ್ರಾವತಿ ಅಧಿಕಾರಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು?

Shivamogga-Court-Balaraja-Urs-Road

ಶಿವಮೊಗ್ಗ : ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಅಧಿಕಾರಿಗೆ (Officer) ಶಿವಮೊಗ್ಗ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಭದ್ರಾವತಿ ತಾಲೂಕು ಎ.ಡಿ.ಎಲ್‌.ಆರ್‌ ಕಚೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಶಿಕ್ಷೆಗೊಳಗಾದವರು. ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ ಅಧಿಕಾರಿ ಭದ್ರಾವತಿ ತಾಲೂಕು ಮತ್ತಿಘಟ್ಟ ಗ್ರಾಮದ ಬಸವರಾಜಪ್ಪ ಎಂಬುವವರ 1.20 ಎಕರೆ ಜಮೀನಿನ ಪಕ್ಕ ಪೋಡಿಗೆ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 2013ರ ಜುಲೈ 23ರಂದು ಮಲ್ಲಿಕಾರ್ಜುನಯ್ಯ ಶಿವಮೊಗ್ಗದ ವಿನೋಬನಗರ ಕೆಂಚಪ್ಪ ಬಡಾವಣೆಯ … Read more

ಸಾಗರದಲ್ಲಿ ಇವತ್ತು ಸಾಹಿತ್ಯ ಹಬ್ಬ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ರಕ್ತದಾನ, ಸಾಲು ಸಾಲು ಗೋಷ್ಠಿಗಳು

Sagara-News-Update.

ಸಾಗರ : 12ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ (Sammelana) ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಲೇಖಕ ಅ.ರಾ.ಶ್ರೀನಿವಾಸ್ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಏನೇನೆಲ್ಲ ಕಾರ್ಯಕ್ರಮವಿದೆ? ಬೆಳಿಗ್ಗೆ 9ಕ್ಕೆ ಉಪವಿಭಾಗಾಧಿಕಾರಿ ಯತೀಶ್ ಆರ್. ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ನಂತರ ನಗರಸಭೆ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಇದೆ ಮೊದಲ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬೆಳಿಗ್ಗೆ 10ಕ್ಕೆ ಗಾಂಧಿ ಮೈದಾನದಲ್ಲಿ ಶಾಸಕ ಗೋಪಾಲಕೃಷ್ಣ … Read more

ಶಿವಮೊಗ್ಗದಲ್ಲಿ ಬಿಸಿಲಿನ ಅಬ್ಬರ ಜೋರು, ತಾಪಮಾನ ಹೆಚ್ಚಳದಿಂದ ಜನ ಹೈರಾಣು

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ (weather) ಬಿಸಿಲಿನ ಅಬ್ಬರ ಜೋರಿದೆ. ಎಲ್ಲಾ ತಾಲೂಕುಗಳಲ್ಲಿಯು ತಾಪಮಾನ ಹೆಚ್ಚಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 33 ಡಿಗ್ರಿ, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಇದನ್ನೂ … Read more

ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಪ್ರಮೋದ್‌ ಮುತಾಲಿಕ್‌ಗೆ ತಡೆ, ನೊಟೀಸ್‌ ಕೊಟ್ಟು ಗಡಿ ದಾಟಿಸಿದ ಪೊಲೀಸ್‌, ಯಾಕೆ?

Pramod-Mutalik-Entry-restricted-in-Shimoga.

ಶಿವಮೊಗ್ಗ : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರನ್ನು ತಡೆದ ಪೊಲೀಸರು (Police), ಎನ್‌.ಆರ್‌.ಪುರ ತಾಲೂಕಿಗೆ ಬಿಟ್ಟು ಬಂದಿದ್ದಾರೆ. ಕಳೆದ ರಾತ್ರಿ ಶಿವಮೊಗ್ಗ – ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಬಳಿ ಮುತಾಲಿಕ್‌ ಅವರ ಕಾರು ತಡೆದು ಜಿಲ್ಲಾಧಿಕಾರಿ ಆದೇಶ ನೀಡಿ, ಗಡಿ ದಾಟಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಶ್ರೀರಾಮ ಸೇನೆ ವತಿಯಿಂದ ಪ್ರಕಟಿಸಲಾಗಿರುವ ಲವ್‌ ಜಿಹಾದ್‌ ಪುಸ್ತಕ ಬಿಡುಗಡೆಗೆ ಪ್ರಮೋದ್‌ ಮುತಾಲಿಕ್‌ ಶಿವಮೊಗ್ಗಕ್ಕೆ ಆಗಮಿಸಿದ್ದರು. ನಗರದ ಪತ್ರಿಕಾ ಭವನದಲ್ಲಿ … Read more

ಶಿವಮೊಗ್ಗದಲ್ಲಿ ಮೂರು ದಿನ ಉಪ ಲೋಕಾಯುಕ್ತ ಟೂರ್‌, ಕಚೇರಿಗಳಿಗೆ ದಿಢೀರ್‌ ಭೇಟಿಗೆ ಪ್ಲಾನ್‌

Karanataka-Lokayukta.webp

ಶಿವಮೊಗ್ಗ : ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಮಾರ್ಚ್ 18ರಿಂದ 21ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ (Tour) ನೀಡುತ್ತಿದ್ದಾರೆ. ಈ ಸಂದರ್ಭ ಸಾರ್ವಜನಿಕರಿಂದ ಅಹವಾಲು ಸ್ವೀಕಾರಿ, ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರ, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ? ಮಾರ್ಚ್18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾರ್ಚ್19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅಂದು ಸಂಜೆ 5.30ರಿಂದ 6.30ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ … Read more