ಭದ್ರಾವತಿ ಆಕಾಶವಾಣಿಯಿಂದ ಇಂದು ಸಂಜೆ ಹಲೋ ಕಿಸಾನ್‌ವಾಣಿ ನೇರ ಫೋನ್‌ ಇನ್‌ ಕಾರ್ಯಕ್ರಮ

111023-Bhadravathi-Radio-FM-Radio.webp

ಶಿವಮೊಗ್ಗ: ಆಕಾಶವಾಣಿ ಭದ್ರಾವತಿಯಿಂದ ಜುಲೈ 8 ರಂದು ಸಂಜೆ 6.51 ರಿಂದ 7.30ರವರೆಗೆ ‘ಹಲೋ ಕಿಸಾನ್‌ವಾಣಿ’ ನೇರ ಫೋನ್ ಇನ್ (Phone In) ಕಾರ್ಯಕ್ರಮ ಪ್ರಸಾರವಾಗಲಿದೆ. ಮಣ್ಣಿನ ಆರೋಗ್ಯ ವಿಷಯದ ಬಗ್ಗೆ ಈ ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡಲಾಗುತ್ತದೆ. ಶಿವಮೊಗ್ಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಆರ್.ಮಮತಾ ಪಾಲ್ಗೊಳ್ಳಲಿದ್ದಾರೆ ಎಂದು ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ: 08282-270282/ 270283, ವಾಟ್ಸ್‌ಆ್ಯಪ್‌ ಸಂದೇಶ ಸಂಖ್ಯೆ: 9481572600. … Read more

‘ಮಸೀದಿಗಳಲ್ಲಿ ಆಜಾನ್‌ ಕೂಗುವ ಬದಲು ಮೊಬೈಲ್‌ ಆ್ಯಪ್‌ಗಳನ್ನು ಬಳಸಿʼ

KS-Eshwarappa-Press-meet-in-Shimoga

ಶಿವಮೊಗ್ಗ: ಮಸೀದಿಗಳಲ್ಲಿ ಆಜಾನ್ (Azan) ಕೂಗುವುದರಿಂದ ಶಬ್ಧಮಾಲಿನ್ಯ ಉಂಟಾಗುತ್ತಿದೆ. ಹಾಗಾಗಿ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಹಲವೆಡೆ ಆಜಾನ್‌ ಕೂಗುವುದನ್ನು ನಿಷೇಧಿಸಲಾಗಿದೆ. ಮೊಬೈಲ್‌ ಆ್ಯಪ್‌ಗಳನ್ನು ಬಳಸಿ ಆಜಾನ್‌ ಕೂಗುವಂತೆ ಮಸೀದಿಗಳಿಗೆ ಸರ್ಕಾರ ಸೂಚಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಬ್ಧಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಅದೇಶ ಪಾಲಿಸುವಂತೆ ಮುಸ್ಲಿಮರಿಗೆ ಸರ್ಕಾರ ಹೇಳಬೇಕು. ಸರ್ಕಾರದ ಆದೇಶದಂತೆ ಮಸೀದಿಗಳು ನಡೆದುಕೊಳ್ಳಬೇಕು ಎಂದರು. es ಹಲವು ರಾಷ್ಟ್ರಗಳಲ್ಲಿ ನಿಷೇಧ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ … Read more

ತುಂಗಾ ಡ್ಯಾಮ್‌ನ ಒಳ ಹರಿವು ಮತ್ತಷ್ಟು ಇಳಿಕೆ, ಇವತ್ತು ಎಷ್ಟಿದೆ?

Tunga-Dam-Gajanuru.

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದು ಗಾಜನೂರಿನ ತುಂಗಾ ಜಲಾಶಯದ (Dam Level) ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಜಲಾಶಯಕ್ಕೆ ಇವತ್ತು 32,249 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ 31,867 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 2.2 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟ 587.87 ಮೀಟರ್‌ ಇದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮರೆಯಾದ ಮಳೆ, ಹೊಸನಗರ, ತೀರ್ಥಹಳ್ಳಿಯಲ್ಲಿ ಉತ್ತಮ ವರ್ಷಧಾರೆ

ಶಿವಮೊಗ್ಗದಲ್ಲಿ ಮರೆಯಾದ ಮಳೆ, ಹೊಸನಗರ, ತೀರ್ಥಹಳ್ಳಿಯಲ್ಲಿ ಉತ್ತಮ ವರ್ಷಧಾರೆ

night-rain-in-shimoga

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗಿದೆ. ಕೆಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ಭಾಗದಲ್ಲಿ ಉತ್ತಮ ಮಳೆಯಾಗಿದೆ. (Rainfall Report) ಸೋಮವಾರ ಬೆಳಗ್ಗೆ 8.30ರಿಂದ ಇಂದು ಬೆಳಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 2.90 ಮಿ.ಮೀ ಮಳೆಯಾಗಿದೆ. ಭದ್ರಾವತಿ 2.40 ಮಿ.ಮೀ, ತೀರ್ಥಹಳ್ಳಿ 31.90 ಮಿ.ಮೀ., ಸಾಗರ 29.60 ಮಿ.ಮೀ., ಶಿಕಾರಿಪುರ 4.20 ಮಿ.ಮೀ, ಸೊರಬ 14 ಮಿ.ಮೀ., ಹೊಸನಗರ 37.60 ಮಿ.ಮೀ. ಮಳೆಯಾಗಿದೆ. ಇದನ್ನೂ ಓದಿ » ದೆವ್ವ ಬಿಡಿಸೋದಾಗಿ ಕೋಲಲ್ಲಿ ಹೊಡೆದು ಹಿಂಸೆ, ನೀರಿಗಾಗಿ … Read more

Woman Dies After Being Beaten in Exorcism Attempt

Jambaraghatta-incident-one-arrested

Holehonnur: A distressing incident in Jambaraghatta village near Holehonnur has resulted in the death of a 55-year-old woman, identified as Geethamma, after she was subjected to severe physical abuse in the name of exorcism. A 45-year-old woman named Asha, from the same village, allegedly used a stick to beat Geethamma, claiming she was driving out … Read more

ದೆವ್ವ ಬಿಡಿಸೋದಾಗಿ ಕೋಲಲ್ಲಿ ಹೊಡೆದು ಹಿಂಸೆ, ನೀರಿಗಾಗಿ ಅಂಗಲಾಚುತ್ತ ಪ್ರಾಣ ಬಿಟ್ಟ ಮಹಿಳೆ, ವಿಡಿಯೋ ವೈರಲ್‌

Jambaraghatta-incident-one-arrested

ಹೊಳೆಹೊನ್ನೂರು: ಮೈಗಂಟಿರುವ ದೆವ್ವ ಬಿಡಿಸುವುದಾಗಿ (Exorcism) ಹಿಂಸೆ ನೀಡಿದ್ದರಿಂದ ಮಹಿಳೆಯೊಬ್ಬರು ಉಸಿರು ಚೆಲ್ಲಿದ್ದಾರೆ. ಹೊಳೆಹೊನ್ನೂರು ಸಮೀಪದ ಜಂಬರಘಟ್ಟ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಗೀತಮ್ಮ (55) ಮೃತ ದುರ್ದೈವಿ. ಅದೇ ಗ್ರಾಮದ ಆಶಾ (45) ಎಂಬಾಕೆ ದೆವ್ವ ಬಿಡಿಸುವುದಾಗಿ ಹೇಳಿ ಕೋಲಿನಿಂದ ಹೊಡೆದಿದ್ದಾಳೆ.   ದೆವ್ವ ಬಿಡಿಸಲು ಬಂದ ‘ದೇವರು’ ಜಂಬರಘಟ್ಟದ ಗೀತಮ್ಮ ಕೆಲವು ದಿನದಿಂದ ಅನಾರೋಗ್ಯಕ್ಕೀಡಾಗಿದ್ದರು. ದೆವ್ವ ಮೆಟ್ಟಿಕೊಂಡಿರುವ ಶಂಕೆ ಮೇಲೆ ಅದೇ ಗ್ರಾಮದ ಆಶಾ ಎಂಬಾಕೆಯನ್ನು ಕರೆಯಿಸಲಾಗಿತ್ತು. ಆಶಾಳ ಮೈಮೇಲೆ ದೇವರು ಬರುವ … Read more

Shivamogga City Corporation Employees Begin Indefinite Strike

Shimoga-Mahanagara-Palike-ambedkar-statue

Shivamogga: Employees of the Shivamogga City Corporation, including sanitation workers, have launched an indefinite strike starting today, July 8, 2025. This action, led by the Shivamogga City Corporation Employees’ Association, will involve various staff members such as loaders, drivers, gardeners, and drainage cleaners, causing significant disruption to city services, especially cleanliness and public-facing operations. The … Read more

ಶಿವಮೊಗ್ಗ ಪಾಲಿಕೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ, ಕಾರಣವೇನು? ಬೇಡಿಕೆಗಳೇನು?

Shimoga-Mahanagara-Palike-ambedkar-statue

ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ (Strike) ಆರಂಭಿಸಿದ್ದಾರೆ. ಪೌರ ಕಾರ್ಮಿಕರು ಸೇರಿದಂತೆ ಪಾಲಿಕೆ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ನಗರದ ಸ್ವಚ್ಛತೆ ಸೇರಿದಂತೆ ಪಾಲಿಕೆಯ ಕರ್ತವ್ಯಕ್ಕೆ ಅಡಚಣೆ ಉಂಟಾಗಲಿದೆ. ಪಾಲಿಕೆ ನೌಕರರ ಬೇಡಿಕೆಗಳೇನು? ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಹಾನಗರ ಪಾಲಿಕೆ ನೌಕರರು ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಏಳನೆ ವೇತನ ಆಯೋಗದ ಸೌಲಭ್ಯಗಳು, ಕೆಜಿಐಡಿ, ಜಿಪಿಎಫ್‌ಗಳನ್ನು ಪಾಲಿಕೆ ನೌಕರರಿಗು ವಿಸ್ತರಿಸಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಬೇಕು. … Read more

Gold Chain Snatched from Woman in Shivamogga

Crime-News-General-Image

Shivamogga: A woman in Shivamogga, Karnataka, was the victim of a gold chain snatching incident in her home. A man, approximately 35 years old, approached her residence in Ganapathi Layout, Vidyanagar, under the pretext of inquiring about land for sale. Upon being told there was no land available, he forcibly entered the house. The assailant … Read more

ವಿದ್ಯಾನಗರದಲ್ಲಿ ಹಾಡಹಗಲೆ ಮನೆ ಬಾಗಿಲು ತಟ್ಟಿದ ವ್ಯಕ್ತಿ, ಬಾಗಿಲು ತೆಗದಾಗ ಮಾಲೀಕನಿಗೆ ಕಾದಿತ್ತು ಶಾಕ್

Crime-News-General-Image

ಶಿವಮೊಗ್ಗ: ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದುಕೊಂಡು ಮನೆ ಬಾಗಿಲಿನ ಚಿಲಕ ಹಾಕಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಗಣಪತಿ ಲೇಔಟ್‌ನಲ್ಲಿ ಈಚೆಗೆ ಘಟನೆ ಸಂಭವಿಸಿದೆ. ಮನೆಯೊಂದರ ಬಳಿ ಬಂದಿದ್ದ ಸುಮಾರು 35 ವರ್ಷದ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಮನೆ ಮಾಲೀಕ ನಾಗರಾಜಪ್ಪ ಬಾಗಿಲು ತೆರೆದಾಗ, ‘ಸೈಟ್‌ ಮಾರಾಟಕ್ಕಿದೆಯೇʼ ಎಂದು ಆ ವ್ಯಕ್ತಿ ವಿಚಾರಿಸಿದ್ದ. ನಾಗರಾಜಪ್ಪ ಅವರು ‘ಯಾವುದೇ ಸೈಟ್‌ ಮಾರಾಟಕ್ಕಿಲ್ಲʼ ಎಂದು ತಿಳಿಸಿದ್ದರು. ಒಳ ನುಗ್ಗಿ, ಚಿನ್ನದ ಚೈನ್‌ ಕಸಿದ ಕೂಡಲೆ ಮನೆಯೊಳಗೆ … Read more