ಗೀತಮ್ಮ (55) ಮೃತ ದುರ್ದೈವಿ. ಅದೇ ಗ್ರಾಮದ ಆಶಾ (45) ಎಂಬಾಕೆ ದೆವ್ವ ಬಿಡಿಸುವುದಾಗಿ ಹೇಳಿ ಕೋಲಿನಿಂದ ಹೊಡೆದಿದ್ದಾಳೆ.
ದೆವ್ವ ಬಿಡಿಸಲು ಬಂದ ‘ದೇವರು’
ಜಂಬರಘಟ್ಟದ ಗೀತಮ್ಮ ಕೆಲವು ದಿನದಿಂದ ಅನಾರೋಗ್ಯಕ್ಕೀಡಾಗಿದ್ದರು. ದೆವ್ವ ಮೆಟ್ಟಿಕೊಂಡಿರುವ ಶಂಕೆ ಮೇಲೆ ಅದೇ ಗ್ರಾಮದ ಆಶಾ ಎಂಬಾಕೆಯನ್ನು ಕರೆಯಿಸಲಾಗಿತ್ತು. ಆಶಾಳ ಮೈಮೇಲೆ ದೇವರು ಬರುವ ಹಿನ್ನೆಲೆ ಆಕೆಯ ಬಳಿ ಗೀತಮ್ಮಳನ್ನು ತೋರಿಸಲಾಗಿತ್ತು.
ದೆವ್ವ ಬಿಡಿಸುವ ವಿಡಿಯೋ ವೈರಲ್
ದೆವ್ವ ಬಿಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೀತಮ್ಮ ನೆಲದ ಮೇಲೆ ಕುಳಿತಿದ್ದು, ಪಕ್ಕದಲ್ಲಿ ನಿಂತ ಮಹಿಳೆಯೊಬ್ಬಳು ದೊಣ್ಣೆಯೊಂದರಿಂದ ನಿರಂತರವಾಗಿ ಹೊಡೆಯುತ್ತಾಳೆ. ನಿತ್ರಾಣಗೊಂಡಿದ್ದ ಗೀತಮ್ಮ ನೀರು ಬೇಕು ಎಂದು ಅಂಗಲಾಚಿದರು, ಪಕ್ಕದಲ್ಲಿ ನಿಂತಿದ್ದ ಮಹಿಳೆ ನೀರು ಕೊಡಲು ನಿರಾಕರಿಸುತ್ತಾಳೆ. ಒಂದು ನಿಮಿಷದ ವಿಡಿಯೋದಲ್ಲಿ ಗೀತಮ್ಮಳ ತಲೆ, ಮೈ-ಕೈಗೆ ದೊಣ್ಣೆಯಿಂದ ಹೊಡೆಯುವುದು ದಾಖಲಾಗಿದೆ.

ಹೊಡೆತ ತಿಂದು ಕೊನೆಯುಸಿರೆಳೆದ ಗೀತಮ್ಮ
ಕೋಲಿನಿಂದ ನಿರಂತರ ಹೊಡೆತ ತಿಂದ ಗೀತಮ್ಮ ಕೊನೆಯುಸಿರೆಳೆದಿದ್ದಾರೆ. ನಡುರಾತ್ರಿಯವರೆಗೆ ಗೀತಮ್ಮಳಿಗೆ ಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಸಿಗಂದೂರು ಸೇತುವೆ, ಎರಡನೇ ಹಂತದ ಲೋಡ್ ಟೆಸ್ಟ್ ಶುರು
ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
