ಅಡಿಕೆ ಧಾರಣೆ | 2 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 16196 32309 ಬೆಟ್ಟೆ 51899 57600 ರಾಶಿ 48668 58599 ಸರಕು 51200 74100 ಸಾಗರ ಮಾರುಕಟ್ಟೆ ಕೆಂಪುಗೋಟು 15989 29000 ಕೋಕ 9569 19500 ಚಾಲಿ 26099 39269 ಬಿಳೆ ಗೋಟು 9786 25899 ರಾಶಿ 26899 58099 ಸಿಪ್ಪೆಗೋಟು 9009 18699 ಇದನ್ನೂ ಓದಿ » ನೇಣು ಬಿಗಿದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೃತದೇಹ ಪತ್ತೆ

medical-student-vishnu-priya-no-more

ಶಿವಮೊಗ್ಗ: ಹಾಸ್ಟೆಲ್‌ನ ಕೊಠಡಿಯಲ್ಲಿ ಮೆಡಿಕಲ್‌ (Medical) ವಿದ್ಯಾರ್ಥಿನಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಬ್ಬಯ್ಯ ಮೆಡಿಕಲ್‌ ಕಾಲೇಜು ವಿದ್ಯಾರ್ಥಿನಿ ವಿಷ್ಣು ಪ್ರಿಯಾ (22) ಮೃತಳು. ಬೆಂಗಳೂರು ಮೂಲದ ವಿಷ್ಣು ಪ್ರಿಯಾ ಶಿವಮೊಗ್ಗದ ಸುಬ್ಬಯ್ಯ ಕಾಲೇಜಿನಲ್ಲಿ ಮೆಡಿಕಲ್‌ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇವತ್ತು ಹಾಸ್ಟೆಲ್‌ನ ಕೊಠಡಿಯಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷ್ಣು ಪ್ರಿಯಾ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಇಂಟರ್ನ್‌ಶಿಪ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ವಿಷ್ಣು ಪ್ರಿಯಾಳ ಪೋಷಕರು ವಿದೇಶದಲ್ಲಿದ್ದಾರೆ. … Read more

ಸಿಟಿ ಸೆಂಟರ್‌ ಮಾಲ್‌ನಲ್ಲಿ ಸಿನಿಮಾ ನೋಡಿ ಹೊರ ಬಂದ ವ್ಯಕ್ತಿಗೆ ಕಾದಿತ್ತು ಆಘಾತ

crime name image

ಶಿವಮೊಗ್ಗ: ಸಿಟಿ ಸೆಂಟರ್‌ ಮಾಲ್‌ನಲ್ಲಿ (Mall) ಸಿನಿಮಾ ನೋಡಿ ಬರುವಷ್ಟರಲ್ಲಿ ಬೈಕ್‌ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರಸಿಂಹಮೂರ್ತಿ ಎಂಬುವವರು ಹೀರೋ ಹೋಂಡ ಸ್ಪ್ಲೆಂಡರ್‌ ಬೈಕ್‌ ಅನ್ನು ಗಾರ್ಡನ್‌ 2ನೇ ಅಡ್ಡರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ್ದರು. ಸಿಟಿ ಸೆಂಟರ್‌ ಮಾಲ್‌ನಲ್ಲಿ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ಮುಗಿಸಿ ಬಂದಾಗ ಬೈಕ್‌ ಅಲ್ಲಿರಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ » ಹವಾಮಾನ ವರದಿ | 2 ಜೂನ್‌ 2025 | ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಹೇಗಿದೆ … Read more

ಹವಾಮಾನ ವರದಿ | 2 ಜೂನ್‌ 2025 | ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಹೇಗಿದೆ ವಾತಾವರಣ? ಇಲ್ಲಿದೆ ಡಿಟೇಲ್ಸ್‌

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಪುನಃ ಜೋರು ಬಿಸಲು ಆವರಿಸಿದೆ. (Weather Report) ಜಿಲ್ಲೆಯ ವಿವಿಧೆಡೆ ಇವತ್ತು ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಬಿಸಿಲಿನ ಅಬ್ಬರವು ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಎಲ್ಲೆಲ್ಲಿ ಹೇಗಿದೆ ವಾತಾವರಣ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ … Read more

ದಿನ ಭವಿಷ್ಯ | 2 ಜೂನ್‌ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿರುತ್ತೆ? ಶುಭ ಬಣ್ಣ ಯಾವುದು?

DINA-BHAVISHYA

DINA BHAVISHYA ಮೇಷ ಇಂದು ನಿಮ್ಮ ಶಕ್ತಿ ಮತ್ತು ಉತ್ಸಾಹ ಉಚ್ಚಮಟ್ಟದಲ್ಲಿರುತ್ತದೆ. ಹೊಸ ಪ್ರಯತ್ನಗಳಿಗೆ ಅನುಕೂಲಕರ ದಿನ. ಆದರೆ ತ್ವರಿತ ನಿರ್ಣಯ ತಪ್ಪಿಸಿ. ವೃತ್ತಿಪರ ಯೋಜನೆಗಳಲ್ಲಿ ಯಶಸ್ಸು ಕಾಣಬಹುದು. ಶುಭ ಬಣ್ಣ: ಕೆಂಪು ವೃಷಭ ಸ್ಥಿರತೆ ಮತ್ತು ಸಂಯಮದಿಂದ ಕೆಲಸ ಮಾಡಿದರೆ ಲಾಭ ನಿಶ್ಚಿತ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ ಸುಖದ ಸಮಯ ಕಳೆಯಲು ಅನುಕೂಲ. ಶುಭ ಬಣ್ಣ: ಹಸಿರು ಮಿಥುನ ಸಂವಹನ ಕೌಶಲ್ಯ ಉತ್ತಮವಾಗಿರುವ ದಿನ. ಹೊಸ ಸಂಪರ್ಕಗಳು ಲಾಭದಾಯಕವಾಗಬಹುದು. ಸೃಜನಾತ್ಮಕ ಕಾರ್ಯಗಳಿಗೆ ಸಮಯ … Read more

ದಿನ ಪಂಚಾಂಗ | 2 ಜೂನ್‌ 2025 | ಇವತ್ತು ರಾಹುಕಾಲ, ಯಮಗಂಡ ಕಾಲ ಯಾವಾಗಿದೆ? ಶುಭ ಸಮಯ ಯಾವುದು?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಸೋಮವಾರ, 2 ಜೂನ್‌ 2025 ಸೂರ್ಯೋದಯ : 5.59 am ಸೂರ್ಯಾಸ್ತ : 6.53 pm ನಕ್ಷತ್ರ : ಮಘ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.30 ರಿಂದ 5.14ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.52 ರಿಂದ 5.59ರವರೆಗೆ ಅಭಿಜಿತ್‌ ಮಧ್ಯಾಹ್ನ 12 ರಿಂದ 12.52ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.35 ರಿಂದ 3.26ರವರಗೆ ಗೋಧೂಳಿ ಮುಹೂರ್ತ ಸಂಜೆ 6.52 ರಿಂದ 7.14ರವರೆಗೆ ರಾಹು, ಯಮಗಂಡ, ಗುಳಿಕ … Read more

ಮದುವೆ ಸಮಾರಂಭದಿಂದ ಮನೆಗೆ ಹಿಂತಿರುಗಿದ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕುಟುಂಬದವರೆಲ್ಲ ಮದುವೆ ಸಮಾರಂಭಕ್ಕೆ (Marriage) ತೆರಳಿದ್ದಾಗ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಅಣ್ಣಾನಗರದ ನಾಜೀಮಾ ಬಾನು ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಜೀಮಾ ಬಾನು ಅವರು ಸಂಬಂಧಿಯ ಮದುವೆ ಸಮಾರಂಭಕ್ಕೆ ತೆರಳಿದ್ದರು. ಮರುದಿನ ಮನೆಗೆ ಮರಳಿದಾಗ ಬಾಗಿಲಿನ ಬೀಗ ಮುರಿಯಲಾಗಿತ್ತು. ಒಳಗೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗ – … Read more

ಜಾತಿ, ಆದಾಯ ಪ್ರಮಾಣ ಪತ್ರ ಸಕಾಲದಲ್ಲಿ ಒದಗಿಸಲು ಪಟ್ಟು, ತಹಶೀಲ್ದಾರ್‌ಗೆ ಮನವಿ

Rural-constituecny-Youth-Congress-protest

ಶಿವಮೊಗ್ಗ: ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು (Certificate) ಸಕಾಲದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಯುವ ಕಾಂಗ್ರೆಸ್‌ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್‌ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್‌, ಶುಲ್ಕ ವಿನಾಯಿತಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲೆ, ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಕಾಲದಲ್ಲಿ ದೊರೆಯದೆ ಪೋಷಕರು, ವಿದ್ಯಾರ್ಥಿಗಳು … Read more

ಶಿವಮೊಗ್ಗದಿಂದ ನಾನ್‌ ಸ್ಟಾಪ್‌ ಬಸ್‌ ಹತ್ತಿದ್ದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ನಾನ್‌ ಸ್ಟಾಪ್‌ (Non Stop) ಬಸ್ಸಿನಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳಿದ್ದ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. ರೇಣುಕಮ್ಮ ಎಂಬುವವರು ಶಿವಮೊಗ್ಗ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಶಿಕಾರಿಪುರ ಕೋರ್ಟ್‌ ಸಮೀಪ ಬಸ್‌ ತೆರಳುವಾಗ ಕೊರಳಲ್ಲಿದ್ದ ಎರಡು ಎಳೆಯ ಬಂಗಾರದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. 35 ಗ್ರಾಂ ಮಾಂಗಲ್ಯ ಸರಕ್ಕೆ ಅಂದಾಜು 85 ಸಾವಿರ ರೂ. ಇದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ವಸತಿ ಶಾಲೆ ಸಿಬ್ಬಂದಿ, ವಿವಿಧ ಬೇಡಿಕೆ ಈಡೇರಿಕೆಗೆ ಪಟ್ಟು

Protest-by-residential-school-staff-in-Shimoga-

ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಸತಿ ಶಾಲೆಗಳ ನೌಕರರ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ (Protest) ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬೋಧಕ, ಬೋಧಕೇತರ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್‌ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್‌, ಶುಲ್ಕ ವಿನಾಯಿತಿ ನೆಹರು ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ವಸತಿ ಶಿಕ್ಷಣ ನಿರ್ದೇಶನಾಲಯ ರಚಿಸಬೇಕು. ಇಲ್ಲವೆ ಎಸ್‌.ಸಿ, ಎಸ್‌.ಟಿ, ಬಿ.ಸಿ … Read more