ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಭೀಕರ ಅಪಘಾತ, ಫೋಟೊಗ್ರಾಫರ್‌ ಕೊನೆಯುಸಿರು

Car-mishap-near-Pillanagiri

ಶಿವಮೊಗ್ಗ: ನಿಂತಿದ್ದ ಗೂಡ್ಸ್‌ ವಾಹನಕ್ಕೆ ಕಾರು ಡಿಕ್ಕಿಯಾಗಿ (Car Mishap) ಫೋಟೊಗ್ರಾಫರ್‌ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಸಮೀಪ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಹೆಚ್‌.ಪಿ.ಚೇತನ್‌ (36) ಮೃತ ಫೋಟೊಗ್ರಾಫರ್‌. ಸ್ನೇಹಿತನೊಂದಿಗೆ ಕಾರಿನಲ್ಲಿ ಶಿವಮೊಗ್ಗದಿಂದ ತಮ್ಮೂರು ಭದ್ರಾವತಿ ತಾಲೂಕು ಹನುಮಂತಾಪುರಕ್ಕೆ ತೆರಳುವಾಗ ನಿಂತಿದ್ದ ಗೂಡ್ಸ್‌ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಚೇತನ್‌ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಚೇತನ್‌ ಸ್ನೇಹಿತ ಶಿವು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್‌ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್‌, ಶುಲ್ಕ ವಿನಾಯಿತಿ

020823-Private-Jets-visit-Shivamogga-Airport-at-Sogane.webp

ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ (Airport) ವೈಮಾನಿಕ ತರಬೇತಿ ಸಂಸ್ಥೆ (ಎಫ್‌.ಟಿ.ಓ) ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್‌ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಇಲ್ಲಿ 100 ಪೈಲೆಟ್‌ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಶಿವಮೊಗ್ಗದಲ್ಲಿ ವೈಮಾನಿಕ ತರಬೇತಿ (ಎಫ್.ಟಿ.ಓ) ಸಂಸ್ಥೆ ಆರಂಭಕ್ಕೆ ಅನುಭವಿ ಖಾಸಗಿ ಏಜೆನ್ಸಿಗಳಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಬಿಡ್‌ದಾರರು ಇಲ್ಲಿ ಎಫ್‌.ಟಿ.ಓ ನಿರ್ಮಿಸಿ, 20 ವರ್ಷ ನಿರ್ವಹಣೆ ಮಾಡಬೇಕು. ಆದರೆ ಇದಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು ಷರತ್ತು ವಿಧಿಸಿದೆ. ಎಲ್ಲವು ರೂಲ್ಸ್‌ … Read more

ಶಿವಮೊಗ್ಗದ ಹವಾಮಾನ | 26 ಮೇ 2025 | ಜಿಲ್ಲೆಯಲ್ಲಿ ಇವತ್ತೂ ಮಳೆ, ತಾಪಮಾನ ಇಳಿಕೆ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆ ಮುಂದುವರೆದಿದೆ. ಹಲವು ಕಡೆ ಇವತ್ತು ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. (Weather Report) ತಾಲೂಕುವಾರು ಎಲ್ಲೆಲ್ಲಿ ಹೇಗಿರುತ್ತೆ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ … Read more

ದಿನ ಪಂಚಾಂಗ | 26 ಮೇ 2025 | ಇವತ್ತು ರಾಹುಕಾಲ, ಯಮಗಂಡ ಕಾಲ ಯಾವಾಗಿದೆ? ಶುಭ ಸಮಯ ಯಾವುದು?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಸೋಮವಾರ, 26 ಮೇ 2025 ಸೂರ್ಯೋದಯ : 5.59 am ಸೂರ್ಯಾಸ್ತ : 6.51 pm ನಕ್ಷತ್ರ : ಭರಣಿ ರಾಹು ಕಾಲ ಬೆಳಗ್ಗೆ 7.30 ರಿಂದ 9ರವರೆಗೆ ಗುಳಿಕ ಕಾಲ ಮಧ್ಯಾಹ್ನ 1.30 ರಿಂದ 3ರವರೆಗೆ ಯಮಗಂಡ ಕಾಲ ಬೆಳಗ್ಗೆ 10.30 ರಿಂದ 12ರವರೆಗೆ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.30 ರಿಂದ 5.14ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.52 ರಿಂದ 5.59ರವರೆಗೆ ಅಭಿಜಿತ್‌ ಬೆಳಗ್ಗೆ … Read more

ಶಿವಮೊಗ್ಗದಲ್ಲಿ ಸೌಮ್ಯಾ ರೆಡ್ಡಿ, ಮಹಿಳಾ ಕಾಂಗ್ರೆಸ್‌ ಸಭೆ, ಕಾರ್ಯಕರ್ತೆಯರಿಗೆ ಮಹತ್ವದ ಸಲಹೆ, ಏನೇನು ಹೇಳಿದರು?

Congress-leader-Sowmya-Reddy-in-Shimoga.

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತೆಯರ ಸಭೆ (Meeting) ಆಯೋಜಿಸಲಾಗಿತ್ತು. ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಸಭೆ ಉದ್ಘಾಟಿಸಿದರು. ಸೌಮ್ಯಾ ರೆಡ್ಡಿ ಏನೆಲ್ಲ ಹೇಳಿದರು? ಮುಂಬರಲಿರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತೆಯರು ಶ್ರಮ ವಹಿಸಬೇಕು. ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದರೆ ಮಾತ್ರ ಜನಸೇವೆ ಮಾಡಲು ಹಾಗೂ ಅಧಿಕಾರದಲ್ಲಿ ಇರಲು ಸಾಧ್ಯ. ಕಾರ್ಯಕರ್ತೆಯರು ಬೂತ್‌ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು. … Read more

BREAKING NEWS – ತುಂಗಾ ಜಲಾಶಯ ಭರ್ತಿ, ನಾಲ್ಕು ಗೇಟ್‌ಗಳು ಓಪನ್‌

Tunga-dam-full-four-gates-opened

ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯ (Tunga Dam) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಹರಿಸಲಾಗುತ್ತಿದೆ. ಇಂದು ಸಂಜೆ ವೇಳೆಗೆ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿದ್ದರಿಂದ ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ನಾಲ್ಕು ಗೇಟುಗಳ ಮೂಲಕ ಒಟ್ಟು 2000 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪ್ರತಿ ಗೇಟನ್ನು ಅರ್ಧ ಇಂಚಿನಷ್ಟು ಮೇಲೆತ್ತಿ ತಲಾ 500 ಕ್ಯೂಸೆಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಒಳ ಹರಿವು ಹೆಚ್ಚಳವಾದರೆ ಮತ್ತೊಂದು ಗೇಟ್‌ ಮೇಲೆತ್ತುವ ಸಾಧ್ಯತೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ, ಬೆಳಗ್ಗೆಯಿಂದ ನಿರಂತರ ವರ್ಷಧಾರೆ, ಅಲ್ಲಲ್ಲಿ ಹಾನಿ, ಇಲ್ಲಿದೆ ಟಾಪ್‌ 10 ಮಳೆ ಸುದ್ದಿ

Rain-General-Image-youth-With-an-Umbrella

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ (Rain Alert) ಜೋರಾಗಿದೆ. ಮಲೆನಾಡಿನ ನಡುಮನೆ ಹೊಸನಗರದಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಮುಂಗಾರು ಆರಂಭಕ್ಕು ಮುನ್ನವೆ ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಉಂಟಾಗಿದೆ. ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ನಿರಂತರ ಮಳೆಯಾಗುತ್ತಿದೆ. ವಾತಾವರಣವು ತಂಪಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ, ಇಲ್ಲಿದೆ ಫಟಾಫಟ್‌ ನ್ಯೂಸ್‌ ಇದನ್ನೂ ಓದಿ » ಸಹ್ಯಾದ್ರಿ ಕಾಲೇಜಿನಲ್ಲಿ ಪಾಠ ಮುಗಿಸಿ ಕೊಠಡಿಗೆ ಮರಳಿದ ಲೆಕ್ಚರರ್‌ಗೆ ಕಾದಿತ್ತು ಶಾಕ್ ಇದನ್ನೂ ಓದಿ » ಶಿವಮೊಗ್ಗದಿಂದ ಲಕ್ಷ … Read more

ಪ್ರಶ್ನೆ ಪತ್ರಿಕೆ ಗೊಂದಲ ವಿಚಾರ, ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರಿಂದ ಮಹತ್ವದ ಪ್ರಕಟಣೆ

Kuvempu-University-Examination-Registrar-sm-gopinath

ಶಂಕರಘಟ್ಟ: ಪ್ರಶ್ನೆ ಪತ್ರಿಕೆ ಗೊಂದಲದಿಂದ ಬಿ.ಎ. 6ನೇ ಸೆಮಿಸ್ಟರ್‌ ಕನ್ನಡ ಐಚ್ಛಿಕ ಪರೀಕ್ಷೆಯನ್ನು (Examination) ಮುಂದೂಡಲಾಗಿದೆ. ಪರೀಕ್ಷೆಯ ದಿನಾಂಕವನ್ನು ಮುಂದೆ ತಿಳಿಸಲಾಗುತ್ತದೆ. ಇನ್ನು, ಗೊಂದಲಕ್ಕೆ ಕಾರಣರಾದ ಅಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ತಿಳಿಸಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಉಂಟಾಗಿದ್ದ ಗೊಂದಲದಿಂದ ಇಂದು ನಡೆಯಬೇಕಿದ್ದ ಪರೀಕ್ಷೆ ದಿಢೀರ್‌ ಮುಂದೂಡಿಕೆಯಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಈಗ ಗೊಂದಲಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ. ವಿವಿ … Read more

ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್‌, ಶಿಕಾರಿಪುರದಲ್ಲಿ ಮಹಜರ್‌

madenuru-manu-case-police-visit-shikaripura

ಶಿಕಾರಿಪುರ: ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಟ (Actor) ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಗೆ ಬೆಂಗಳೂರು ಪೊಲೀಸರು ಇವತ್ತು ಶಿಕಾರಿಪುರಕ್ಕೆ ಆಗಮಿಸಿದ್ದರು. ಸಂತ್ರಸ್ತೆಯನ್ನು ಕರೆತಂದಿದ್ದ ಪೊಲೀಸರು ಇಲ್ಲಿನ ಲಾಡ್ಜ್‌ ಒಂದರಲ್ಲಿ ಮಹಜರ್‌ ಪ್ರಕ್ರಿಯೆ ನಡೆಸಿದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಸಂತ್ರಸ್ತೆಯನ್ನು ಶಿಕಾರಿಪುರ ಪಟ್ಟಣದ ಲಾಡ್ಜ್‌ಗೆ ಕರೆತಂದಿದ್ದರು. ಅವರು ತಂಗಿದ್ದ ಕೊಠಡಿಗಳು, ಘಟನೆ ನಡೆದಿದೆ ಎಂದು ಆರೋಪಿಸಲಾಗಿರುವ ಕೊಠಡಿಗಳಲ್ಲಿ ಮಹಜರ್‌ ನಡೆಸಿದರು. 2022ರಲ್ಲಿ ಶಿಕಾರಿಪುರದಲ್ಲಿ ಕಾರ್ಯಕ್ರಮ ಒಂದಕ್ಕೆ ಮಡೆನೂರು ಮನು, ಸಂತ್ರಸ್ತೆ ಸೇರಿ ಹಲವರು … Read more