ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ (Rain Alert) ಜೋರಾಗಿದೆ. ಮಲೆನಾಡಿನ ನಡುಮನೆ ಹೊಸನಗರದಲ್ಲಿ ಭಾರಿ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಮುಂಗಾರು ಆರಂಭಕ್ಕು ಮುನ್ನವೆ ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಉಂಟಾಗಿದೆ.
ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ನಿರಂತರ ಮಳೆಯಾಗುತ್ತಿದೆ. ವಾತಾವರಣವು ತಂಪಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ, ಇಲ್ಲಿದೆ ಫಟಾಫಟ್ ನ್ಯೂಸ್
ಯಲ್ಲೋ ಅಲರ್ಟ್ ಪ್ರಕಟ
ಶಿವಮೊಗ್ಗ: ಹವಾಮಾನ ಇಲಾಖೆ ಇವತ್ತು ಶಿವಮೊಗ್ಗ ಜಿಲ್ಲೆಗೆ ಯಲ್ಲೋ ಅಲರ್ಟ್ ಪ್ರಕಟಿಸಿದೆ. ಇಂದು ಬೆಳಗ್ಗೆ 8.30 ರಿಂದ 10.30ರವರೆಗೆ ಜಿಲ್ಲೆಯಲ್ಲಿ ಸರಾಸರಿ 6.5 ಮಿ.ಮೀ ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು, ಜಿಲ್ಲೆಯಲ್ಲಿ ಇಡೀ ದಿನ ಮಳೆಯಾಗುವ ಸಾಧ್ಯತೆ ಇದೆ.
ತುಂಗಾ ಡ್ಯಾಮ್ ಭರ್ತಿ
ಗಾಜನೂರು: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗಿದ್ದು ತುಂಗಾ ಜಲಾಶಯ ಗರಿಷ್ಠ ಮಟ್ಟಕ್ಕೆ ತಲುಪಿದೆ. 588.24 ಮೀಟರ್ ಸಾಮರ್ಥ್ಯದ ತುಂಗಾ ಡ್ಯಾಂನಲ್ಲಿ ಪ್ರಸ್ತುತ 587.84 ಮೀಟರ್ ನೀರು ಸಂಗ್ರಹವಾಗಿದೆ. ಯಾವುದೇ ಸಂದರ್ಭ ನದಿಗೆ ನೀರು ಹರಿಸಲಾಗುತ್ತದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇವತ್ತು ಮಧ್ಯಾಹ್ನದ ಹೊತ್ತಿಗೆ 800 ಕ್ಯೂಸೆಕ್ ನೀರನ್ನು ಪವರ್ ಹೌಸ್‌ಗೆ ನೀರು ಹರಿಸಲು ಯೋಜಿಸಲಾಗಿದೆ.
ಲಿಂಗನಮಕ್ಕಿಗೆ ಒಳಹರಿವು ಏರಿಕೆ
ಲಿಂಗನಮಕ್ಕಿ: ಹಿನ್ನೀರು ಭಾಗದಲ್ಲಿ ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 10,954 ಕ್ಯೂಸೆಕ್ ಒಳ ಹರಿವು ಇದೆ. ಕಳೆದ 24 ಗಂಟೆಯಿಲ್ಲಿ ನೀರಿನ ಮಟ್ಟ 0.35 ಅಡಿಗಳಷ್ಟು ಏರಿಕೆಯಾಗಿದೆ. ಜಲಾಶಯದ ನೀರಿನ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1764 ಅಡಿಗೆ ತಲುಪಿದೆ.
ಇದನ್ನೂ ಓದಿ » ಸಹ್ಯಾದ್ರಿ ಕಾಲೇಜಿನಲ್ಲಿ ಪಾಠ ಮುಗಿಸಿ ಕೊಠಡಿಗೆ ಮರಳಿದ ಲೆಕ್ಚರರ್‌ಗೆ ಕಾದಿತ್ತು ಶಾಕ್
ಹೊಸನಗರದಲ್ಲಿ ಮಳೆ ಅಬ್ಬರ
ಹೊಸನಗರ: ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ತಾಲೂಕಿನ ವಿವಿಧೆಡೆ ನಿರಂತರ ಮಳೆ ಸುರಿದಿದೆ. ಮಾಣಿ ವ್ಯಾಪ್ತಿಯಲ್ಲಿ 129 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 100 ಮಿ.ಮೀ, ಹುಲಿಕಲ್‌ನಲ್ಲಿ 179 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 154 ಮಿ.ಮೀ, ಚಕ್ರಾ 197 ಮಿ.ಮೀ, ಸಾವೇಹಕ್ಲು 184 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಶಿವಮೊಗ್ಗದಿಂದ ಲಕ್ಷ ಲಕ್ಷ ಮೌಲ್ಯದ ಅಡಿಕೆ ಹೊತ್ತು ಸಾಗಿದ ಲಾರಿ ನಾಪತ್ತೆ, ಡ್ರೈವರ್ ಮೊಬೈಲ್ ಸ್ವಿಚ್ ಆಫ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿ
ಹೊಸನಗರ: ತಾಲ್ಲೂಕಿನ ಬೈಂದೂರು– ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ಸಿ ಮಳೆ ಪರಿಣಾಮ ಹದಗೆಟ್ಟಿದೆ. ರಸ್ತೆಯ ಇಕ್ಕೆಲಗಳಲ್ಲಿನ ಡಾಂಬರು ಕೊಚ್ಚಿಕೊಂಡು ಹೋಗಿದೆ. ಚರಂಡಿಯಲ್ಲಿ ಮಣ್ಣು ಸಂಗ್ರಹವಾಗಿದ್ದು, ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೊಂಡಗುಂಡಿಗಳಿಂದ ಆವೃತವಾಗಿದ್ದ ರಸ್ತೆಯಲ್ಲಿ ನೀರು ತುಂಬಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಶಿವಮೊಗ್ಗ– ಕುಂದಾಪುರ, ಯಡೂರು–ಮಾಸ್ತಿಕಟ್ಟೆ, ಹೊಸನಗರ– ತೀರ್ಥಹಳ್ಳಿ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿವೆ.

ಕಟ್ಟಡಗಳ ಮೇಲೆ ಉರುಳಿದ ಮರಗಳು
ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ವಿವಿಧೆಡೆ ಮರಗಳು ಧರೆಗುರುಳಿವೆ. ಮನೆಗಳ ಮೇಲೆ ಮರಗಳು ಉರುಳಿರುವ ವರದಿಯಾಗಿದೆ. ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಾರು ಗ್ರಾಮದ ಸುಪ್ರೀತ್ ಭಟ್ ಅವರ ಭತ್ತದ ಪಣತದ ಮನೆ ಮೇಲೆ ಮಾವಿನ ಮರ ಉರುಳಿ ಹಾನಿ ಸಂಭವಿಸಿದೆ. ಕಸಬಾ ಹೋಬಳಿಯ ತುಡ್ಕಿ ಗ್ರಾಮದ ಮುಕುಂದ ಅವರ ಮನೆ ಮೇಲೆ ಮರ ಬಿದ್ದು ಗೋಡೆ, ಹಂಚಿಗೆ ಹಾನಿಯಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ವ್ಯತ್ಯಯ, ಯಾವಾಗ?
ವಿದ್ಯುತ್ ವ್ಯತ್ಯಯ, ನೆಟ್‌ವರ್ಕ್ ಇಲ್ಲ
ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ಭಾರಿ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯವಾಗಿದೆ. ಆಗುಂಬೆ ಹೋಬಳಿಯ ಹಲವೆಡೆ ಕಳೆದ ಎರಡು ದಿನದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಹಲವೆಡೆ ಇದೇ ಸ್ಥಿತಿ ಇದೆ. ಮೊಬೈಲ್ ನೆಟ್‌ವರ್ಕ್ ಕೂಡ ತೊಂದರೆ ಆಗಿದೆ.
ಇದನ್ನೂ ಓದಿ » ಫೈನಾನ್ಸ್ ಸಿಬ್ಬಂದಿ ಕಿರುಕುಳದ ಆರೋಪ, ಶಿವಮೊಗ್ಗದಲ್ಲಿ ವಿಷ ಸೇವಿಸಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಸಾವು
ಜೋಗ ಮಾರ್ಗದಲ್ಲಿ ಉರುಳಿದ ಮರ
ಕಾರ್ಗಲ್: ಜೋಗ ಮಾರ್ಗದ ಮುಖ್ಯ ರಸ್ತೆಯಲ್ಲಿ ಮರ ಧರೆಗುರುಳಿತ್ತು. ಇದರಿಂದ ಕಾರ್ಗಲ್ ಜೋಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. 11 ಕೆ.ವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿತ್ತು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಣ್ಣು ಮೇಳ, ಅಪರೂಪದ ಮಾವು, ಹಲಸು ಮಾರಾಟ, ಯಾವೆಲ್ಲ ವೆರೈಟಿಯ ಹಣ್ಣುಗಳಿವೆ?
ಹಳ್ಳ, ಕೊಳ್ಳಗಳಿಗೆ ಜೀವ ಕಳೆ
ರಿಪ್ಪನ್‌ಪೇಟೆ: ಮುಂಗಾರು ಪೂರ್ವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ಹಳ್ಳ, ಕೊಳ್ಳಗಳಿಗೆ ಜೀವ ಕಳೆ ಬರುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮೇ ತಿಂಗಳ ಕೊನೆಯಲ್ಲೇ ನೀರಿನ ಹರಿವು ಕಾಣಿಸುತ್ತಿದೆ.
ಇದನ್ನೂ ಓದಿ » ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಕೇಸ್, ಶಿಕಾರಿಪುರದಲ್ಲಿ ಮಹಜರ್
ಇನ್ನೆರಡು ದಿನ ಭಾರಿ ಮಳೆ
ಶಿವಮೊಗ್ಗ: ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮೇ 26 ಮತ್ತು 27ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 28 ಮತ್ತು 29ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಡೆ ಕ್ಷಣದಲ್ಲಿ ಇದು ಬದಲಾಗುವ ಸಂಭವವಿದೆ.
ಇದನ್ನೂ ಓದಿ » ಪ್ರಶ್ನೆ ಪತ್ರಿಕೆ ಗೊಂದಲ ವಿಚಾರ, ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವರಿಂದ ಮಹತ್ವದ ಪ್ರಕಟಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200