ಶಿವಮೊಗ್ಗದಲ್ಲೂ ಇದ್ದಾರಾ ಪಾಕಿಸ್ತಾನಿಯರು?, ‘ಪಾಕ್‌ ಪ್ರಜೆಗಳನ್ನು ಹೊರಗಟ್ಟಲು ಕಾಂಗ್ರೆಸ್‌ ಉದಾಸೀನʼ, ಸಂಸದ ಬೇಸರ

BY-Raghavendra-Press-Meet

ಶಿವಮೊಗ್ಗ: ಪಾಕಿಸ್ತಾನದ (Pakistan) ಪ್ರಜೆಗಳು ಇನ್ನೂ ರಾಜ್ಯದ ಅಲ್ಲಲ್ಲಿ ಇರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಉದಾಸೀನ ಮಾಡದೆ ಇಂತಹವರನ್ನು ಪತ್ತೆ ಮಾಡಿ 24 ಗಂಟೆಯೊಳಗೆ ಅವರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಪೆಹಲ್ಗಾಮ್‌ ದಾಳಿ ಬೆನ್ನಿಗೆ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಯೊಳಗೆ ದೇಶ ತೊರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ ಸೂಚನೆ ನೀಡಿದ್ದರು. ಬಿಜೆಪಿ ಆಡಳಿತದಲ್ಲಿರುವ ಎಲ್ಲ … Read more

ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗೆ ವಿರೋಧ, ನಿರಂತರ ಹೋರಾಟದ ಎಚ್ಚರಿಕೆ ನೀಡಿದ ಜನ

060525 Soraba alahallai shiruru villagers protest

ಸಾಗರ: ಆಲಳ್ಳಿ–ಶಿರೂರು ಗ್ರಾಮದಲ್ಲಿ ಬಾರ್ ಆ್ಯಂಡ್‌ ರೆಸ್ಟೋರೆಂಟ್ (Restaurant) ಆರಂಭಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸಮಾಲೋಚನಾ ಸಭೆ ನಡೆಸಿದರು. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿರುವವರೇ ಹೆಚ್ಚಿದ್ದಾರೆ. ಇಲ್ಲಿ ಹೊಸದಾಗಿ ಬಾರ್ ತೆರೆದರೆ ಬಡವರು ಮದ್ಯದ ವ್ಯಸನಕ್ಕೆ ದಾಸರಾಗುವ ಸಾಧ್ಯತೆ ಹೆಚ್ಚಿದೆ. ಸ್ಥಳೀಯರ ವಿರೋಧದ ನಡುವೆಯೂ ಬಾರ್ ಆರಂಭಕ್ಕೆ ಸಂಬಂಧಪಟ್ಟ ಇಲಾಖೆ ಒಪ್ಪಿಗೆ ನೀಡಿದರೆ ಸುತ್ತಮುತ್ತಲ ಗ್ರಾಮಸ್ಥರು ನಿರಂತರ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ಪ್ರಮುಖರಾದ ಅಶೋಕ್ ಬರದವಳ್ಳಿ, ಹೆಚ್.ಎನ್.ದಿವಾಕರ್, ಸುರೇಶ್, ಶಾಂತಕುಮಾರ್, … Read more

ಧಗಧಗ ಹೊತ್ತು ಉರಿದ ವಿದ್ಯುತ್‌ ಕಂಬದಲ್ಲಿದ್ದ ಕೇಬಲ್‌, ಸ್ಥಳೀಯರಲ್ಲಿ ಆತಂಕ

Cable-Wire-burnt-at-manchikere-vaddigere

ಶಿಕಾರಿಪುರ: ಶಾರ್ಟ್‌ ಸರ್ಕ್ಯೂಟ್‌ನಿಂದ (Short Circuit) ವಿದ್ಯುತ್‌ ಕಂಬದಲ್ಲಿದ್ದ ಕೇಬಲ್‌ ಹೊತ್ತಿ ಉರಿದಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಮಂಚಿನಕೊಪ್ಪ ವಡ್ಡಿಗೇರೆ ಬಳಿ ಘಟನೆ ಸಂಭವಿಸಿದೆ. ವಿದ್ಯುತ್‌ ಕಂಬದಲ್ಲಿ ಅಳವಡಿಸಿದ್ದ ಕೇಬಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದಿದೆ. ರಸ್ತೆಯಲ್ಲಿ ಹೋಗುವವರು ಇದನ್ನು ಗಮನಿಸಿ ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ » ರಾತ್ರಿ ಯುವಕನ ಕೊಲೆ, ಮತ್ತೊಬ್ಬನಿಗೆ ಗಾಯ, ಇಬ್ಬರು ವಶಕ್ಕೆ, ಘಟನೆ ಕಾರಣವಾಯ್ತ ಕ್ರಿಕೆಟ್‌?

ಹೊಸನಗರ ತಾಲೂಕಿನ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಹೊಸನಗರ: ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ನಡೆಯುವ ಹಿನ್ನೆಲೆ ಮೇ 6ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಜೇನಿ, ಮಾರುತಿಪುರ, ರಾಮಚಂದ್ರಾಪುರ, ಮೇಲಿನ ಬೆಸಿಗೆ, ಸೊನಲೆ ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಟೌನ್ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ » ರಾತ್ರಿ ಯುವಕನ ಕೊಲೆ, ಮತ್ತೊಬ್ಬನಿಗೆ ಗಾಯ, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಧಗೆ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಬಿಸಿಲಿನ ಧಗೆ ಮುಂದುವರೆಯಲಿದೆ. ಇವತ್ತು ಎಲ್ಲ ತಾಲೂಕಿನಲ್ಲಿ ತಾಪಮಾನ ಹೆಚ್ಚಳವಾಗಿರಲಿದೆ. (Weather Report) ಎಲ್ಲೆಲ್ಲಿ ಎಷ್ಟು ತಾಪಮಾನ ಇದೆ? ಇಲ್ಲಿದೆ ತಾಲೂಕುವಾರು ವಿವರ ತಾಲೂಕು ಗರಿಷ್ಠ (°C) ಕನಿಷ್ಠ (°C) ಶಿವಮೊಗ್ಗ 36 19 ಸಾಗರ 36 25 ತೀರ್ಥಹಳ್ಳಿ 34 18 ಹೊಸನಗರ 35 20 ಭದ್ರಾವತಿ 36 19 ಶಿಕಾರಿಪುರ 36 19 ಸೊರಬ 36 18 ಇದನ್ನೂ ಓದಿ » ಮಗನನ್ನು ರೈಲಿಗೆ ಹತ್ತಿಸಿ ಮನೆಗೆ ಬಂದ ದಂಪತಿಗೆ … Read more

ರಾತ್ರಿ ಯುವಕನ ಕೊಲೆ, ಮತ್ತೊಬ್ಬನಿಗೆ ಗಾಯ, ಇಬ್ಬರು ವಶಕ್ಕೆ, ಘಟನೆ ಕಾರಣವಾಯ್ತ ಕ್ರಿಕೆಟ್‌?

Police-Jeep-With-Light-New.

ಭದ್ರಾವತಿ: ಕ್ರಿಕೆಟ್‌ (Cricket) ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳವಾಗಿ ಒಬ್ಬಾತನನ್ನು ಹತ್ಯೆ ಮಾಡಲಾಗಿದೆ. ಮತ್ತೋರ್ವನಿಗೆ ಗಾಯವಾಗಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಅರುಣ್‌ (23) ಕೊಲೆಯಾಗಿದ್ದಾನೆ. ಸಂಜಯ್‌ ಎಂಬಾತ ಗಾಯಗೊಂಡಿದ್ದಾನೆ. ಕ್ರಿಕೆಟ್‌ ವಿಚಾರಕ್ಕೆ ಕಿರಿಕ್‌ ಸೋಮವಾರ ಸಂಜೆ ಕ್ರಿಕೆಟ್‌ ಆಡಿದ್ದರು. ರಾತ್ರಿ ಮದ್ಯ ಸೇವಿಸುವಾಗ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಸಂದರ್ಭ ಹತ್ಯೆಯಾಗಿದೆ ಎಂದು … Read more

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಏನೇನು ಸಮಸ್ಯೆಗೆ, ಏನೆಲ್ಲ ಪರಿಹಾರವಿದೆ?

DINA-BHAVISHYA

DINA BHAVISHYA ಇದನ್ನೂ ಓದಿ » ಅಡಿಕೆಗೆ ಕೆಂಪು ಮೂತಿ ಹುಳು ಬಾಧೆ, ನಿರ್ವಹಣೆ ಮಾಡೋದು ಹೇಗೆ? ಸಂಶೋಧನಾ ಕೇಂದ್ರದಿಂದ ಮಾಹಿತಿ

ದಿನ ಪಂಚಾಂಗ | ಇವತ್ತು ಯಾವ್ಯಾವ ಸಮಯ ಶುಭ? ಯಾವ ಸಮಯ ಅಶುಭ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಮಂಗಳವಾರ, 6 ಮೇ 2025 ಸೂರ್ಯೋದಯ : 6.04 am ಸೂರ್ಯಾಸ್ತ : 6.45 pm ನಕ್ಷತ್ರ : ಮಘ ಇದನ್ನೂ ಓದಿ » ಅಡಿಕೆಗೆ ಕೆಂಪು ಮೂತಿ ಹುಳು ಬಾಧೆ, ನಿರ್ವಹಣೆ ಮಾಡೋದು ಹೇಗೆ? ಸಂಶೋಧನಾ ಕೇಂದ್ರದಿಂದ ಮಾಹಿತಿ

ಶಿವಮೊಗ್ಗದ ವಿವಿಧ ಠಾಣೆ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

Police-Inspector-General-Image.webp

ಶಿವಮೊಗ್ಗ: ರಾಜ್ಯಾದ್ಯಂತ 27 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳ (Inspectors) ವರ್ಗಾಣೆಯಾಗಿದೆ. ಯಾರೆಲ್ಲ ವರ್ಗವಾಗಿದ್ದಾರೆ? » ಸಂತೋಷ್‌ ಕುಮಾರ್‌ ಡಿ.ಕೆ – ಶಿವಮೊಗ್ಗ ಸಂಚಾರ ವೃತ್ತದಿಂದ ವಿನೋಬನಗರ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದಾರೆ. » ಭರತ್‌ ಕುಮಾರ್‌ ಡಿ.ಆರ್‌ – ಮಹಿಳಾ ಠಾಣೆಯಿಂದ ವಿನೋಬನಗರ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದರು. ಈ ಆದೇಶ ರದ್ದುಗೊಳಿಸಲಾಗಿದೆ. » ದೇವರಾಜ ಟಿ.ವಿ – ಉಡುಪಿ ಜಿಲ್ಲೆ ಮಣಿಪಾಲ ಪೊಲೀಸ್‌ ಠಾಣೆಯಿಂದ ಶಿವಮೊಗ್ಗ ಸಂಚಾರ ವೃತ್ತಕ್ಕೆ ವರ್ಗಾವಣೆಯಾಗಿದ್ದಾರೆ. » … Read more

ಮಗನನ್ನು ರೈಲಿಗೆ ಹತ್ತಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಆಘಾತ, ಒಳಗಿಂದಲೇ ಲಾಕ್‌ ಆಗಿತ್ತು ಬಾಗಿಲು, ಆಗಿದ್ದೇನು?

BHADRAVATHI-NEWS-UPDATE

ಭದ್ರಾವತಿ: ಮಗನನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಹಿಂತಿರುಗುವಷ್ಟರಲ್ಲಿ ಮನೆಯಲ್ಲಿ ಚಿನ್ನಾಭರಣ, ನಗದು, ದುಬಾರಿ ವಾಚ್‌ ಕಳ್ಳತನವಾಗಿದೆ (Theft). ಭದ್ರಾವತಿಯ ಬಿ.ಹೆಚ್‌.ರಸ್ತೆಯ ಮೀನುಗಾರರ ಬೀದಿಯ ಬಾಲಕೃಷ್ಣ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಪುತ್ರನನ್ನು ರೈಲು ಹತ್ತಿಸಿ ಬರಲು ಬಾಲಕೃಷ್ಣ ಮತ್ತು ಅವರ ಪತ್ನಿ ರೈಲ್ವೆ ನಿಲ್ದಾಣಕ್ಕೆ ಹೋಗಿ ರಾತ್ರಿ 12 ಗಂಟೆಗೆ ಹೊತ್ತಿಗೆ ಮನೆಗೆ ಹಿಂತಿರುಗಿದ್ದರು. ಆಗ ಮನೆಯ ಒಳಗಿನಿಂದ ಲಾಕ್‌ ಆಗಿತ್ತು. ಬಾಗಿಲನ್ನು ಜೋರಾಗಿ ಒದ್ದು ಒಳಗೆ ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮೇಲ್ಛಾವಣಿಗೆ ಹಾಕಿದ್ದ ಶೀಟ್‌ … Read more