BREAKING NEWS – ಸೊರಬ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ

soraba breaking

SORABA, 26 JULY 2024 : ಸೊರಬ ತಾಲೂಕಿನಲ್ಲಿ ಭಾರಿ ಮಳೆ, ಗಾಳಿ ಮುಂದುವರೆದಿದೆ. ಈ ಹಿನ್ನೆಲೆ ಜು.27ರಂದು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ (HOLIDAY) ಘೋಷಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ. ಈಗಾಗಲೇ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ ⇓ ಶಿವಮೊಗ್ಗ ಜಿಲ್ಲೆಗೆ ಜು.27ರಂದು ಆರೆಂಜ್‌ ಅಲರ್ಟ್‌, 3 ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ

ಶಿವಮೊಗ್ಗದಲ್ಲಿ ಗಾಳಿ, ಮಳೆಗೆ ಫಾರಂ ಕುಸಿತ, ದೊಡ್ಡ ಸಂಖ್ಯೆಯ ಕೋಳಿಗಳು ಸಾವು

Farm-collapse-in-Shimoga-Mojappana-Hosuru

SHIMOGA, 26 JULY 2024 : ಗಾಳಿ, ಮಳೆಗೆ ಕೋಳಿ ಫಾರಂ (Farm) ಕುಸಿದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಶಿವಮೊಗ್ಗ ತಾಲೂಕು ಮೋಜಪ್ಪನ ಹೊಸೂರು ಗ್ರಾಮದಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಏಜಾಜ್‌ ಅಹಮದ್‌ ಎಂಬುವವರಿಗೆ ಸೇರಿದ ಫಾರಂ ಕಸಿದಿದೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಏಜಾಜ್‌ ಅಹಮದ್‌, ಮೂರು ವರ್ಷದ ಹಿಂದೆ ಕೋಳಿ ಫಾರಂ ಸ್ಥಾಪಿಸಿದ್ದೆವು. ಈಗ ಆರು ಸಾವಿರ ಕೋಳಿ ಮರಿಗಳನ್ನು ಬಿಟ್ಟಿದ್ದೆವು. ಈಗ ಅವು ದೊಡ್ಡವಾಗಿದ್ದವು. ಫಾರಂ ಕುಸಿದು ಹಲವು ಕೋಳಿಗಳು ಸಾವನ್ನಪ್ಪಿವೆ. ಫಾರಂನಲ್ಲಿ … Read more

ಹೊಸನಗರದಲ್ಲಿ ಕಡಿಮೆಯಾದ ಮಳೆ, ಚಕ್ರಾ, ಸಾವೇಹಕ್ಲುವಿನಿಂದ ಎಷ್ಟಿದೆ ಹೊರ ಹರಿವು?‌

Maani-Dam-in-Hosanagara-Taluk

SHIVAMOGGA LIVE NEWS | 23 JULY 2024 RAINFALL NEWS : ಹೊಸನಗರ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಹುಲಿಕಲ್‌, ಚಕ್ರಾ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮಳೆ? ಹೊಸನಗರ ತಾಲೂಕಿನ ಮಾನಿ ವ್ಯಾಪ್ತಿಯಲ್ಲಿ 55 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 71 ಮಿ.ಮೀ, ಹುಲಿಕಲ್‌ನಲ್ಲಿ 97 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 87 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 76 ಮಿ.ಮೀ, ಸಾವೇಹಕ್ಲುವಿನಲ್ಲಿ 60 ಮಿ.ಮೀ ಮಳೆಯಾಗಿದೆ. ಜಲಾಶಯದ ನೀರಿನ ಮಟ್ಟ ಮಾನಿ ಜಲಾಶಯದ … Read more

ಹೊಸನಗರದಲ್ಲಿ ತಗ್ಗಿದ ಮಳೆ ಅಬ್ಬರ, ಚಕ್ರ, ಸಾವೇಹಕ್ಲುವಿನಿಂದ ನೀರು ಹೊರಕ್ಕೆ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ?

Maani-Dam-in-Hosanagara-Taluk

SHIVAMOGGA LIVE NEWS | 21 JULY 2024 DAM LEVEL : ಹೊಸನಗರ ಭಾಗದಲ್ಲಿ ಮಳೆ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಜಲಾಶಯದ ಒಳ ಹರಿವು ಪ್ರಮಾಣ ಯಥಾಪ್ರಕಾರ ಮುಂದುವರೆದಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆಯಲ್ಲಿ ಹೊಸನಗರ ತಾಲೂಕಿನ ಮಾನಿ ಜಲಾಶಯ ಭಾಗದಲ್ಲಿ 42 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 65 ಮಿ.ಮೀ, ಹುಲಿಕಲ್‌ನಲ್ಲಿ 93 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 86 ಮಿ.ಮೀ, ಚಕ್ರಾದಲ್ಲಿ 110 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 95 ಮಿ.ಮೀ ಮಳೆಯಾಗಿದೆ. ಚಾಕ್ರ, … Read more

BREAKING NEWS – ಶಿವಮೊಗ್ಗ ತಾಲೂಕಿನ ಶಾಲೆ, ಕಾಲೇಜುಗಳಿಗೆ ಇವತ್ತು ರಜೆ

Thahasilhdar-Girish

SHIVAMOGGA LIVE NEWS | 20 JULY 2024 SHIMOGA : ಮಳೆ ಮುಂದುವರೆದ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ (Holiday) ಘೋಷಿಸಿ ತಹಶೀಲ್ದಾರ್‌ ಗಿರೀಶ್‌ ಅವರು ರಜೆ ಘೋಷಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿರುವ ತಹಶೀಲ್ದಾರ್‌ ಗಿರೀಶ್‌ ಅವರು, ‘ಶಿವಮೊಗ್ಗ ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು ಮಕ್ಕಳ ಹಿತದೃಷ್ಟಿಯಿಂದ ಜುಲೈ 20 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆʼ ಎಂದು ತಿಳಿಸಿದ್ದಾರೆ. ಶಿವಮೊಗ್ಗ ತಾಲೂಕು ಹೊರತುಪಡಿಸಿ … Read more

ತೀರ್ಥಹಳ್ಳಿ ಬೈಪಾಸ್‌ನಲ್ಲಿ ಮತ್ತೊಂದು ಕಡೆ ಭೂ ಕುಸಿತ

Thirthahalli-Bypass-road-second-landslide

SHIVAMOGGA LIVE NEWS | 17 JULY 2024 THIRTHAHALLI : ಕುರುವಳ್ಳಿ – ಬಾಳೆಬೈಲು ಬೈಪಾಸ್‌ ರಸ್ತೆಯ (Bypass Road) ಮತ್ತೊಂದು ಬದಿಯಲ್ಲಿ ಭೂಕುಸಿತ ಉಂಟಾಗಿದೆ. ಭಾರಿ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿದೆ. ಗುಡ್ಡದ ಮೇಲಿದ್ದ ಮಾವಿನ ಮರ ಉರುಳಿ ಬಿದ್ದಿದೆ. ಇದೇ ಬೈಪಾಸ್‌ನಲ್ಲಿ ಸೋಮವಾರ ಭೂಕುಸಿತ ಉಂಟಾಗಿತ್ತು. ಮಂಗಳವಾರ ಹೆದ್ದಾರಿಯ ತಡೆಗೋಡೆ ಕುಸಿದಿತ್ತು. ಮಣ್ಣು ಪೂರ್ತಿಯಾಗಿ ಬೈಪಾಸ್‌ ರಸ್ತೆಗೆ ಬಂದಿತ್ತು. ಈ ಮೊದಲು ಭೂ ಕುಸಿತ ಸಂಭವಿಸಿದ ಸ್ಥಳದ ಎದುರು ಭಾಗದಲ್ಲಿ ಭೂ ಕುಸಿತ … Read more

ಆಗುಂಬೆ, ಮೇಗರವಳ್ಳಿಯಲ್ಲಿ ಭಾರಿ ಮಳೆ, ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

agumbe-ghat-road-during-rainy-season

SHIVAMOGGA LIVE NEWS | 16 JULY 2024 RAINFALL REPORT : ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಆಗುಂಬೆ, ಮೇಗರವಳ್ಳಿ, ಮಾಳೂರು, ಆರಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಿ.ಮೀ ಮಳೆಯಾಗಿದೆ? ಆಗುಂಬೆ – 220 ಮಿ.ಮೀ, ಆರಗ – 102 ಮಿ.ಮೀ, ದೇವಂಗಿ – 82 ಮಿ.ಮೀ, ಅರಳಸುರುಳಿ –  110.4 ಮಿ.ಮೀ, ಕೋಣಂದೂರು –  44.8 ಮಿ.ಮೀ, ಮಾಳೂರು – 110.4 ಮಿ.ಮೀ, ಮೇಗರವಳ್ಳಿ –  198.4 ಮಿ.ಮೀ, ತೀರ್ಥಹಳ್ಳಿ … Read more

ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ, ರಸ್ತೆ, ತೋಟ, ಗದ್ದೆ ಜಲಾವೃತ, ಎಲ್ಲೆಲ್ಲಿ ಏನೇನಾಗಿದೆ? ಕಂಪ್ಲೀಟ್‌ ನ್ಯೂಸ್‌

RAIN-REPORT-THIRTHAHALLI-TALUK1.

SHIVAMOGGA LIVE NEWS | 17 JULY 2024 RAINFALL REPORT : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಜೋರು ಮಳೆಗೆ ತುಂಗಾ, ಮಾಲತಿ ನದಿಗಳು ಅಪಾಯದ ಮಟ್ಟಕ್ಕೆ ತಲುಪಿವೆ. ವಿವಿಧೆಡೆ ಮಳೆಯಿಂದ ಹಾನಿ ಉಂಟಾಗಿದೆ. ಇನ್ನೊಂದೆಡೆ ಕರಾವಳಿ ಜಿಲ್ಲೆಗಳಿಗೆ ಇವತ್ತೂ ರೆಡ್‌ ಅಲರ್ಟ್‌ ಇದೆ. ಹಾಗಾಗಿ ತೀರ್ಥಹಳ್ಳಿಯಲ್ಲಿ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಮಳೆಯಿಂದ ತೀರ್ಥಹಳ್ಳಿಯಲ್ಲಿ ಏನೇನಾಗಿದೆ?       ಇದನ್ನೂ ಓದಿ ⇓ ಶಿವಮೊಗ್ಗದಲ್ಲಿ ಥಂಡಿ ವಾತಾವರಣ, ತುಸು ಇಳಿದ … Read more

ತೀರ್ಥಹಳ್ಳಿ ಬೈಪಾಸ್‌ ರಸ್ತೆಯಲ್ಲಿ ಧರೆ ಕುಸಿತ, ವಾಹನ ಸಂಚಾರ ತಾತ್ಕಲಿಕ ಸ್ಥಗಿತ

kuruvalli-balebailu-bypass-road-mud

SHIVAMOGGA LIVE NEWS | 15 JULY 2024 THIRTHAHALLI : ಧರೆ ಕುಸಿದು ಬೈಪಾಸ್‌ ರಸ್ತೆ (Bypass Road) ಮೇಲೆ ಮಣ್ಣು ಬಿದ್ದಿದ್ದರಿಂದ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ತೀರ್ಥಹಳ್ಳಿಯ ಕುರುವಳ್ಳಿ – ಬಾಳೆಬೈಲು ನಡುವೆ ರಾಷ್ಟ್ರೀಯ ಹೆದ್ದಾರಿ 169ಎ ಬೈಪಾಸ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ವಿಚಾರ ತಿಳಿದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಇನ್ನು, ತೀರ್ಥಹಳ್ಳಿಯಲ್ಲಿ ಮಳೆ ಮುಂದುವರೆದಿದ್ದು, ಮಣ್ಣು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. … Read more

BREAKING NEWS – ಹೊಸನಗರ ತಾಲೂಕಿನಲ್ಲಿ ಶಾಲೆ, ಕಾಲೇಜುಗಳಿಗೆ ಒಂದು ದಿನ ರಜೆ

Tahasildhar Rashmi halesh

SHIVAMOGGA LIVE NEWS | 15 JULY 2024 HOSANAGARA : ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ದಿನ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜು.16 ರಂದು ರಜೆ ಘೋಷಿಸಿ ತಹಶೀಲ್ದಾರ್‌ ರಶ್ಮೀ ಹಾಲೇಶ್‌ ತಿಳಿಸಿದ್ದಾರೆ. ‘ಮಳೆ ಹಿನ್ನೆಲೆ ಒಂದು ದಿನ ರಜೆ ಘೋಷಿಸಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ ಮುಂದೆ ಮತ್ತೆ ರಜೆ ಘೋಷಿಸುವ ಕುರಿತು ತೀರ್ಮಾನಿಸಲಾಗುತ್ತದೆ’ ಎಂದು ತಹಶೀಲ್ದಾರ್‌ ರಶ್ಮೀ ಹಾಲೇಶ್‌ ಅವರು … Read more