ಶಿವಮೊಗ್ಗ ಜಿಲ್ಲೆಯ ಈವರೆಗಿನ ಟಾಪ್ 10 ನ್ಯೂಸ್ | 16 Feb 2023

Shivamogga Live Today News

ಶಿವಮೊಗ್ಗ (Shimoga) ಜಿಲ್ಲೆಯ ಈವರೆಗಿನ ಪ್ರಮುಖ 10 ಸುದ್ದಿ (News). ಕೆಳಗಿರುವ ಪ್ರತಿ ಹೆಡ್ ಲೈನ್ ಮುಂದಿನ ನೀಲಿ ಬಾಕ್ಸ್ ಮೇಲೆ ಕ್ಲಿಕ್ ಮಾಡಿದರೆ ಆ ಸುದ್ದಿಯನ್ನು ಪೂರ್ತಿಯಾಗಿ ಓದಬಹುದು. ಪುನಃ ಬ್ಯಾಕ್ ಬಂದು ಮತ್ತೊಂದು ಸುದ್ದಿ ಓದಬಹುದು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವಾರ ಅತ್ಯಂತ ಮಹತ್ವದ್ದು, ಕಾರಣವೇನು? ಮೊದಲು ಲ್ಯಾಂಡ್ ಆಗುವ ವಿಮಾನ ಯಾವುದು? – ಈ ಸುದ್ದಿ ಓದಲು ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಗೆ ವೈಭವದ ತೆರೆ – ಈ … Read more

ಅಗಲಿದ ಪ್ರಾಂಶುಪಾಲರಿಗೆ ಕಣ್ಣೀರ ವಿದಾಯ, ಘೋಷಣೆಯೊಂದಿಗೆ ಕಾಲೇಜು ಆವರಣದಲ್ಲಿ ಅಂತಿಮ ನಮನ

Last-Respect-to-Prof-Jagadish-in-NES-Law-College

SHIVAMOGGA LIVE NEWS | 16 FEBRURARY 2023 SHIMOGA : ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ಪ್ರಾಂಶುಪಾಲರಾದ (Principal) ಪ್ರೊ. ಜಿ.ಆರ್.ಜಗದೀಶ್ ಅವರ ನಿಧನಕ್ಕೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಕಾಲೇಜು ಆವರಣದಲ್ಲಿ ಪ್ರಾಂಶುಪಾಲರಿಗೆ ಅಂತಿಮ ನಮನ ಸಲ್ಲಿಸಿದ ವಿದ್ಯಾರ್ಥಿಗಳು, ಅವರ ಪರವಾಗಿ ಘೋಷಣೆ ಕೂಗಿ ಕಣ್ಣೀರ ವಿದಾಯ ಹೇಳಿದರು. ಪ್ರೊ. ಜಿ.ಆರ್.ಜಗದೀಶ್ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಆಘಾತಕ್ಕೊಳಗಾದವರು. ಕಾಲೇಜು ಆವರಣದಲ್ಲಿ ಅಂತಿಮ ದರ್ಶನ ಸಿಬಿಆರ್ ರಾಷ್ಟ್ರೀಯ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವಾರ ಅತ್ಯಂತ ಮಹತ್ವದ್ದು, ಕಾರಣವೇನು? ಮೊದಲು ಲ್ಯಾಂಡ್ ಆಗುವ ವಿಮಾನ ಯಾವುದು?

BY-Raghavendra-About-Shimoga-Airport

SHIVAMOGGA LIVE NEWS | 16 FEBRURARY 2023 SHIMOGA : ಸೋಗಾನೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣಕ್ಕೆ ಇನ್ನು ಎರಡು ವಾರ ಕಾಲ ಸಮಯ ಅತ್ಯಂತ ಮಹತ್ವದ್ದಾಗಿದೆ. ಲೈಸೆನ್ಸ್ (Licence) ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಕಳೆದ ವಾರ ವಿಮಾನಯಾನ ಪ್ರಾಧಿಕಾರದ (ಡಿಜಿಸಿಎ) ಅಧಿಕಾರಿಗಳ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿತ್ತು. … Read more

ಚಂದ್ರಗುತ್ತಿ ದೇವಸ್ಥಾನದ ಹುಂಡಿ ಎಣಿಕೆ, ಹರಿದು ಬಂತು ಲಕ್ಷ ಲಕ್ಷ ಕಾಣಿಕೆ

Chandragutti-Temple-Hundi-Counting

SHIVAMOGGA LIVE NEWS | 16 FEBRURARY 2023 SORABA : ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶೀ ರೇಣುಕಾಂಬ ದೇವಸ್ಥಾನದ ಹುಂಡಿ (Hundi) ಎಣಿಕೆ ಕಾರ್ಯ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು. 25 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ತಾಲೂಕು  ದಂಡಾಧಿಕಾರಿ ಹುಸೇನ್ ಸರಕಾವಸ್ ಅವರ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು. ಫೆಬ್ರವರಿ ತಿಂಗಳಿನಲ್ಲಿ ಹುಂಡಿ ಹಣ ಏಣಿಸಿದಾಗ 25,67,710 ರೂ., ಸಂಗ್ರಹವಾಗಿದೆ. 2022 ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್ … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿ, ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ

KL-Ashok-On-DCC-Bank-Recruitment-Scam

SHIVAMOGGA LIVE NEWS | 16 FEBRURARY 2023 SHIMOGA : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೇಮಕಾತಿ ಸಂಬಂಧ ಲೋಕಾಯುಕ್ತಕ್ಕೆ (Lokayuktha) ದೂರು ನೀಡುವುದಾಗಿ ಸಮಾನ ಮನಸ್ಕ ವೇದಿಕೆಯ ಕೆ.ಎಲ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್.ಅಶೋಕ್ ಅವರು, ಡಿಸಿಸಿ ಬ್ಯಾಂಕ್ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನವಿದೆ. ಈ ಸಂಬಂಧ ಅಭ್ಯರ್ಥಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ನಿಗದಿಯಾಗಿರುವ ಸಂದರ್ಶನ ನಿಲ್ಲಿಸಬೇಕು. ಈ ಸಂಬಂಧ ಲೋಕಾಯುಕ್ತಕ್ಕೆ (Lokayuktha) ದೂರು ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಮುಖರಾದ ಅನನ್ಯ ಶಿವಕುಮಾರ್ … Read more

ಆಯನೂರು ಬಳಿ ಹೆದ್ದಾರಿ ಪಕ್ಕದ ಪ್ಲಾಂಟೇಷನ್ ನಲ್ಲಿ ಬೆಂಕಿ

Ayanur Graphics

SHIVAMOGGA LIVE NEWS | 16 FEBRURARY 2023 AYANUR : ನೀಲಗರಿ ಪ್ಲಾಂಟೇಷನ್ ನಲ್ಲಿ ಕಳೆದ ರಾತ್ರಿ ಬೆಂಕಿ (Fire) ಕಾಣಿಸಿಕೊಂಡಿದೆ. ಕೂಡಲೆ ಬೆಂಕಿ ನಂದಿಸುವ ಕೆಲಸ ನಡೆದಿದೆ. ಆಯನೂರು ಸಮೀಪ ದಾನವಂದಿ ಬಳಿ ಬುಧವಾರ ಘಟನೆ ಸಂಭವಿಸಿದೆ. ಇದನ್ನೂ ಓದಿ – 30 ದಿನ ಗಡುವು, ನೋಂದಣಿಗೆ ಅರ್ಜಿ ಸಲ್ಲಿಸದಿದ್ದರೆ ಕ್ರಮದ ಎಚ್ಚರಿಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನೀಲಗಿರಿ ಪ್ಲಾಂಟೇಷನ್ ನಲ್ಲಿ ಬೆಂಕಿ (Fire) ಕಾಣಿಸಿಕೊಂಡಿತ್ತು. ಈಚೆಗೆ ಮರಗಳ ಕಡಿತಲೆ ಮಾಡಲಾಗಿತ್ತು. ಹಾಗಾಗಿ ಸಣ್ಣಪುಟ್ಟ ಮರಗಳಷ್ಟೆ … Read more

ತೋಟದ ಮನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಪುತ್ರ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ

crime name image

SHIVAMOGGA LIVE NEWS | 16 FEBRURARY 2023 ANANDAPURA : ಜಿಲ್ಲಾ ಪಂಚಾಯಿತಿ (zilla panchayat) ಮಾಜಿ ಸದಸ್ಯ ಗೋಪಾಲ್ ಅವರ ಪುತ್ರ ಶರತ್ ತೋಟದ ಮನೆಯಲ್ಲಿ (farm house) ನೇಣು ಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆನಂದಪುರದ ತಾವರೆಹಳ್ಳಿಯ ತೋಟದ ಮನೆಯಲ್ಲಿ ಘಟನೆ ಸಂಭವಿಸಿದೆ. ಶರತ್ (28) ತೋಟದ ಮನೆಯಲ್ಲಿ (farm house) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ … Read more

ಶಿವಮೊಗ್ಗದ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ

Shimoga-Sagar-Highway-Road-in-Shimoga-city

SHIVAMOGGA LIVE NEWS | 15 FEBRUARY 2023 SHIMOGA : ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ತೆರಳುತ್ತಿದ್ದ ಯುವಕನ ಕಾರು ಅಡ್ಡಗಟ್ಟಿ ಹೆದ್ದಾರಿಯಲ್ಲಿ ದರೋಡೆ (Dacoity) ಮಾಡಲಾಗಿದೆ. ಕುತ್ತಿಗೆ ಬಳಿ ಮಚ್ಚು ಇಟ್ಟು ನಗದು ಮತ್ತು ಚಿನ್ನದ ಸರ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತರೀಕೆರೆಯ ವಸಂತ ಎಂಬುವವರು ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಶಿವಮೊಗ್ಗ ಸಾಗರ ಹೆದ್ದಾರಿಯ ಟ್ರೀ ಪಾರ್ಕ್ ಬಳಿ ಕಾರು ಅಡ್ಡಗಟ್ಟಲಾಗಿದೆ (Dacoity) ಎಂದು ಆರೋಪಿಸಲಾಗಿದೆ. ಹೇಗಾಯ್ತು ಘಟನೆ? ವಸಂತ … Read more

ಪಾಳು ಮನೆ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಸಾವು, ಕೈ ಮೇಲಿದೆ ‘ಪಾಪಿ ಪ್ರೀತಿ ಕಾವ್ಯ’ ಹಚ್ಚೆ

Police-Jeep-in-Shimoga-city

SHIVAMOGGA LIVE NEWS | 15 FEBRURARY 2023 SHIMOGA : ಪಾಳು ಮನೆಯೊಂದರ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯೊಬ್ಬರು (woman) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಮಿಳಘಟ್ಟ ರಸ್ತೆಯ ಶಿವಾಜಿ ಮರಾಠ ಟ್ರಸ್ಟ್ ಅಂಬಾ ಭವಾನಿ ದೇವಸ್ಥಾನ ಆವರಣದ ಪಾಳು ಮನೆಯ ಮುಂಭಾಗ ಮಹಿಳೆ ಅಸ್ವಸ್ಥಳಾಗಿ ಬಿದ್ದಿದ್ದರು. ಫೆ.8ರಂದು ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದ ಆಟೋಗಳಿಗೆ … Read more

ಅಡಕೆ ಧಾರಣೆ | 14 ಫೆಬ್ರವರಿ 2023 | ಶಿವಮೊಗ್ಗ, ಭದ್ರಾವತಿ, ಚನ್ನಗಿರಿ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 14 FEBRUARY 2023 SHIMOGA : ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ  ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 33489 ಬೆಟ್ಟೆ 46569 52400 ರಾಶಿ 36009 45699 ಸರಕು 46569 81510 ಭದ್ರಾವತಿ ಮಾರುಕಟ್ಟೆ ರಾಶಿ 40199 45299 ಚನ್ನಗಿರಿ ಮಾರುಕಟ್ಟೆ ರಾಶಿ 44219 46379 ಶಿರಸಿ ಮಾರುಕಟ್ಟೆ ಕೆಂಪುಗೋಟು 26009 36501 ಚಾಲಿ 30999 41039 ಬೆಟ್ಟೆ 20699 42781 … Read more