ಕೊಮ್ಮನಾಳ್‌ನಲ್ಲಿ ರಾತ್ರಿ ಇದ್ದ ಬೈಕ್‌ ಬೆಳಗ್ಗೆ ನಾಪತ್ತೆ, ಆಗಿದ್ದೇನು?

crime name image

ಶಿವಮೊಗ್ಗ: ಕೊಮ್ಮನಾಳ್ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike theft). ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಾಲೇಶಪ್ಪ ಎಂಬುವವರು ತಮ್ಮ ಹೋಂಡಾ ಆಕ್ಟಿವಾ ಬೈಕನ್ನು ಸಂಜೆ ಮನೆಯ ಮುಂದೆ ನಿಲ್ಲಿಸಿದ್ದರು. ಅಂದು ಮಧ್ಯರಾತ್ರಿವರೆಗೆ ಬೈಕ್ ಅಲ್ಲೇ ಇತ್ತು. ಮಾರನೇ ದಿನ ಬೆಳಗ್ಗೆ ನೋಡಿದಾಗ ಬೈಕ್ ಕಾಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿಕಾರಿಪುರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ, ಆಗಿದ್ದೇನು?

ಶಿವಮೊಗ್ಗದ ಬೈಕ್‌ ಮಾಲೀಕರೆ ಎಚ್ಚರ, ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

Doddapete-Police-Station-General-Image.

ಶಿವಮೊಗ್ಗ:‌ ನಗರದ ಎನ್.ಟಿ ರಸ್ತೆಯಲ್ಲಿರುವ ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಹೀರೊ ಸ್ಪ್ಲೆಂಡರ್ ಬೈಕ್ (Splendor bike) ಕಳ್ಳತನವಾಗಿದೆ. ಆನಂದರಾವ್ ಬಡಾವಣೆಯ ಇಮ್ರಾನ್ ಬೇಗ್ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ. ಇದನ್ನೂ ಓದಿ »  ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ? ಕೆಲಸದ ನಿಮಿತ್ತ ತಮ್ಮ ಬೈಕನ್ನು ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯ ಮುಂದೆ ನಿಲ್ಲಿಸಿದ್ದರು. ಸ್ನೇಹಿತನ ಬೈಕ್‌ನಲ್ಲಿ ಮಾಚೇನಹಳ್ಳಿಗೆ ಹೋಗಿದ್ದರು. ನಂತರ ರಾತ್ರಿ ವಾಪಸ್ ಬಂದು … Read more