ಗೋಪಿ ಸರ್ಕಲ್’ನಲ್ಲಿ ಈಶ್ವರಪ್ಪ V/s ಸಚಿವ ಖಾದರ್, ಮಾತಿಗೆ ಮಾತಲ್ಲಿ ಗೆದ್ದವರಾರು? ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019 ಸ್ಮಾರ್ಟ್ ಸಿಟಿ ಕಾಮಗಾರಿಗಳ ಶಂಕುಸ್ಥಾಪನೆಗೆ ಬಂದಿದ್ದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಕೆ.ಎಸ್.ಈಶ್ವರಪ್ಪ ನಡುವೆ, ಬಹಿರಂಗ ವೇದಿಕೆಯಲ್ಲೇ, ಮಾತಿನ ಜುಗಲ್’ಬಂದಿ ನಡೆಯಿತು. ಗೋಪಿ ಸರ್ಕಲ್’ನಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರ ಮಾತಿಗೆ, ಎಲ್ಲರನ್ನು ನಗಿಸುತ್ತಲೇ ಉತ್ತರ ನೀಡಿದ ಖಾದರ್, ಆಪರೇಷನ್ ಕಮಲ ಮಾಡದಂತೆ ಮನವಿ ಮಾಡಿದರು. ಅಷ್ಟೇ ಅಲ್ಲ, ಸರ್ಕಾರದ ಖಜಾನೆ ಕೂಡ ಗಟ್ಟಿಯಾಗಿದೆ ಅಂತಾ ಸ್ಪಷ್ಟನೆ ನೀಡಿದರು. ಇಬ್ಬರ ಮಾತಿನ ಜುಗಲ್’ಬಂದಿ ಸಬೀಕರಿಗೆ ಖುಷಿ … Read more

ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಚಿವ ಖಾದರ್ ಖಡಕ್ ಸವಾಲು, ಯಾವ ವಿಚಾರಕ್ಕೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019 ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯ ಯೋಜನೆಗಳು, ನೀತಿಗಳನ್ನೇ ಮುಂದುವರೆಸಿದ್ದಾರೆ. ದೇಶದ ಭವಿಷ್ಯಕ್ಕೆ ಅಗತ್ಯವಿರುವ ಒಂದೇ ಒಂದು ಯೋಜನೆಯನ್ನೂ ಮೋದಿ ಸರ್ಕಾರ ಆರಂಭಿಸಿಲ್ಲ. ಯಾವುದಾದರೂ ಯೋಜನೆಗಳು, ನೀತಿಗಳನ್ನು ಮೋದಿ ರೂಪಿಸಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು. ಇದೇ ವೇಳೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಖಡಕ್ ಉತ್ತರ ನೀಡಿದ್ದಾರೆ. … Read more

ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದರು ಸಚಿವ ಖಾದರ್, ದಿಢೀರ್ ಬಂದರು ಈಶ್ವರಪ್ಪ, ಮುಂದೇನಾಯ್ತು?

ಶಿವಮೊಗ್ಗ ಲೈವ್.ಕಾಂ | 24 ಫೆಬ್ರವರಿ 2019 ಸ್ಮಾರ್ಟ್ ಸಿಟಿ ಯೋಜನೆಯ ಶಂಕುಸ್ಥಾಪನೆಗೆ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಪ್ರವಾಸಿ ಮಂದಿರಕ್ಕೆ ಆಗಮಿಸಿದ ಖಾದರ್ ಅವರು, ಅಲ್ಲಿಯೇ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಮೊದಲು ಶಿವಮೊಗ್ಗ ಸಿಟಿಯ ಅಭಿವೃದ್ಧಿ ವಿಚಾರಗಳ ಕುರಿತು ಪ್ರಸ್ತಾಪಿಸಿದರು. ನಂತರ ಮಾತು ರಾಜಕೀಯದತ್ತ ಹೊರಳಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ, ಟಿಪ್ಪಣಿ ಮಾಡುತ್ತಿದ್ದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಷ್ಟೇ ಇದ್ದರು. ಇದೇ ವೇಳೆ, ಸಚಿವ … Read more