ಕ್ಯಾಂಟರ್, ಕಾರು ಮುಖಾಮುಖಿ ಡಿಕ್ಕಿ, ಸಹೋದ್ಯೋಗಿಗಳು ಸ್ಥಳದಲ್ಲೇ ಸಾವು
ಆನಂದಪುರಂ: ಸಮೀಪದ ಉಳ್ಳೂರಿನ ಮುಂಡಿಗೆಮಟ್ಟಿ ಕ್ರಾಸ್ ಬಳಿ ಸೋಮವಾರ ಕ್ಯಾಂಟರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ (collision) ಕಾರಿನಲ್ಲಿದ್ದ ಸಾಗರದ ಸಹಕಾರ ಸಂಘದ ಇಬ್ಬರು ಸಹೋದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಗರ ತಾಲೂಕು ತಡಗಳ ಗ್ರಾಮದ ವೀರೇಶ ಗೌಡ (25) ಮತ್ತು ಸೊರಬ ತಾಲೂಕು ಮಳಲಗದ್ದೆ ಗ್ರಾಮದ ಪವಿತ್ರ (25) ಮೃತಪಟ್ಟವರು. ಆನಂದಪುರಂ ಕಡೆಯಿಂದ ಸಾಗರಕ್ಕೆ ಹೋಗುತ್ತಿದ್ದ ಕಾರು ಮತ್ತು ಸಾಗರ ಕಡೆಯಿಂದ ಆನಂದಪುರಂ ಕಡೆ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more