ಶಿವಮೊಗ್ಗ ನಗರದಲ್ಲಿ ಒಂದು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ, ಯಾವಾಗ? ಕಾರಣವೇನು?

Water Tap image

SHIVAMOGGA LIVE NEWS | 26 APRIL 2023 SHIMOGA : ಗಾಜನೂರು ಮೂಲ ಸ್ಥಾವರ ಮತ್ತು ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಏ.27ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ (Drinking Water) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಅಧಿಕಾರಿಗಳ ಬಳಿ ಸಿಕ್ಕ ಆಸ್ತಿ, ಚಿನ್ನಾಭರಣ, ವಾಹನಗಳೆಷ್ಟು?

ಭದ್ರಾ ಜಲಾಶಯದಿಂದ ಏ.27ರಿಂದ ಪ್ರತಿದಿನ ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ, ಎಷ್ಟು ದಿನ? ಕಾರಣವೇನು?

Bhadra-Dam-General-Image

SHIVAMOGGA LIVE NEWS | 26 APRIL 2023 BHADRAVATHI : ಹಾವೇರಿ ಜಿಲ್ಲೆ ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ (Bhadra Dam) ತುಂಗಾ-ಭದ್ರಾ ನದಿಗೆ 1 ಟಿ.ಎಂ.ಸಿ. ನೀರನ್ನು ಹರಿಸಲು ಆದೇಶಿಲಾಗಿದೆ. ಪ್ರಾದೇಶಿಕ ಆಯುಕ್ತರ ಅದೇಶದನ್ವಯ ಏ.27 ರ ಸಂಜೆ 6 ರಿಂದ ಮೇ 9ರ ಬೆಳಗ್ಗೆ 6 ರವರೆಗೆ ಪ್ರತಿ ದಿನ 1 ಸಾವಿರ ಕ್ಯೂಸೆಕ್‌ನಂತೆ ಒಟ್ಟು 11,574 ಕ್ಯೂಸೆಕ್‌ … Read more

ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದಿಗ್ಬಂಧನದ ಎಚ್ಚರಿಕೆ

protest-for-drinking-water-in-Chandaladimba-near-ripponpete

SHIVAMOGGA LIVE NEWS | 9 APRIL 2023 RIPPONPETE : ಗ್ರಾಮ ಪಂಚಾಯಿತಿಯಿಂದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ (Protest) ನಡೆಸಿದರು. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಾಳದಿಂಬ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟಿಸಿದರು. ಚಂದಾಳದಿಂಬ ಗ್ರಾಮದಲ್ಲಿ 50ಕ್ಕಿಂತಲೂ ಹೆಚ್ಚು ಮನೆಗಳಿವೆ. ಶುದ್ಧ ಕುಡಿಯುವ ನೀರು ಸಿಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನಲ್ಲಿ ಸಂಪರ್ಕ ನೀಡಿದ್ದರೂ ನೀರು ಪೂರೈಕೆಯಾಗುತ್ತಿಲ್ಲ. ಜನರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಟ್ಯಾಂಕರ್‍ನಲ್ಲಿ ನೀರು ಪೂರೈಕೆ ಮಾಡಲಾಯಿತು. … Read more

ಶಿವಮೊಗ್ಗ ನಗರದಾದ್ಯಂತ ಎರಡು ದಿನ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ

Water Tap image

SHIVAMOGGA LIVE NEWS | 25 MARCH 2023 SHIMOGA : ನಗರದಾದ್ಯಂತ ಮಾ.26 ಮತ್ತು ಮಾ.27ರಂದು ನೀರು ಪೂರೈಕೆ (water supply) ವ್ಯತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ – ಕೂಡಲಿ ಜಾತ್ರೆ, ತುಂಗಾ – ಭದ್ರಾ ಸಂಗಮದಲ್ಲಿ ಮಿಂದೆದ್ದ ಭಕ್ತ ಸಮೂಹ, ಹೇಗಿತ್ತು ಈ ಭಾರಿ ವೈಭವ? ಗಾಜನೂರು ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜಾಗುವ ಮತ್ತು ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆ … Read more

ಸಂಸದ ರಾಘವೇಂದ್ರ ಅವರ ಫೋಟೊಗ್ರಾಫರ್ ಪ್ರಸನ್ನ ಭಟ್ ನಿಧನ, ಕೆರೆಯಲ್ಲಿ ಮೃತದೇಹ ಪತ್ತೆ

010123 Hosanagara Prasanna Bhat MP BY Raghavendra photographer

SHIVAMOGGA LIVE NEWS | 1 JANUARY 2023 ರಾಮನಗರ : ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೋಗ್ರಾಫರ್ (photographer) ಪ್ರಸನ್ನ ಭಟ್ (26) ನಿಧನರಾಗಿದ್ದಾರೆ. ಕೆರೆಯಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಮಾವತ್ತೂರು ಕೆರೆಯಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ. ಪ್ರಸನ್ನ ಭಟ್ ಸೇರಿ ಆರು ಮಂದಿ ಕಾರಿನಲ್ಲಿ ಕೆರೆ ಬಳಿ ಬಂದಿದ್ದರು. ಮಾವತ್ತೂರು ಕೆರೆಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ. ಇನ್ ಸ್ಟಾಗ್ರಾಂನಲ್ಲಿ ಕೆರೆ ವೈಭವ ಶಿವಮೊಗ್ಗ ಜಿಲ್ಲೆ ಹೊಸನಗರದ ಪ್ರಸನ್ನ ಭಟ್ … Read more

ನೀರು ಕುಡಿದ ಹಲವರಲ್ಲಿ ವಾಂತಿ, ಜ್ವರ, ಗ್ರಾಮಸ್ಥರಲ್ಲಿ ಆತಂಕ

holehonnur name graphics

SHIVAMOGGA LIVE NEWS | 3 DECEMBER 2022 ಹೊಳೆಹೊನ್ನೂರು : ಕಲುಷಿತ ನೀರು ಕುಡಿದು (drinking water) ಹಂಚಿನ ಸಿದ್ದಾಪುರ ಗ್ರಾಮದ ಹಲವರು ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ಬಳಿಕ ಎಲ್ಲರು ಚೇತರಿಸಿಕೊಂಡಿದ್ದಾರೆ. ALSO READ – ರಾತ್ರಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಪ್ಲಾನ್, ಶಿವಮೊಗ್ಗ ಪೊಲೀಸರ ಬಲೆಗೆ ಬಿತ್ತು ತೊಟ್ಟಿ ಸೀನನ ಗ್ಯಾಂಗ್ ಗುರುವಾರ ನೀರು ಕುಡಿದ ಕೆಲವರಲ್ಲಿ ತುರಿಕೆ, ಜ್ವರ, ವಾಂತಿಯ ಲಕ್ಷಣ ಕಾಣಿಸಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ನೀರು … Read more

ಸಂಜೆ ಮಳೆಗೆ ಶಿವಮೊಗ್ಗ ಜೈಲ್ ರಸ್ತೆ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Water-Logging-in-Shimoga-Jail-Road

ಶಿವಮೊಗ್ಗ | ಸಂಜೆ ಸುರಿದ ಮಳೆಗೆ ನಗರದ ಹೊಸಮನೆ (HOSAMANE) ಬಡಾವಣೆಯ ಮನೆಗಳಿಗೆ ನೀರು (RAIN WATER) ನುಗ್ಗಿದೆ. ಸ್ಮಾರ್ಟ್ ಸಿಟಿ  (SMART CITY) ಅವೈಜ್ಞಾನಿಕ ಕಾಮಗಾರಿಯೆ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ಈ ವೇಳೆ ಹೊಸಮನೆ ಬಡಾವಣೆ ಮತ್ತು ಜೈಲ್ ರಸ್ತೆಯ ವಿವಿಧೆಡೆ ಮನೆಗಳು, ಅಂಗಡಿಗೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ವಿರುದ್ಧ ಗರಂ ಜೋರು ಮಳೆಯಾಗಿದ್ದು ಚರಂಡಿಯಲ್ಲಿ ನೀರು (RAIN WATER) ಸರಾಗವಾಗಿ ಹರಿದು … Read more

ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಒಂದು ಗೇಟ್ ಮೇಲೆತ್ತಿ ನೀರು ಹೊರಕ್ಕೆ

Linganamakki-Dam-Gange-pooje.

ಸಾಗರ | ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗನಮಕ್ಕಿ ಜಲಾಶಯ (LINGANAMAKKI DAM) ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಗಂಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಒಂದು ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರನ್ನು ಹೊರ ಬಿಡಲಾಯಿತು. ಅಧಿಕಾರಿಗಳಿಂದ ಗಂಗೆ ಪೂಜೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ ಹಿನ್ನೆಲೆ ಇವತ್ತು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಗಂಗೆ ಪೂಜೆ ನೆರವೇರಿಸಿದರು. ಜಲಾಶಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಶರಾವತಿ ನದಿಗೆ … Read more

ಗಾಜನೂರು ತುಂಗಾ ಡ್ಯಾಂಗೆ ಇವತ್ತು ಎಷ್ಟಿದೆ ಒಳ, ಹೊರ ಹರಿವು?

Gajanur-Tunga-Dam-water-release.

ಶಿವಮೊಗ್ಗ | ತೀರ್ಥಹಳ್ಳಿ ತಾಲೂಕಿನಾದ್ಯಂತ ಮಳೆ ಬಿರುಸಾಗಿದೆ. ಹಾಗಾಗಿ ತುಂಗಾ ಜಲಾಶಯಕ್ಕೆ (TUNGA DAM) ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರಸ್ತುತ ತುಂಗಾ ಜಲಾಶಯಕ್ಕೆ 48,317 ಕ್ಯೂಸೆಕ್ ಒಳೆ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 21 ಗೇಟುಗಳನ್ನು ತೆಗೆದು ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, … Read more

ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು

-Linganamakki-Dam-General-Image

ಸಾಗರ | ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯದ (LINGANAMAKKI DAM) ಒಳ ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಂದೇ ದಿನದಲ್ಲಿ ನೀರಿನ ಸಂಗ್ರಹ ಮಟ್ಟ ಎರಡೂವರೆ ಅಡಿಯಷ್ಟು ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 77,911 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಪ್ರಮಾಣ ಹೆಚ್ಚಳವಾದರೆ ಒಳ ಹರಿವು ಮತ್ತಷ್ಟು ಏರಿಕೆಯಾಗಲಿದೆ. ಒಳ ಹರಿವು ಹೆಚ್ಚಳ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಒಂದೇ ದಿನ 2.4 ಅಡಿಯಷ್ಟು ಹೆಚ್ಚಳವಾಗಿದೆ. ಆ.8ರಂದು 1803.8 ಅಡಿಯಷ್ಟು ನೀರಿತ್ತು. ಇವತ್ತು … Read more