ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾದಲ್ಲಿ ಮಳೆ ಅಬ್ಬರ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

rain in shimoga

ಹೊಸನಗರ | ಭಾರಿ ಮಳೆ ತಾಲೂಕಿನಾದ್ಯಂತ ಜಲಾಶಯಗಳಿಗೆ ಒಳ ಹರಿವು (DAM WATER) ಏರಿಕೆಯಾಗಿದೆ. ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾ ಮತ್ತು ಸಾವೇಹಕ್ಲು ಜಲಾಶಯ ವ್ಯಾಪ್ತಿಗಳಲ್ಲಿ ಭಾರಿ ಮಳೆಯಾಗಿದೆ. ಹೊಸನಗರ ತಾಲೂಕಿನ ಹುಲಿಕಲ್ ಮತ್ತು ಮಾಸ್ತಿಕಟ್ಟೆ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಬಿಡುವು ನೀಡದೆ ಮಳೆ ಅಬ್ಬರಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹುಲಿಕಲ್ ಭಾಗದಲ್ಲಿ 231 ಮಿ.ಮೀ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 230 ಮಿ.ಮೀ ಮಳೆ ಸುರಿದಿದೆ. ಯಡೂರಿನಲ್ಲಿ 165 ಮಿ.ಮೀ ಮಳೆ ಸುರಿದಿದೆ. ಜಲಾಶಯಗಳಿಗು ಹೆಚ್ಚಿನ ನೀರು ನಿರಂತರ … Read more

ಲಿಂಗನಮಕ್ಕಿ ಜಲಾಶಯದಿಂದ ಹೊರಬಿತ್ತು ಮೊದಲ ಅಲರ್ಟ್

-Linganamakki-Dam-General-Image

ಸಾಗರ | ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಡ್ಯಾಂನಲ್ಲಿ ನೀರಿನ ಮಟ್ಟವು ಏರಿಕೆಯಾಗಿದೆ. ಈ ನಡುವೆ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಇವತ್ತು 30,397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ತಿಂಗಳು ಭಾರಿ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ಒಳ ಹರಿವು ದಾಖಲಾಗಿತ್ತು. ಈಗ ಜಲಾನಯನ ಪ್ರದೇಶದಲ್ಲಿ ಪುನಃ ಮಳೆ ಜೋರಾಗಿದ್ದು, ಒಳ ಹರಿವು … Read more

ಭದ್ರಾ ಜಲಾಶಯದ ಒಳ ಹರಿವು ಇಳಿಕೆ, ಇವತ್ತೆಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ?

Bhadra-Dam-Water-Out-Flow

SHIVAMOGGA LIVE NEWS | BHADRAVATHI | 22 ಜುಲೈ 2022 ಹಿನ್ನೀರು ಭಾಗದಲ್ಲಿ ಮಳೆ ತಗ್ಗಿದ ಹಿನ್ನೆಲೆ ಭದ್ರಾ ಜಲಾಶಯದ (BHADRA DAM) ಒಳ ಹರಿವು ಕಡಿಮೆಯಾಗಿದೆ. ಇದೆ ಕಾರಣಕ್ಕೆ ಹೊಳೆಗೆ ಹರಿಸುತ್ತಿರುವ ನೀರಿನ ಪ್ರಮಾಣವು ಇಳಿಕೆಯಾಗಿದೆ. ಭದ್ರಾ ಜಲಾಶಯಕ್ಕೆ ಪ್ರಸ್ತುತ 10,523 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 2,561 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇವತ್ತು ನೀರಿನ ಮಟ್ಟ 183.9 ಅಡಿಯಷ್ಟು ಇದೆ. ಕಳೆದ ವರ್ಷ ಭದ್ರಾ … Read more

ಭದ್ರಾವತಿ ಹೊಸ ಸೇತುವೆ ಸಂಪೂರ್ಣ ಜಲಾವೃತ, ಸೇತುವೆ ಮುಂದೆ ಬ್ಯಾರಿಕೇಡ್

Bhadravathi-New-Bridge-Drowned

SHIVAMOGGA LIVE NEWS | BHADRAVATHI | 15 ಜುಲೈ 2022 ಭದ್ರಾ ಜಲಾಶಯದಿಂದ (BHADRA DAM) ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಆದ್ದರಿಂದ ಭದ್ರಾವತಿಯ ಹೊಸ ಸೇತುವೆ (NEW BRIDGE) ಮುಳುಗಡೆಯಾಗಿದೆ. ಕಳೆದ ರಾತ್ರಿಯಿಂದಲೆ ಈ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಭದ್ರಾ ಜಲಾಶಯ ಭರ್ತಿಯಾಗಿದೆ. ಗುರುವಾರ ಮಧ್ಯಾಹ್ನದಿಂದ ಜಲಾಶಯದ ಕ್ರಸ್ಟ್ ಗೇಟ್’ಗಳನ್ನು ತೆಗೆದು ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೆಚ್ಚಾಯ್ತು ಹೊರ ಹರಿವು ಜಲಾಶಯ ಭರ್ತಿ ಆಗಿರುವುದರಿಂದ ಒಳ ಹರಿವಿನಷ್ಟೆ ಪ್ರಮಾಣದ … Read more

BREAKING NEWS | ಭದ್ರಾ ಜಲಾಶಯದ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಬಿಡಲಾಗುತ್ತಿದೆ?

Bhadra-Dam-gate-opened-2022

SHIVAMOGGA LIVE NEWS | BHADRAVATHI | 14 ಜುಲೈ 2022 ಭದ್ರಾ ಜಲಾಶಯ (BHADRA DAM) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 43,051 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಇವತ್ತು 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ನೀರಿನ ಹೊರ … Read more

ತುಂಗಾ ನದಿ ನೀರಿನ ಮಟ್ಟ ಹೆಚ್ಚಳ, ಶಿವಮೊಗ್ಗದಲ್ಲಿ ಮುಳುಗಿದ ಮಂಟಪ

Mantapa-drowned-in-Tunga-river-in-Shimoga

SHIVAMOGGA LIVE NEWS | SHIMOGA | 11 ಜುಲೈ 2022 ಗಾಜನೂರಿನ ತುಂಗಾ (TUNGA DAM) ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಆದ್ದರಿಂದ ಶಿವಮೊಗ್ಗದ ತುಂಗಾ ನದಿ ದಂಡೆ ಮೇಲಿರುವ ಕೋರ್ಪಲಯ್ಯ ಛತ್ರ ಮಂಟಪ (MANTAPA) ಸಂಪೂರ್ಣ ಮುಳುಗಿದೆ. ತುಂಗಾ ಜಲಾಶಯಕ್ಕೆ 49,671 ಕ್ಯೂಸೆಕ್ ಒಳಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ ಎಂದು ತುಂಗಾ ಮೇಲ್ದಂಡೆ ಯೋಜನೆ ಇಂಜಿನಿಯರ್’ಗಳು ತಿಳಿಸಿದ್ದಾರೆ. ಸಂಪೂರ್ಣ ಮುಳುಗಿದ ಮಂಟಪ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸುತ್ತಿರುವುದರಿಂದ … Read more

ಅಂಜನಾಪುರ ಜಲಾಶಯ ಭರ್ತಿ, ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

Anjanapura-Dam-Full

SHIVAMOGGA LIVE NEWS | SHIKARIPURA | 7 ಜುಲೈ 2022 ನಿರಂತರ ಮಳೆ ಹಿನ್ನೆಲೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ (DAM) ಕೋಡಿ ಬಿದ್ದಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಆದ್ದರಿಂದ ಅಂಜನಾಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾಗಿ ಅಂಜನಾಪುರ ಜಲಾಶಯ ಕೋಡಿ ಬಿದ್ದಿದೆ. 23 ಅಡಿ ನೀರು ಭರ್ತಿಯಾದರೆ ಜಲಾಶಯ ಕೋಡಿ ಬೀಳುತ್ತದೆ. ವಾಡಿಕೆಗಿಂತಲೂ ಮೊದಲೆ ಭರ್ತಿ ಅಂಜನಾಪುರ ಜಲಾಶಯ ಈ … Read more

ಶಿವಮೊಗ್ಗ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ, ಯಾವ್ಯಾವ ಡ್ಯಾಂಗೆ ಎಷ್ಟು ಒಳ ಹರಿವಿದೆ?

Gajanur-Dam-Shimoga-Tunga-Dam

SHIVAMOGGA LIVE NEWS | SHIMOGA | 6 ಜುಲೈ 2022 ಜಿಲ್ಲೆಯ ವಿವಿಧೆಡೆ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳ (DAM LEVEL) ಒಳ ಹರಿವು ಹೆಚ್ಚಳವಾಗಿದೆ. ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಗುತ್ತಿದೆ. ಯಾವ್ಯಾವ ಡ್ಯಾಂಗೆ ಎಷ್ಟು ಒಳ ಹರಿವಿದೆ? ಲಿಂಗನಮಕ್ಕಿ ಜಲಾಶಯ : 1819 (ಗರಿಷ್ಠ ಅಡಿ), 1762.10 (ಇಂದಿನ ಮಟ್ಟ), 39262.10 ಕ್ಯೂಸೆಕ್ ಒಳಹರಿವು ಭದ್ರಾ ಜಲಾಶಯ : 186 (ಗರಿಷ್ಠ ಅಡಿ), 160.11 (ಇಂದಿನ … Read more

ಹೊಸಮನೆಯ ನಲ್ಲಿಗಳಲ್ಲಿ ಕೊಳೆ ನೀರು, ಕಾರ್ಪೊರೇಟರ್ ಆಕ್ರೋಶ

Coroprator-Rekha-Ranganath-General-Image

SHIVAMOGGA LIVE NEWS | SHIMOGA | 22 ಜೂನ್ 2022 ನೀರು ಸರಬರಾಜು ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಜಿಲ್ಲಾಧಿಕಾರಿ ಅವರು ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಪರಿಹರಿಸಬೇಕು ಎಂದು ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆಯೆ 3 ಮತ್ತು 4ನೇ ಮುಖ್ಯ ರಸ್ತೆಯಲ್ಲಿ ಕೊಳೆ ನೀರು ಪೂರೈಕೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ … Read more

ಕುಡಿಯಲು ಕೆಸರು ನೀರು ಪೂರೈಕೆ, ಸವಳರಂಗ ರಸ್ತೆಯಲ್ಲಿ ದಿಢೀರ್ ರಸ್ತೆ ತಡೆ

Protest-For-Water-Supply-at-Savalanga-road.

SHIVAMOGGA LIVE NEWS | SHIMOGA | 15 ಜೂನ್ 2022 ಕೆಸರು ನೀರು ಸರಬರಾಜು ಮಾಡಿದ್ದಕ್ಕೆ ಹನುಮಂತ ನಗರ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. WATER ಕಳೆದ ಕೆಲ ದಿನಗಳಿಂದ ಉಷಾ ನರ್ಸಿಂಗ್ ಹೋಂ ಮುಂಭಾಗದ ಹನುಮಂತನಗರ ನಿವಾಸಿಗಳಿಗೆ ಕುಡಿಯುವ ನೀರು ಬರುತ್ತಿರಲಿಲ್ಲ. ಇಂದು ಕೆಸರು ನೀರು ಸರಬರಾಜಾಗಿದ್ದು, ನೀರನ್ನು ಕಂಡು ಹೌಹಾರಿದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಸವಳಂಗ ರಸ್ತೆಯ ರೈಲ್ವೆ ಟ್ರಾಕ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಪಾಲಿಕೆ ಆಯುಕ್ತರು … Read more