ಫೋನ್‌ ಪೇ ಹೆಸರಲ್ಲಿ ಬಂತು ಮೆಸೇಜ್‌, ಕ್ಲಿಕ್‌ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್

BHADRAVATHI NEWS, 30 OCTOBER 2024 : ಮೊಬೈಲ್‌ಗೆ ಬಂದ ಮೆಸೇಜ್‌ ಕ್ಲಿಕ್‌ ಮಾಡಿದ ವ್ಯಕ್ತಿಯ ಬ್ಯಾಂಕ್‌ (BANK) ಖಾತೆಯಿಂದ ಮೂರು ಬಾರಿ ಹಣ ವರ್ಗಾವಣೆಯಾಗಿದೆ. ಭದ್ರಾವತಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡುತ್ತಿದ್ದರು. ಆಗ ಫೋನ್‌ ಪೇ ಪ್ರೊಸೀಡ್‌ ಎಂಬ ಮೆಸೇಜ್‌ ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದ್ದರು. ಆ ನಂತರ ಆ ವ್ಯಕ್ತಿಗೆ ತಿಳಿಯದೆಯೇ ಮೂರು ಬಾರಿ ನಾನಾ ಖಾತೆಗೆ ಒಟ್ಟು 2.58 ಲಕ್ಷ ರೂ. ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image

ಇದನ್ನೂ ಓದಿ » ವಿದ್ಯುತ್‌ ಶಾಕ್‌, ಅಂಗಡಿ ಮಾಲೀಕ ಸಾವು

crime name image

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment