ತಮ್ಮನನ್ನೇ ಕೊಂದಿದ್ದ ಅಣ್ಣ ಅರೆಸ್ಟ್‌, ನ್ಯಾಯಾಂಗ ಬಂಧನಕ್ಕೆ, ಘಟನೆಗೆ ಕಾರಣವೇನು?

FREE NEWS

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ

7411700200

ಹೊಳೆಹೊನ್ನೂರು: ತಾಲೂಕಿನ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಸಹೋದರನ ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಮೇಶ್‌ (50) ಬಂಧಿತ ವ್ಯಕ್ತಿ. ಸಹೋದರ ಸಂತೋಷ್‌ (40) ಎಂಬಾತನನ್ನು ರಮೇಶ್‌ ಹತ್ಯೆ ಮಾಡಿದ್ದರು.

Holehonnuru-Police-Station-Bhadravathi-jpg

ಕೊಲೆಗೆ ಕಾರಣವೇನು?

ಆಸ್ತಿ ಹಂಚಿಕೆ ಹಾಗೂ ಜಮೀನು ಮಾರಾಟದ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ಅಣ್ಣನೇ ಸ್ವಂತ ತಮ್ಮನನ್ನು ಕುಡುಗೋಲಿನಿಂದ (Sickle) ಕೊಚ್ಚಿ ಕೊಲೆ ಮಾಡಿದ್ದಾನೆ. ದಾಸರಕಲ್ಲಹಳ್ಳಯ ಮನೆಯ ಮುಂದೆ ಈ ಕೃತ್ಯ ನಡೆದಿದೆ.

ಕುಟುಂಬಕ್ಕೆ ಸೇರಿದ ಜಮೀನನ್ನು ಇತ್ತೀಚೆಗಷ್ಟೇ ಮಾರಾಟ ಮಾಡಲಾಗಿತ್ತು. ಈ ಜಮೀನು ಮಾರಾಟದಿಂದ ಬಂದ ಹಣವನ್ನು ಸಂತೋಷ್ ಮತ್ತು ಆತನ ತಾಯಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಅಣ್ಣ ರಮೇಶ ತಮ್ಮನ ಜೊತೆ ಜಗಳ (Quarrel) ತೆಗೆದಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರು

ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿ ರಮೇಶ, ಮನೆಯಲ್ಲಿದ್ದ ಕುಡುಗೋಲಿನಿಂದ (Sickle) ತಮ್ಮ ಸಂತೋಷನ ತಲೆ ಹಾಗೂ ಕತ್ತಿನ ಭಾಗಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂತೋಷನನ್ನು ತಕ್ಷಣವೇ ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ (Mc Gann Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12:45ಕ್ಕೆ ಸಂತೋಷ್ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಾದ ಕೆಲವೇ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಹೆಚ್ಚಿನ Shimoga News, Shivamogga News ಮತ್ತು BHADRAVATHI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 15, 2026