ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018
ಪೊಲೀಸರ ದೌರ್ಜನ್ಯ ಖಂಡಿಸಿ, BRP ಉಪಠಾಣೆ ಎದುರು, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ, ಬೆಂಬಲಿಗರೊಂದಿಗೆ ಧರಣಿ ನಡೆಸಿದರು. ಹಾಗಾಗಿ ಪೊಲೀಸರು ಠಾಣೆಗೆ ಬೀಗ ಹಾಕಿ ಹೊರಗೆ ನಿಲ್ಲುವಂತಾಯಿತು.
BRPಯ ಪ್ರವಾಸಿ ಖಾಸಗಿ ಬಸ್ ಮಾಲೀಕರೊಬ್ಬರು, ತಮ್ಮ ಟಾಟಾ ಏಸ್ ವಾಹನದಲ್ಲಿ ಭದ್ರಾವತಿಯಿಂದ ಕ್ಯಾನ್’ಗಳಲ್ಲಿ ಡೀಸೆಲ್ ತರುತ್ತಿದ್ದರು. BRPಯಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. BRPಯ ಪೆಟ್ರೋಲ್ ಬಂಕ್’ನಲ್ಲಿ ಮೋಸವಾಗುತ್ತಿದೆ ಎಂದು ಬೇರೆಡೆಯಿಂದ ಡೀಸೆಲ್ ತಂದಿದ್ದರು. ಅದಕ್ಕೆ ಬಿಲ್ ಇದ್ದರೂ, ವಾಹನ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಅಪ್ಪಾಜಿಗೌಡ ಉಪಠಾಣೆ ಎದುರು ಧರಣಿ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]