SHIVAMOGGA LIVE NEWS | 18 FEBRURARY 2023
BHADRAVATHI : ವಿಐಎಸ್ಎಲ್ ಉಳಿವಾಗಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 30 ದಿನ ಪೂರೈಸಿದೆ. ಈವರೆಗು ಪೆಂಡಾಲ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರು, ಈಗ ವಿಭಿನ್ನ ರೀತಿಯಲ್ಲಿ ಕಾರ್ಖಾನೆಯೊಂದಿಗಿನ ತಮ್ಮ ಸಂಬಂಧವನ್ನು ಜಗತ್ತಿಗೆ ಸಾರುವ ಪ್ರಯತ್ನ ಮಾಡಿದರು. ಪಟ್ಟಣದಲ್ಲಿ ಕಾರ್ಖಾನೆಯನ್ನು ಅಪ್ಪಿಕೋ ಚಳವಳಿ (Appiko Chalavali) ನಡೆಸಲಾಯಿತು.
ಶುಕ್ರವಾರ ಮಧ್ಯಾಹ್ನ ಕಾರ್ಮಿಕರು ವಿಐಎಸ್ಎಲ್ ಗೇಟ್, ಕಾಂಪೌಂಡ್ ಸುತ್ತುವರೆದು, ಅಪ್ಪಿಕೊಂಡರು. ‘ಕಾರ್ಖಾನೆಯೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. ಇದು ತಾಯಿ ಮಕ್ಕಳ ಸಂಬಂಧ. ಕಾರ್ಖಾನೆ ಮುಚ್ಚಿ ಹೋದರೆ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಹಾಗಾಗಿ ತಾಯಿಯ ರಕ್ಷಣೆಗಾಗಿ ಆಕೆಯನ್ನು ಅಪ್ಪಿಕೊಂಡಿದ್ದೇವೆ’ ಎಂದು ಕಾರ್ಮಿಕರು ತಿಳಿಸಿದರು.
ಇದನ್ನೂ ಓದಿ – ಭದ್ರಾವತಿಯಿಂದ ಬೈಕ್ ಜಾಥಾ, ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ರಸ್ತೆ ತಡೆ, ಕಾರ್ಮಿಕರ ಆಕ್ರೋಶ
ಈವರೆಗೂ ಕಾರ್ಖಾನೆ ಮುಂಭಾಗ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ವಿಐಎಸ್ಎಲ್ ಪುನಶ್ಚೇತನಕ್ಕೆ ಆಗ್ರಹಿಸಿ ಈಗ ವಿಭಿನ್ನ ಮತ್ತು ಭಾವನಾತ್ಮಕ ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ.