₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಭದ್ರಾವತಿ: ವೀರಾಪುರ ಗ್ರಾಮದ ಬಳಿ ಅಡಿಕೆ (Areca Nut) ಸುಲಿಯುವ‌ ಶೆಡ್‌ನಲ್ಲಿ ಅಡಿಕೆ ಕಳ್ಳತನವಾಗಿದೆ. ಶ್ರೀರಾಮನಗರ ನಿವಾಸಿ ಬೈರೆಗೌಡ ಬೇರೆಯವರ ತೋಟವನ್ನು ಪಡೆದು ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದರು.

ವೀರಾಪುರ ಗ್ರಾಮದ ಪೆಟ್ರೋಲ್ ಬಂಕ್ ಪಕ್ಕದ ಶೆಡ್‌ನಲ್ಲಿ ಅಡಿಕೆ ಸಂಗ್ರಹಿಸಿಟ್ಟಿದ್ದರು. ಜನವರಿ 1ರ 25 ಚೀಲ ಸುಲಿದ ಹಸಿ ಅಡಿಕೆಯನ್ನು ಶೆಡ್‌ನಲ್ಲಿ ಇಟ್ಟು ಮನೆಗೆ ಹೋಗಿದ್ದರು. ಜನವರಿ 2ರ ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಶೆಡ್‌ನಲ್ಲಿದ್ದ 25 ಚೀಲಗಳ ಪೈಕಿ ಸುಮಾರು ₹1,20,000 ಮೌಲ್ಯದ 9 ಚೀಲ ಹಸಿ ಅಡಿಕೆ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಜನರಿಗೆ ಚಿಕನ್‌ ಬಿರಿಯಾನಿ, ಲಡ್ಡು ಹಂಚಿ ಸಂಭ್ರಮಾಚರಣೆ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment