BREAKING NEWS | ಭದ್ರಾ ಜಲಾಶಯದ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಬಿಡಲಾಗುತ್ತಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | BHADRAVATHI | 14 ಜುಲೈ 2022

ಭದ್ರಾ ಜಲಾಶಯ (BHADRA DAM) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

Shimoga Nanjappa Hospital

ಭದ್ರಾ ಜಲಾಶಯಕ್ಕೆ 43,051 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಇವತ್ತು 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ನೀರಿನ ಹೊರ ಹರಿವು ಹೆಚ್ಚಳ

ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾದಂತೆ ಹೊರ ಹರಿವು ಪ್ರಮಾಣ ಏರಿಕೆಯಾಗಲಿದೆ. ಪ್ರಸ್ತುತ ಅರ್ಧ ಅಡಿಯಷ್ಟು ಗೇಟನ್ನು ಮೇಲಕ್ಕೆತ್ತಲಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು, ‘ಭದ್ರಾ ಜಲಾಶಯ ಇಷ್ಟು ಬೇಗ ಭರ್ತಿಯಾಗಿರುವುದು ಖುಷಿಯ ವಿಚಾರ. ಇಷ್ಟು ಬೇಗ ಗೇಟ್ ಮೂಲಕ ನೀರು ಬಿಟ್ಟಿರುವುದು ಇದೆ ಮೊದಲು. ನೀರಿನ ಪ್ರಮಾಣ ಹೆಚ್ಚಳವಾದಂತೆ ಹೊರ ಹರಿವ ಏರಿಕೆಯಾಗಲಿದೆ’ ಎಂದು ತಿಳಿಸಿದರು.

ಇದಕ್ಕೂ ಮೊದಲು ಪವಿತ್ರಾ ರಾಮಯ್ಯ ಅವರು ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಿದರು. ಬಳಿಕ ಪೂಜೆ ಸಲ್ಲಿಸಿ ನಾಲ್ಕು ಗೇಟುಗಳನ್ನು ಮೇಲೆತ್ತಲಾಯಿತು. ಇನ್ನು, ಭದ್ರಾ ಜಲಾಶಯದಿಂದ ನೀರು ಹೊರ ಬಿಡುವ ವಿಚಾರ ತಿಳಿದು ಸುತ್ತಮುತ್ತ ಗ್ರಾಮದ ಜನರು ಡ್ಯಾಂ ಬಳಿಗೆ ಬಂದಿದ್ದರು. ಪ್ರತಿ ಗೇಟ್ ಮೇಲೆತ್ತಿದಾಗಲೂ ಜನರು ಖುಷಿಯಿಂದ ಚಪ್ಪಾಳ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಇದನ್ನೂ ಓದಿ – ಹೊಸನಗರದ ಸಾವೇಹಕ್ಲು ಜಲಾಶಯ ಓವರ್ ಫ್ಲೋ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment