SHIVAMOGGA LIVE NEWS | 5 DECEMBER 2024
ಭದ್ರಾವತಿ : ಮೂರು ತಿಂಗಳಿಂದ ವೇತನ ಪಾವತಿಸದ ಹಿನ್ನೆಲೆ ಭದ್ರಾ ಜಲಾಶಯದ (DAM) ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು. ಬಿಆರ್‌ಪಿಯಲ್ಲಿರುವ ಎಂಜಿನಿಯರ್ ಕಚೇರಿ ಮುಂಭಾಗ ಧರಣಿ ನಡೆಸಿದರು.
ಭದ್ರಾ ಜಲಾಶಯದ ವಿವಿಧ ವಿಭಾಗಗಳಲ್ಲಿ 290ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಕರ್ತವ್ಯಕ್ಕೆ ನೇಮಿಸಿಕೊಂಡ ಏಜೆನ್ಸಿಯು ಕಳೆದ ಮೂರು ತಿಂಗಳಿಂದ ವೇತನ ಪಾವತಿಸಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.
ಇದನ್ನೂ ಓದಿ » ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರ ಭೇಟಿ, ಕಾರಣವೇನು?