ಭದ್ರಾವತಿಯ ಮಹಿಳೆ ಸೇರಿ ಇಬ್ಬರಿಗೆ ಗಲ್ಲು ಶಿಕ್ಷೆ, ₹14 ಲಕ್ಷ ದಂಡ, ಏನಿದು ಕೇಸ್?

ಭದ್ರಾವತಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ (Death Penalty) ವಿಧಿಸಿ ತೀರ್ಪು ನೀಡಿದೆ.

ಏನಿದು ಕೇಸ್?

ಸುರಗಿತೋಪಿನ ನಿವಾಸಿ ಫ್ಲೋರಾ ನ್ಯಾನ್ಸಿ, ರಾಜಶೇಖರಯ್ಯ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಸಂಬಂಧಕ್ಕೆ ಅಡ್ಡಿ ಆಗತ್ತಾರೆ ಎಂಬ ಕಾರಣಕ್ಕೆ ಪತಿ ಪ್ರಕಾಶ್ ಬಾಬು ಅವರನ್ನು ಕೊಲೆ ಮಾಡಿದ್ದರು. 2020ರ ಜನವರಿ 15ರಂದು ಮತ್ತು ಬರುವ ಔಷಧಿ ನೀಡಿ, ನಂತರ ಉಸಿರುಗಟ್ಟಿಸಿ ಪ್ರಕಾಶ್ ಬಾಬು ಅವರನ್ನು ಕೊಲೆ ಮಾಡಿದ್ದರು.

Bhadravathi Nancy Case

ಈ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಇ.ಓ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿಗಳ ಮೇಲಿನ ಅಪರಾಧ ದೃಢಪಟ್ಟ ಹಿನ್ನೆಲೆ ಶಿಕ್ಷೆ ಪ್ರಕಟಿಸಿದ್ದಾರೆ.

Bhadravathi Nancy Case

ಫ್ಲೋರಾ ನ್ಯಾನ್ಸಿ ಮತ್ತು ರಾಜಶೇಖರಯ್ಯ ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಆರೋಪಿಗಳಿಗೆ ₹14,00,000 ದಂಡ ವಿಧಿಸಲಾಗಿದೆ. ಪಿರ್ಯಾದಿದಾರರಿಗೆ ₹5,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion