ಭದ್ರಾವತಿಯಲ್ಲಿ ಯುವಕನನ್ನು ವಶಕ್ಕೆ ಪಡೆದು ಮೆಡಿಕಲ್‌ ಟೆಸ್ಟ್‌, ಬಳಿಕ ಅರೆಸ್ಟ್‌, ಯಾಕೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಭದ್ರಾವತಿ: ಗಾಂಜಾ ಸೇವನೆ (Consumption of Ganja) ಮಾಡಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ, ಕಿರಿಕಿರಿ ಉಂಟುಮಾಡುತ್ತಿದ್ದ ಯುವಕನನ್ನು ಇಲ್ಲಿನ ಹಳೇನಗರ ಪೊಲೀಸ್ ಠಾಣೆಯ (Bhadravathi Old Town Police Station) ಪೊಲೀಸರು ಬಂಧಿಸಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಬಂಧಿತನನ್ನು ನೆಹರು ನಗರದ ಸಾದತ್ ಕಾಲೋನಿ ನಿವಾಸಿ ರಸೂಲ್ (24) ಎಂದು ಗುರುತಿಸಲಾಗಿದೆ. ನೆಹರು ನಗರದ ಖಬರಸ್ಥಾನದ ಪಕ್ಕದ ಕಾಂಪೌಂಡ್ ಹತ್ತಿರದ ಟಿ.ಕೆ.ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಆಗ ರಸ್ತೆ ಪಕ್ಕದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. 

Shivamogga-Police-Jeep

ಮಾದಕ ವಸ್ತು (Narcotic Substance) ಸೇವನೆ ಮಾಡಿರುವ ಶಂಕೆ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ (Detained) ಪಡೆದು ವಿಚಾರಣೆ ನಡೆಸಿದರು. ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ (Bhadravathi Public Hospital) ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ರಸೂಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ.