ಭದ್ರಾವತಿಯಲ್ಲಿ ಹಲವರಿಗೆ ಕರೋನ, ಇವತ್ತು ಎರಡು ಕಡೆ ರಸ್ತೆಗಳು ಸೀಲ್ ಡೌನ್, ಎಲ್ಲೆಲ್ಲಿ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 30 ಜೂನ್ 2020

ಭದ್ರಾವತಿ ಸಿಟಿಯಲ್ಲಿ ಇವತ್ತು ಹಲವರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನಗರದ ಎರಡು ಕಡೆ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದ ನಗರದಲ್ಲಿ ಆತಂಕ ಸೃಷ್ಟಿಯಾಗಿದೆ.

300620 Bhadravathi Subhash Nagara Seal Down 1

ಎಲ್ಲೆಲ್ಲಿ ಸೀಲ್ ಡೌನ್ ಆಗಿದೆ?

ಸುಭಾಷ್ ನಗರ | ಬಡಾವಣೆಯ ಮೂರು ರಸ್ತೆಗಳನ್ನು ಸದ್ಯಕ್ಕೆ ಸೀಲ್ ಡೌನ್

ಗಾಂಧಿನಗರ | ಮೊದಲಿಯಾರ್ ಸಮುದಾಯ ಭವನಕ್ಕೆ ತೆರಳುವ ಮುಖ್ಯ ರಸ್ತೆ ಸೀಲ್ ಡೌನ್

ಯಾರಿಗೆಲ್ಲ ಸೋಂಕು ತಗುಲಿದೆ?

ಗಾಂಧಿನಗರದ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನುವುದು ಇನ್ನೂ ಖಚಿತವಾಗಿಲ್ಲ. ಮತ್ತೊಂದೆಡೆ ತಮಿಳುನಾಡಿನಿಂದ ಹೋಗಿ ಹಿಂತಿರುಗಿದ್ದ ಸುಭಾಷ್ ನಗರದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.  

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಹೆಚ್ಚಿನ Shimoga News, Shivamogga News ಮತ್ತು BHADRAVATHI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಜೂನ್ 30, 2020

Leave a Comment