ಶಿವಮೊಗ್ಗ ಲೈವ್
ಭದ್ರಾವತಿ: ರಾಜ್ಯ ಸರ್ಕಾರ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿದೆ. ಭದ್ರಾವತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ ಇಲ್ಲಿದೆ.
ಅನವೇರಿ, ಮಂಗೋಟೆ, ಮೈದೂಳಲು ಮತ್ತು ಸಿದ್ಲೀಪುರ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಯಡೇಹಳ್ಳಿ ಪರಿಶಿಷ್ಟ ಪಂಗಡ ಮಹಿಳೆ, ಕಲ್ಲಿಹಾಳ್ ಹಿಂದುಳಿದ ವರ್ಗ ‘ಅ’, ಅರಬಿಳಚಿ ಪರಿಶಿಷ್ಟ ಜಾತಿ, ಕೂಡ್ಲಿಗೆರೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಕಾಗೆಕೋಡಮಗ್ಗೆ ಹಿಂದುಳಿದ ವರ್ಗ ‘ಬ’ ಮಹಿಳೆಗೆ ಮೀಸಲಾಗಿವೆ.

ಅರಳಿಹಳ್ಳಿ ಪರಿಶಿಷ್ಟ ಜಾತಿ, ಅಂತರಗಂಗೆ ಸಾಮಾನ್ಯ, ಮಾವಿನಕೆರೆ ಸಾಮಾನ್ಯ ಮಹಿಳೆ, ಬಾರಂದೂರು ಸಾಮಾನ್ಯ, ಹಿರಿಯೂರು ಮತ್ತು ಕಲ್ಲಹಳ್ಳಿ ಪರಿಶಿಷ್ಟ ಜಾತಿ ಮಹಿಳೆ, ಸಿಂಗನಮನೆ ಸಾಮಾನ್ಯ ಮಹಿಳೆ, ದೊಣಬಘಟ್ಟ ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಹುಣಸೇಕಟ್ಟೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.