ಭದ್ರಾವತಿಯ ಪ್ರಮುಖ ಬೀದಿಗಳಲ್ಲಿ ದಿಂಡಿ ಉತ್ಸವದ ವೈಭವದ ಮೆರವಣಿಗೆ, ಮೂರು ದಿನದ ಉತ್ಸವ ಹೇಗಿತ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 MAY 2023

BHADRAVATHI : ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ದಿಂಡಿ ಉತ್ಸವ ಅಂಗವಾಗಿ ಭದ್ರಾವತಿ ಪಟ್ಟಣದಲ್ಲಿ ರಾಜಬೀದಿ ಮೆರವಣಿಗೆ (Procession) ನಡೆಯಿತು. ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Bhavasara-Kshatirya-Samaja-Bhadravathi-Dindi-Utsava

ಶ್ರೀ ಕೃಷ್ಣ ರುಕ್ಮಿಣಿಯರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರದ ವಾಹನದಲ್ಲಿ ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ನಡೆಸಲಾಯಿತು. ವಾದ್ಯ ತಂಡಗಳೊಂದಿಗೆ ದೇವರ ನಾಮ ಜಪಿಸುತ್ತ ಭಕ್ತರು ಹೆಜ್ಜೆ ಹಾಕಿದರು. ನಂತರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಾಗ್ತಾರೆ ಮಿನಿಸ್ಟರ್?

ಮೂರು ದಿನ ದಿಂಡಿ ಉತ್ಸವ ಆಯೋಜಿಸಲಾಗಿತ್ತು. ಮೇ 16ರಂದು ಭೂತನಗುಡಿಯ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪೋತಿ ಸ್ಥಾಪನೆ. ಮೇ 17ರಂದು ಅಖಂಡ ಜಾಗರಣೆ, ಪ್ರವಚನ ಕಾರ್ಯಕ್ರಮ ಜರುಗಿತು. ಮೂರನೆ ದಿನ ವೈಭವದ ರಾಜಬೀದಿ ಮೆರವಣಿಗೆ (Procession)  ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಇದನ್ನೂ ಓದಿ – ಪ್ರಥಮ ಪಿಯುಸಿಗೆ ಉಚಿತ ಪ್ರವೇಶಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮಾನದಂಡವೇನು?

ಪ್ರಮುಖರಾದ ಡಿ.ಕೆ.ರಾಘವೇಂದ್ರ ರಾವ್‌ ಡೋಯಿಜೋಡೆ, ಟಿ.ಎಸ್.ಭವಾನಿ ಕುಮಾರ್‌ ತೇಲ್ಕರ್‌, ಟಿ.ಎಂ.ವಿಠಲನಾಥ ತೇಲ್ಕರ್‌, ರಾಘವೇಂದ್ರ, ಶ್ರೀದರ್‌ ರಾವ್‌, ನಾರಾಯಣ ರಾವ್, ಮಂಜುಳಾ, ಪ್ರತಿಮಾ, ಮೈಲಾರಿ ರಾವ್‌, ಸ್ವಪ್ನಾ ಕುಮಾರ್‌, ಜಗನ್ನಾಥ ಸೇರಿದಂತೆ ಹಲವರು ಇದ್ದರು.

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 19, 2023

Leave a Comment