ಶಾಲೆ ಬಳಿ ಬಾಲಕಿಗೆ ಬೈಕ್‌ ಡಿಕ್ಕಿ, ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಳೆಹೊನ್ನೂರು: ಇಲ್ಲಿನ ಅರಹತೊಳಲು ಗ್ರಾಮದ ಶಾಲೆಯ ಗೇಟ್ ಬೈಕ್‌ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಅರಹತೊಳಲು ಗ್ರಾಮದ ನವ್ಯಶ್ರೀ (8) ಗಾಯಗೊಂಡ ಬಾಲಕಿ. ಆಗಸ್ಟ್ 25ರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಕೈಮರ ಕಡೆಯಿಂದ ಬಂದ ಬೈಕ್ ಬಾಲಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಾಲಕಿಯ ಕಾಲು ಹಾಗೂ ಎಡಕೈಗೆ ತೀವ್ರ ಪೆಟ್ಟಾಗಿದೆ.

Holehonnuru-Police-Station-Bhadravathi-jpg

ತಕ್ಷಣ ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಬೈಕ ಸವಾರನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.