ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 OCTOBER 2023
HOLEHONNURU : ಲಾರಿ ಮತ್ತು ಎರಡು ಬೈಕುಗಳ (BIKES) ನಡುವೆ ಡಿಕ್ಕಿ ಸಂಭವಿಸಿದ್ದು ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದಾರೆ. ಲಾರಿ ಚಕ್ರ ಅಡಿಗೆ ಸಿಲುಕಿದ್ದ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿವೆ.
ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ – ಅರಹತೊಳಲು ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಗುರುತು ಪತ್ತೆಯಾಗಿಲ್ಲ. ಮತ್ತೊಂದು ಬೈಕಿನಲ್ಲಿದ್ದ ಭದ್ರಾವತಿ ತಾಲೂಕು ಅರದೊಟ್ಲು ಗ್ರಾಮದ ಗಗನ್ಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?
ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422