ಓಣಿಯೊಳಗೆ ಸಿಲುಕಿದ ಗೂಳಿಗಳು, ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣೆ, ಆಗಿದ್ದೇನು?

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ

ಭದ್ರಾವತಿ: ಅಪ್ಪ‌ರ್ ಹುತ್ತಾ ಕಾಲನಿಯ ಮನೆಯ ಮೆಟ್ಟಿಲು ಹತ್ತಿದ ಗೂಳಿ ಹಾಗೂ ಹಿಂಬಾಲಿಸಿದ ಮತ್ತೊಂದು ಗೂಳಿ ಓಣಿಯಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದರು.

bulls-trapped-in-a-narrow-lane-at-Bhadravathi

ಅಪ್ಪರ್‌ಹುತ್ತಾ ಕಾಲನಿಯಲ್ಲಿ ಬಿಡಾಡಿ ಹೋರಿಗಳು ಕಾದಾಡಿ ಚಂದ್ರಶೇಖ‌ರ್ ಅವರ ವಠಾರಕ್ಕೆ ತಲುಪಿವೆ. ಒಂದು ಗೂಳಿ ಮನೆಯ ಮೆಟ್ಟಿಲು ಹತ್ತಿ ವಾಪಸ್ ಬರಲಾಗದೆ ಸಿಲುಕಿದೆ. ಇದನ್ನು ಹಿಂಬಾಲಿಸಿದ ಮತ್ತೊಂದು ಗೂಳಿ ಓಣಿಯೊಳಗೆ ಸಿಲುಕಿಕೊಂಡಿತ್ತು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಗೂಳಿಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿ ಆನಂದ, ಸುರೇಶ್, ಹರೀಶ್, ಸಂತೋಷ್ ಪಾಲ್ಗೊಂಡಿದ್ದರು.