ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 1 ಏಪ್ರಿಲ್ 2022
ಹಲಾಲ್ ಗಲಾಟೆಗೆ ಸಂಬಂಧಿಸಿದಂತೆ ಹಳೇನಗರ ಹಾಗೂ ಹೊಸಮನೆ ಪೊಲೀಸ್ ಠಾಣೆಗಳಲ್ಲಿ ಬಜರಂಗದಳದ 7 ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ.
ನಗರದ ಹೊಸಮನೆ ಬಡಾವಣಿ, ಬಿ.ಎಚ್.ರಸ್ತೆ, ಸಂತೆ ಮೈದಾನ, ಸಿ.ಎನ್.ರಸ್ತೆ ಸೇರಿದಂತೆ ನಗರದ ಎಲ್ಲೆಡೆ ಇರುವ ಚಿಕನ್, ಮಟನ್ ಅಂಗಡಿಗಳು, ರೆಸ್ಟೋರೆಂಟ್ಗಳಿಗೆ ಬುಧವಾರ ತೆರಳಿದ ಬಜರಂಗದಳದ ಕಾರ್ಯಕರ್ತರು ಇನ್ನು ಮುಂದೆ ಹಿಂದುಗಳಿಗೆ ನೀವು ಹಲಾಲ್ ಮಾಡದ ಮಾಂಸ ನೀಡಬೇಕು ಎಂದು ಹಿಂದು ಹಾಗೂ ಅನ್ಯ ಕೋಮಿನವರ ಅಂಗಡಿ ಮಾಲೀಕರುಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೆ ಬಹುತೇಕ ಮಾಂಸ ಮಾರಾಟಗಾರರು ಒಪ್ಪಿಗೆ ಸೂಚಿಸಿದ್ದಾರೆ.
ಆದರೆ ಹೊಸಮನೆ ವ್ಯಾಪ್ತಿಯಲ್ಲಿನ ಒಂದು ಚಿಕನ್ ಅಂಗಡಿಯಲ್ಲಿ ಕೆಲಸಗಾರ ನಾನು ಹಲಾಲ್ ಮಾಡದೆ ಯಾರಿಗೂ ಮಾಂಸ ನೀಡುವುದಿಲ್ಲ ಎಂದು ಹೇಳಿದಾಗ ಕಾರ್ಯಕರ್ತರು ಹಾಗೂ ಆತನಿಗೂ ಮಾತಿನ ಚಕಮಕಿ ನಡೆದಿದ್ದು ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ.
ಅದೇ ರೀತಿ ಪಟ್ಟಣದ ಬಿ.ಎಚ್. ರಸ್ತೆಯ ಮಾಂಸಾಹಾರಿ ಹೋಟೆಲ್ಗೆ ತೆರಳಿದ ಬಜರಂಗದಳದ ಕಾರ್ಯಕರ್ತರು ನಿಮ್ಮ ಹೋಟೆಲ್ಗೆ ಹಿಂದುಗಳೇ ಹೆಚ್ಚಾಗಿ ಬರುತ್ತಿದ್ದು ನೀವು ಇನ್ನು ಮುಂದೆ ಗ್ರಾಹಕರಿಗೆ ಹಲಾಲ್ ಮಾಡದ ಮಾಂಸದೂಟ ನೀಡಿ ಎಂದು ಮನವಿ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಗ್ರಾಹಕನೊಬ್ಬ ನನಗೆ ಹಲಾಲ್ ಮಾಡಿದ ಮಾಂಸವೇ ಬೇಕು. ನನಗೆ ಅದನ್ನೇ ಕೊಡಿ ಎಂದಿದ್ದಾನೆ. ಆಗ ಕಾರ್ಯಕರ್ತರು ಹಾಗೂ ಗ್ರಾಹಕನ ನಡುವೆ ಮಾತಿನ ಚಕಮಕಿ ನಡೆದಿದ್ದು ಗ್ರಾಹಕ ಬಜರಂಗದಳದ ಕಾರ್ಯಕರ್ತರು ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದಾನೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

- ರೈಲಿಗೆ ತಲೆ ಕೊಟ್ಟು ಯುವಕ ಸಾವು, ತುರ್ತು ಬ್ರೇಕ್ ಹಾಕಿದ ಲೋಕೊ ಪೈಲೆಟ್

- ಇವತ್ತು ರಂಗ ಪಂಚಮಿ, ಈ ದಿನ ಯಾವ್ಯಾವ ಶುಭ ಸಮಯ ಎಷ್ಟೊತ್ತಿಗಿದೆ?

About The Editor
ನಿತಿನ್ ಆರ್.ಕೈದೊಟ್ಲು





