BREAKING NEWS – ಕ್ಯಾಂಟರ್‌ ಲಾರಿ ಪಲ್ಟಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಳಿಗಳನ್ನು ಹೊತ್ತೊಯ್ದ ಜನ

ಭದ್ರಾವತಿ: ಫಾರಂ ಕೋಳಿಗಳನ್ನು (Chicken) ಸಾಗಿಸುತ್ತಿದ್ದ ಕ್ಯಾಂಟರ್‌ ಲಾರಿ ಪಲ್ಟಿಯಾಗಿದ್ದು, ಕೋಳಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ರಸ್ತೆ ಬದಿಗೆ ಬಿದ್ದಿವೆ. ದಾರಿಯಲ್ಲಿ ಹೋಗುತ್ತಿದ್ದ ಜನರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದ 2 ಪ್ರಮುಖ ರೈಲ್ವೆ ಮಾರ್ಗ ಯೋಜನೆ ಸ್ಥಗಿತ, ಸಂಸದ ರಾಘವೇಂದ್ರ ಆಕ್ರೋಶ, ಕಾರಣವೇನು?

ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ದೇವಸ್ಥಾನದ ತಿರುವಿನಲ್ಲಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್‌ ಲಾರಿ ಪಲ್ಟಿಯಾಗಿದೆ. ಕೋಳಿಗಳನ್ನು ಹೊತ್ತು ಆನವೇರಿ ಕಡೆಗೆ ಲಾರಿ ಸಾಗುತ್ತಿತ್ತು.

ಇನ್ನು, ಲಾರಿಯಿಂದ ಹೊರಬಿದ್ದ ಫಾರಂ ಕೋಳಿಗಳನ್ನು ಜನರು ಹೊತ್ತೊಯ್ದಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದವರೆಲ್ಲ ಎರಡ್ಮೂರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಅಪಘಾತದ ರಭಸಕ್ಕೆ ನೂರಾರು ಕೋಳಿಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ವಿಡಿಯೋ, ಮಾಹಿತಿ: ಅನಿಲ್‌

utsav-exhibition.webp

Chicken-Lorry-incident-near-mallapura-in-Bhadravathi

Leave a Comment