ಮದುವೆಗೆ ಹೋಗಿದ್ದ ಭದ್ರಾವತಿಯ ಒಂದೇ ಊರಿನ 21 ಮಂದಿಗೆ ಕರೋನ, ಗ್ರಾಮದಲ್ಲಿ ಢವಢವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 APRIL 2021

ಮದುವೆಗೆ ಹೋಗಿದ್ದ ಒಂದೇ ಊರಿನ 21 ಮಂದಿಯಲ್ಲಿ ಕರೋನ ಸೋಂಕು ಪತ್ತೆಯಾಗಿದೆ. ಇದರಿಂದ ಇಡೀ ಊರು ಆತಂಕಗೊಂಡಿದೆ.

ಭದ್ರಾವತಿ ತಾಲೂಕು ಹೊಸಳ್ಳಿ ಗ್ರಾಮದ 21 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಇನ್ನಷ್ಟು ಮಂದಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಇವತ್ತು ಇಡೀ ಊರಿನವರ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದೆ.

Covid 19 Vaccination Kan poster 1 1

ಅಂಗನವಾಡಿ ಕಾರ್ಯಕರ್ತೆಯ ಮಗಳ ಮದುವೆ

ಹೊಳೆಹೊನ್ನೂರು ಸಮೀಪದ ನಾಗತಿ ಬೆಳಗಲು ನಂಜುಂಡೇಶ್ವರ ದೇವಸ್ಥಾನದಲ್ಲಿ ಹೊಸಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯ ಮಗಳ ಮದುವೆ ಇತ್ತು. ಹೊಸಳ್ಳಿಯ ಹಲವರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಳಿಕ ಕೆಲವರಲ್ಲಿ ಕೆಮ್ಮು, ಶೀತ, ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಒಳಗಾದಾಗ ಕರೋನ ಸೋಂಕು ದೃಢವಾಗಿತ್ತು.

72 ಮಂದಿಗೆ ಪರೀಕ್ಷೆ

ಹೊಸಳ್ಳಿ ಗ್ರಾಮದ 72 ಮಂದಿ ಪರೀಕ್ಷೆಗೆ ಒಳಗಾಗಿದ್ದು, ಈ ಪೈಕಿ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಸೋಂಕಿತರಿಗೆ ಕೂಡಲೆ ಚಿಕಿತ್ಸೆಗೊಳಪಡಿಸಲಾಯಿತು. ಈ ನಡುವೆ ವರನ ಗ್ರಾಮವಾದ ಕುಂಚೇನಹಳ್ಳಿಯಲ್ಲೂ ಈಗ ಆತಂಕ ಸೃಷ್ಟಿಯಾಗಿದೆ.

ಹೊಸಳ್ಳಿಗೆ ಇವತ್ತು ಎರಡು ಟೀಮ್

ಹೊಸಳ್ಳಿ ಗ್ರಾಮದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ಇವತ್ತು ಊರಿಗೆ ಎರಡು ತಂಡ ಕಳುಹಿಸಲಾಗುತ್ತಿದೆ. ಗ್ರಾಮಸ್ಥರ ಸ್ವ್ಯಾಬ್ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment