ಭದ್ರಾವತಿಯ ಇಬ್ಬರಿಗೆ 10 ವರ್ಷ ಜೈಲು, ₹2.23 ಲಕ್ಷ ದಂಡ, ಕಾರಣವೇನು?

Published On : ಏಪ್ರಿಲ್ 2, 2026

Published By : ನಿತಿನ್‌ ಆರ್‌.ಕೈದೊಟ್ಲು 

ಭದ್ರಾವತಿ: ಯುವಕನೊಬ್ಬನಿಗೆ ನಿಂದಿಸಿ, ಹಲ್ಲೆ ಮಾಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ 10 ವರ್ಷ ಕಠಿಣ ಕಾರಾಗೃಹ ವಾಸದ ಶಿಕ್ಷೆ (prison) ಹಾಗೂ ₹2.23 ಲಕ್ಷ ದಂಡ ವಿಧಿಸಿದೆ.

ಇದನ್ನೂ ಓದಿ : ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿ ತಾಲ್ಲೂಕು ಮಲ್ಲಾಪುರ ಗ್ರಾಮದ ನಾಗರಾಜ್ ರಾವ್ (26) ಹಾಗೂ ಮಂಜೋಜಿ ರಾವ್ (50) ಶಿಕ್ಷೆಗೆ ಗುರಿಯಾದವರು.

ಇದನ್ನೂ ಓದಿ : ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಇವರು ಅದೇ ಗ್ರಾಮದ ನವೀನ್ ಕುಮಾರ್ (22) ಎಂಬ ಯುವಕನಿಗೆ ಮೇ 5, 2021ರಂದು ತಮ್ಮ ಮನೆಯ ಹುಡುಗಿಯೊಬ್ಬಳಿಗೆ ಮೆಸೇಜ್‌ ಕಳಿಸುತ್ತೀಯಾ ಎಂದು ಬೈದು, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿತ್ತು. ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇಬ್ಬರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಮೃತನ ತಂದೆಗೆ ₹ 1.5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 2, 2026

Leave a Comment