ಚಲಿಸುತ್ತಿದ್ದ ಗೂಡ್ಸ್‌ ವಾಹನದಿಂದ ಜಿಗಿದ ಹಸು, ಒಳಗಿದ್ದವು ಇನ್ನೂ ಏಳೆಂಟು ಗೋವು, ಮುಂದೇನಾಯ್ತು?

SHIVAMOGGA LIVE NEWS | 17 FEBRUARY 2024

BHADRAVATHI : ಚಲಿಸುತ್ತಿದ್ದ ಗೂಡ್ಸ್‌ ವಾಹನದಿಂದ ಹಸುವೊಂದು ಕೆಳಗೆ ಹಾರಿ ಪರಾರಿಯಾಗಿದೆ. ವಾಹನದಲ್ಲಿ ಇನ್ನಷ್ಟು ಗೋವುಗಳಿದ್ದು, ಹತ್ಯೆ ಮಾಡುವ ಉದ್ದೇಶದಿಂದ ಕೊಂಡೊಯ್ದಿರುವ ಶಂಕೆ ವ್ಯಕ್ತಪಡಿಸಿ ದೂರು ನೀಡಲಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭದ್ರಾವತಿಯ ತರೀಕೆರೆ ರಸ್ತೆಯ ಗಾಂಧಿ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಗೂಡ್ಸ್‌  ವಾಹನದಿಂದ ಹಸು ಕೆಳಗೆ ಹಾರಿದೆ. ವಾಹನದಲ್ಲಿ ಏಳೆಂಟು ಗೂವುಗಳಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಧವಾಚಾರ ಸರ್ಕಲ್‌ ಮೂಲಕ ಗೂಡ್ಸ್‌ ವಾಹನ ತೆರಳಿದೆ. ಈ ಮಾರ್ಗದಲ್ಲಿರುವ ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರ ದೇವರಾಜ್‌ ಎಂಬುವವರು ದುರು ನೀಡಿದ್ದಾರೆ. ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಹುಂಡೈ ಶೋ ರೂಂಗೆ ಬೆಂಕಿ, ಟಾಟಾ ಕಾರುಗಳು ಅಗ್ನಿಗಾಹುತಿ, ಬೆಂಕಿ ಹೊತ್ತಿದ್ದೇಕೆ? ಏನೇನೆಲ್ಲ ಸುಟ್ಟು ಹೋಗಿದೆ?

Police-Van-Jeep-at-Shimoga-Nehru-Road

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment