ಬಡವರಿಗೆ ಮನೆ, ನಿವೇಶನಕ್ಕೆ ಆಗ್ರಹ, ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಹೋರಾಟ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 SEPTEMBER 2023

BHADRAVATHI : ನಿವೇಶನ ಮತ್ತು ವಸತಿ (House) ರಹಿತರಿಗೆ ವಸತಿ ಮತ್ತು ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಹೆಚ್‌.ಕೆ.ಜಂಕ್ಷನ್‌ ಸಮೀಪ ಸರ್ವೆ ನಂಬರ್‌ 29ರಲ್ಲಿ 350 ಬಡ ಕುಟುಂಬಗಳು ವಾಸವಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಬೇಕು ಮತ್ತು ಮೂಲ ಸೌಕರ್ಯ ಒದಗಿಸಬೇಕು. ತಾರೀಕೆಟ್ಟೆಯಲ್ಲಿ ಸರ್ಕಾರಿ ಜಮೀನು ಲಭ್ಯವಿದೆ. ಇಲ್ಲಿ ಬಡವರಿಗೆ ನಿವೇಶನ ನೀಡಬೇಕು. ಹಾತಕಟ್ಟೆಯಲ್ಲಿ ನಿವೇಶನ ರಹಿತವಾಗಿರುವ 300 ಕುಟುಂಬಗಳಿವೆ ಸೂಕ್ತ ಜಮೀನು ಗುರುತಿಸಿ ನಿವೇಶನ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಇದನ್ನೂ ಓದಿ – ಗಣಪತಿ ಮುಂದೆ ಭರ್ಜರಿ ಡಾನ್ಸ್‌, ವಿಡಿಯೋ ವೈರಲ್‌, ಮನೆಗೆ ಬಂದರು ಪೊಲೀಸ್‌, ಏನಿದು ಕೇಸ್‌?

ದಲಿತ ಸಂಘರ್ಷ ಸಮಿತಿ ಸಂಯೋಜಕ ಅಣ್ಣಾದೊರೆ, ಮೂರ್ತಿ, ತಾಲೂಕು ಸಂಯೋಜಕ ರಾಜು, ಜಗನ್ನಾಥ್‌ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು ನಿದ್ರೆಗೆ ಜಾರಿದ ಯುವಕ, ಎಚ್ಚರವಾದಾಗ ಕಾದಿತ್ತು ಆಘಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment