SHIVAMOGGA LIVE NEWS | 21 SEPTEMBER 2023
BHADRAVATHI : ಮುಖ್ಯ ಶಿಕ್ಷಕರೊಬ್ಬರ ವರ್ಗಾವಣೆ (Transfer) ಖಂಡಿಸಿ ಗ್ರಾಮಸ್ಥರು ಶಾಲೆ ಮುಂಭಾಗ ಪ್ರತಿಭಟಿಸಿ (PROTEST), ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಶಾಲೆ ಸಮೀಪ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಭದ್ರಾವತಿ ತಾಲೂಕು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ (High School) ಮುಖ್ಯ ಶಿಕ್ಷಕ ಮೋತಿ ನಾಯ್ಕ್ ಅವರ ವರ್ಗಾವಣೆ ಖಂಡಿಸಿ ಪೋಷಕರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡ ಮತ್ತು ಅಧಿಕಾರಿಗಳು ಕುತಂತ್ರದಿಂದ ಶಿಕ್ಷಕ ಮೋತಿ ನಾಯ್ಕ್ ಅವರನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ ಹತ್ತುವಾಗ ಕೀ ಕೆಳಗೆ ಬಿತ್ತು, ಎತ್ತಿಕೊಂಡ ನಂತರ ಹಿರಿಯ ನಾಗರಿಕನಿಗೆ ಕಾದಿತ್ತು ಶಾಕ್
ಬಿಗಿ ಪೊಲೀಸ್ ಬಂದೋಬಸ್ತ್
ಮುಖ್ಯ ಶಿಕ್ಷಕ ಮೋತಿ ನಾಯ್ಕ್ ಅವರನ್ನು ಶಿಕಾರಿಪುರ ತಾಲೂಕು ಸುರಗೀಹಳ್ಳಿ (Suragihalli) ಗ್ರಾಮದ ಪ್ರೌಢಶಾಲೆಗೆ ವರ್ಗಾಯಿಸಲಾಗಿದೆ. ಇದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ವಿಚಾರ ತಿಳಿದು ಪೊಲೀಸರು ಶಾಲೆ ಸಮೀಪ ಬಂದೋಬಸ್ತ್ ಕೈಗೊಂಡಿದ್ದರು. ಜನರನ್ನು ಶಾಲೆ ಆವರಣದೊಳಗೆ ತೆರಳದಂತೆ ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು ನಿದ್ರೆಗೆ ಜಾರಿದ ಯುವಕ, ಎಚ್ಚರವಾದಾಗ ಕಾದಿತ್ತು ಆಘಾತ
ಸ್ಥಳಕ್ಕೆ ಶಿಕ್ಷಣಾಧಿಕಾರಿ ದೌಡು
ಅರಳಿಹಳ್ಳಿ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಉತ್ತಮವಾಗಿದ್ದು ಶಾಲೆಯ ಅಭಿವೃದ್ಧಿಗೆ ಮುಖ್ಯ ಶಿಕ್ಷಕ ಮೋತಿ ನಾಯ್ಕ್ ಅವರದ್ದು ಪ್ರಮುಖ ಪಾತ್ರ. ರಾಜಕೀಯ ಕಾರಣಕ್ಕಾಗಿ ಅವರನ್ನು ಬೇರೆಡೆ ವರ್ಗಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿಚಾರ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಆಯುಕ್ತರ ಕಚೇರಿಯ ಆದೇಶದಂತೆ ವರ್ಗಾವಣೆಯಾಗಿದೆ ಎಂದು ತಿಳಿಸಿದರು. ಆದರೆ ಗ್ರಾಮಸ್ಥರು ಬಿಇಒ ಮಾತಿಗೆ ಬೆಲೆಕೊಡದೆ ಪ್ರತಿಭಟನೆ ಮುಂದುವರೆಸಿದರು.
ಇದನ್ನೂ ಓದಿ – ಗಣಪತಿ ಮುಂದೆ ಭರ್ಜರಿ ಡಾನ್ಸ್, ವಿಡಿಯೋ ವೈರಲ್, ಮನೆಗೆ ಬಂದರು ಪೊಲೀಸ್, ಏನಿದು ಕೇಸ್?
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಪಾರ್ತೀಬನ್, ಪುಟ್ಟಪ್ಪ, ಕೋಮಲಮ್ಮ, ರುದ್ರೇಶ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಸದಸ್ಯರಾದ ಗುಡ್ಡದ ನೇರಳೇಕೆರೆ ಮೋಹನ್, ನಾಗರಾಜ್, ಕುಮಾರ್, ಅನಿತಾ, ಆಶಾ, ಮೋಹನ್ ಸೇರಿದಂತೆ ದೊಡ್ಡ ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200