VISL ನಿವೃತ್ತ ಕಾರ್ಮಿಕರ ಚುನಾವಣೆ, ಯಾರೆಲ್ಲ ಸ್ಪರ್ಧಿಸಿದ್ದಾರೆ? ಯಾವಾಗ ಎಲೆಕ್ಷನ್?

 ಶಿವಮೊಗ್ಗ  LIVE 

ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (VISL) ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಚುನಾವಣೆ ಡಿ.28ರಂದು ನಡೆಯಲಿದೆ. 15 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 32 ಮಂದಿ ಕಣದಲ್ಲಿದ್ದಾರೆ.

ಸಿಲ್ವ‌ರ್ ಜ್ಯೂಬಿಲಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಚುನಾವಣೆ ಜರುಗಲಿದೆ. 2,902 ಮಂದಿ ನಿವೃತ್ತ ನೌಕರರು ಮತ ಚಲಾಯಿಸಲಿದ್ದಾರೆ. ಇದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ಹಾಲಿ ಅಧ್ಯಕ್ಷರ ನೇತೃತ್ವದಲ್ಲಿ ತಂಡ ಅಖಾಡಕ್ಕೆ

ಹಾಲಿ ಅಧ್ಯಕ್ಷ ಬಿ.ಜೆ.ರಾಮಲಿಂಗಯ್ಯ ನೇತೃತ್ವದಲ್ಲಿ ಹಾಲಿ ನಿರ್ದೇಶಕರಾದ ಅಡವೀಶಯ್ಯ, ಕೆಂಪಯ್ಯ, ಎಸ್.ಗಜೇಂದ್ರ, ಎಲ್. ಬಸವರಾಜಪ್ಪ, ಎಸ್.ಎಸ್.ಭೈರಪ್ಪ, ಬಿ. ಮಂಜುನಾಥ್‌, ಮಹೇಶ್ವರಪ್ಪ, ಬಿ.ಕೆ.ರವೀಂದ್ರ ರೆಡ್ಡಿ, ಬಿ.ಜೆ.ರಾಮಲಿಂಗಯ್ಯ, ಲಾಜರ್, ಜಿ. ಶಂಕರ್, ಎಸ್.ಎಚ್.ಹನುಮಂತರಾವ್, ಹೊಸದಾಗಿ ರಾಮಪ್ಪ ವಿ. ಮುನೇನಕೊಪ್ಪ, ಎನ್‌.ಆ‌ರ್.ಜಯರಾಜ್ ಮತ್ತು ಪಿ.ಮಂಜುನಾಥ ರಾವ್ ಕಣಕ್ಕಿಳಿದಿದ್ದಾರೆ.

110823 VISL Factory Bhadravathi

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

ಒಕ್ಕೂಟದ ಹೆಸರಿನಲ್ಲಿ ಪ್ರತಿಸ್ಪರ್ಧೆ

ವಿಐಎಸ್ಎಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಹೆಸರಿನಲ್ಲಿ ಎ. ಈಶ್ವರಪ್ಪ, ಕರೀಂ ಫಿರಾನ್, ಕೆ.ಎನ್.ಗಂಗಾಧರ ಸ್ವಾಮಿ, ಚಂದ್ರಮೋಹನ್, ಎಸ್. ನರಸಿಂಹಚಾರ್, ನಾಗರಾಜ, ಎಸ್.ಈ.ನಂಜುಂಡೇಗೌಡ, ಎಸ್. ನಾಗರಾಜ, ಕೆ.ಮುರಳಿಧರ, ರಾಜ, ಕೆ. ರಾಜಪ್ಪ, ಬಿ. ರಾಮಚಂದ್ರ, ಬಿ.ಎನ್.ಶ್ರೀನಿವಾಸ ಮತ್ತು ಬಿ.ಎಸ್. ಶ್ರೀನಿವಾಸಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment