ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

 ಶಿವಮೊಗ್ಗ  LIVE 

ಹೊಳೆಹೊನ್ನೂರು: ಕೌಟುಂಬಿಕ ಕಲಹದ (family dispute) ಹಿನ್ನೆಲೆ ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಹೊಳೆಹೊನ್ನೂರಿನ ಬೊಮ್ಮನ ಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ » ರಸ್ತೆ ಬದಿ ನವಜಾತ ಗಂಡು ಶಿಶು, ವಾರಸುದಾರರ ಪತ್ತೆಗೆ ಮನವಿ

ಚಂದನಾ ಬಾಯಿ (23) ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಪತಿ ಗೋಪಿ ಜೊತೆಗೆ ಜಗಳವಾಗಿತ್ತು. ಈ ಸಂದರ್ಭ ಆತ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಗೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್‌.ಬಿ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.  

Shimoga-SP-Nikhil-B-visited-holehonnuru-murder-spot.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment