ಶಿವಮೊಗ್ಗ ಲೈವ್
ಹೊಳೆಹೊನ್ನೂರು: ಸಾಲಬಾಧೆಗೆ ಸೈದರಕಲ್ಲಹಳ್ಳಿಯ ರೈತ ಮಹೇಶ್ (36) ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಮಹೇಶ್ ಜಮೀನು ಅಭಿವೃದ್ದಿ ಹಾಗೂ ಮನೆ ನಿರ್ಮೀಸಿಕೊಳ್ಳಲು ಖಾಸಗಿ ಪೈನಾನ್ಸ್ ಕಂಪನಿಗಳಲ್ಲಿ ₹7 ಲಕ್ಷ ಸೇರಿದಂತೆ ಸ್ಥಳೀಯವಾಗಿ ₹6 ಲಕ್ಷ ಕೈ ಸಾಲ ಮಾಡಿದರು ಎಂದು ಹೇಳಲಾಗಿದೆ. (ಈ ಸುದ್ದಿಯನ್ನು ಇನ್ನು 22 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕೆಲ ದಿನಗಳ ಹಿಂದೆ ಖಾಸಗಿ ಪೈನಾನ್ಸ್ ಸಂಸ್ಥೆ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದರು. ಇದರಿಂದ ಮನನೊಂದ ಮಹೇಶ್ ಜುಗುಪ್ಸೆಗೊಂಡಿದ್ದರು ಎಂದು ಆರೋಪಿಸಲಾಗಿದೆ. ಮಂಗಳವಾರ ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
