ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 MARCH 2023
BHADRAVATHI : ಬೈಕಿನ ಬಣ್ಣ ಮತ್ತು ಸೈಲೆನ್ಸರ್ ಬದಲಾಯಿಸಿ (modification), ಹೆಲ್ಮೆಟ್ ಧರಸಿದೆ ಚಾಲನೆ ಮಾಡುತ್ತಿದ್ದ ಸವಾರನಿಗೆ ನ್ಯಾಯಾಲಯ ದಂಡ ವಿಧಿಸಿದ್ದಾರೆ.

ಏನಿದು ಪ್ರಕರಣ?
ಭದ್ರಾವತಿ ಜಯಶ್ರೀ ಸರ್ಕಲ್ ಬಳಿ ಫೆ.23ರಂದು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಯುವಕನನ್ನು ನ್ಯೂಟೌನ್ ಠಾಣೆ ಪಿಎಸ್ಐ ರಂಗನಾಥ್ ಅವರು ತಡೆದು ದಾಖಲೆ ಪರಿಶೀಲಿಸಿದ್ದರು. ಬೈಕಿನ ಆರ್.ಸಿ.ಪುಸ್ತಕದಲ್ಲಿ ನಮೂದಾಗಿದ್ದ ಬೈಕಿನ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಲಾಗಿತ್ತು (modification). ಸೈಲೆನ್ಸರ್ ಅನ್ನು ಕೂಡ ಮಾರ್ಪಾಡು ಮಾಡಲಾಗಿತ್ತು. ಈ ಹಿನ್ನೆಲೆ ಯುವಕನ ವಿರುದ್ಧ ಇಂಡಿಯನ್ ಮೋಟರ್ ವೆಹಿಕಲ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ದಂಡ ವಿಧಿಸಿದ ನ್ಯಾಯಾಲಯ
ವಿಚಾರಣೆ ನಡೆಸಿದ ಭದ್ರಾವತಿಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ನ್ಯಾಯಾಧೀಶರಾದ ಯತೀಶ್ ಅವರು ಆರೋಪಿ ಭದ್ರಾವತಿ ಹೊಸಮನೆಯ ಗಗನ್ ಎಂಬಾತನಿಗೆ ದಂಡ ವಿಧಿಸಿದ್ದಾರೆ. 6500 ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ – ನಡುರಸ್ತೆಯಲ್ಲಿ ಕೊರಿಯರ್ ಸರ್ವಿಸ್ ಯುವಕನ ಮುಖಕ್ಕೆ ಹೊಡೆದ ‘ಕಪ್ಪು ಅಂಗಿ’ ವ್ಯಕ್ತಿ

LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP



