ಜೋಡಿ ಕೊಲೆ ಪ್ರಕರಣ, ಘಟನೆಗೆ ಕಾರಣವೇನು? ಇಲ್ಲಿದೆ ಎಸ್‌ಪಿ ಫಸ್ಟ್‌ ರಿಯಾಕ್ಷನ್

 ಶಿವಮೊಗ್ಗ  LIVE 

ಶಿವಮೊಗ್ಗ: ಭದ್ರಾವತಿಯ ಜೈ ಭೀಮ್‌ ನಗರದಲ್ಲಿ ಶುಕ್ರವಾರ ನಡೆದ ಜೋಡಿ ಕೊಲೆ‌ (double murder) ಪ್ರಕರಣದ ತನಿಖೆ ತೀವ್ರಗೊಂಡಿದೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ » ಖಾಸಗಿ ಬಸ್‌, ಪೆಟ್ರೋಲ್‌ ಟ್ಯಾಂಕರ್‌ ಮುಖಾಮುಖಿ ಡಿಕ್ಕಿ, ಮಹಿಳೆಗೆ ತೀವ್ರ ಪೆಟ್ಟು, ಘಟನೆ ಆಗಿದ್ದೆಲ್ಲಿ?

ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?

ಪ್ರೀತಿಸಿ ಹೈದರಾಬಾದ್‌ಗೆ ಜೋಡಿ

ಸ್ಪೂರ್ತಿ ಮತ್ತು ನಂದೀಶ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ವಯಸ್ಕರಾಗಿದ್ದು, ಎರಡು ದಿನದ ಹಿಂದೆ ನಾಪತ್ತೆಯಾಗಿ ಹೈದರಾಬಾದ್‌ಗೆ ಹೋಗಿ ವಾಪಸ್ ಬಂದಿದ್ದರು.

Five-nabbed-in-double-murder-case-at-Bhadravathi

ಪೊಲೀಸ್‌ ಠಾಣೆಯಲ್ಲಿ ಸಂಧಾನ

ಹಿಂತಿರುಗಿದ ನಂದೀಶ್‌ ಮತ್ತು ಸ್ಪೂರ್ತಿ ರಕ್ಷಣೆಗಾಗಿ ಮೊರೆಯಿಟ್ಟು ಪೊಲೀಸ್‌ ಠಾಣೆಗೆ ಬಂದಿದ್ದರು. ಇಬ್ಬರ ಕುಟುಂಬದವರು ನಿನ್ನೆ ಸಂಜೆ 4.30ರ ಹೊತ್ತಿಗೆ ಠಾಣೆಗೆ ಆಗಮಿಸಿದ್ದರು. ರಾತ್ರಿ 8.30ರವರೆಗೆ ಮಾತುಕತೆ ನಡೆದು, ತಾನು ನಂದೀಶನ ಜೊತೆಗೇ ಹೋಗುವುದಾಗಿ ಸ್ಪೂರ್ತಿ ಖಚಿತಪಡಿಸಿದ್ದಳು. ಬಳಿಕ ಎರಡೂ ಕುಟುಂಬಗಳು ಒಪ್ಪಿಕೊಂಡು, ಮುಚ್ಚಳಿಕೆ ಪತ್ರ ಬರೆದುಕೊಡುತ್ತಿದ್ದರು.

ಕಿರಣ್‌ ಮೇಲೆ ಅಟ್ಯಾಕ್‌

ಪೊಲೀಸ್‌ ಠಾಣೆಯಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಡುವ ಪ್ರಕ್ರಿಯೆ ನಡೆಯುತ್ತಿದ್ದಾಗಲೇ, ಸ್ಪೂರ್ತಿಯ ಅಣ್ಣ ಭರತ್ ಅಲ್ಲಿಂದ ಹೊರ ನಡೆದಿದ್ದ. ತನ್ನ ತಂಗಿಯ ಪ್ರೀತಿಗೆ ಆಕೆಯ ಸ್ನೇಹಿತ ಕಿರಣ್ (25) ಮುಖ್ಯ ಕಾರಣ ಎಂದು ಭಾವಿಸಿ ಆತನ ಮೇಲೆ ದಾಳಿಗೆ ಯೋಜಿಸಿದ್ದ. ಭರತ್ ತನ್ನ ಐದಾರು ಸ್ನೇಹಿತರ ಸಹಿತ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಜೈಭೀಮ್ ನಗರದಲ್ಲಿ ಕಿರಣ್ ಮೇಲೆ ದಾಳಿ ಮಾಡಿದ್ದ. ಈ ವೇಳೆ ಕಿರಣ್ ಜೊತೆಗಿದ್ದ ಸ್ನೇಹಿತ ಸುರೇಶ್ (25) ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

SP Mithun Kumar

ಗಲಾಟೆ ಬಿಡಿಸಲು ಬಂದವರ ಹತ್ಯೆ

ಇನ್ನು, ಕಿರಣ್‌ ಮೇಲೆ ದಾಳಿ ವೇಳೆ ಅದೇ ಏರಿಯಾದ ಮಂಜುನಾಥ್ ಎಂಬುವವರು ಗಲಾಟೆ ಬಿಡಿಸಲು ಬಂದಿದ್ದರು. ಆಗ ನೀನೆ ಯಾವಾಗಲೂ ಜಗಳ ಬಿಡಿಸುತ್ತೀಯಾ, ಎಲ್ಲಾ ಹಾಳು ಮಾಡುತ್ತೀಯಾ ಎಂದು ಆರೋಪಿಸಿ, ಭರತ್ ಮತ್ತು ಆತನ ಸ್ನೇಹಿತರು ಮಂಜುನಾಥ್ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಮಂಜುನಾಥ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರ ಗಾಯಗೊಂಡಿದ್ದ ಕಿರಣ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಿರಣ್‌ ಮತ್ತು ಆರೋಪಿ ಭರತ್‌ ಮಧ್ಯೆ ಈ ಮೊದಲು ಹಲವು ಮನಸ್ತಾಪ ಇದ್ದವು. ಇನ್ನೊಂದೆಡೆ, ನಂದೀಶ್ ಮತ್ತು ಸ್ಪೂರ್ತಿ ಇಬ್ಬರೂ ಸುರಕ್ಷಿತವಾಗಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

Bhadravathi double murder case

ಐವರು ಆರೋಪಿಗಳು ಅರೆಸ್ಟ್‌

ಜೋಡಿ ಕೊಲೆ ಪ್ರಕರಣ ಸಂಬಂಧ ಹಳೆ ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಜುನಾಥ್ ಅಲಿಯಾಸ್‌ ಸೈಲೆಂಟ್ ಶಶಿ (29), ಭರತ್ ಅಲಿಯಾಸ್‌ ಸುಂಡು (32), ಸಂಜಯ್ ಅಲಿಯಾಸ್‌ ಕುಳ್ಳಿ (24), ಸುರೇಶ್ ಅಲಿಯಾಸ್‌ ಸೂರಿ (27), ವೆಂಕಟೇಶ್ ಅಲಿಯಾಸ್‌ ಕೆಂಚ (28) ಬಂಧಿತರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment