RAINFALL NEWS, 11 OCTOBER 2024 : ಶಿವಮೊಗ್ಗ ಜಿಲ್ಲೆಯಾದ್ಯಂತ ರಾತ್ರಿ ವೇಳೆಗೆ ಜೋರು ಮಳೆ (Heavy Rain) ಆರಂಭವಾಗಿದೆ. ವಿವಿಧೆಡೆ ರಸ್ತೆಯ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರಕ್ಕೆ ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.
ಭದ್ರಾವತಿಯಲ್ಲಿ ಮಳೆಯೋ ಮಳೆ
ಭದ್ರಾವತಿ ತಾಲೂಕಿನ ಹಲವು ಕಡೆ ಸಂಜೆಯಿಂದಲೇ ಜೋರು ಮಳೆಯಾಗುತ್ತಿದೆ. ಪಟ್ಟಣದ ಹಲವು ಕಡೆ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಂಗಡಿಗಳು, ಮನೆಗಳಿಗು ನೀರು ನುಗ್ಗಿದೆ. ಭೂತನಗುಡಿ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಂಗಡಿಗಳಿಗೂ ನೀರು ನುಗ್ಗಿದೆ.
![]() |
ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಭದ್ರಾವತಿಯ ಎಮ್ಮೆಹಟ್ಟಿ, ಅರೆಬಿಳಚಿ, ನಾಗತಿಬೆಳಗಲು, ತಡಸ, ಕಾಗೆಕೊಡಮಗ್ಗಿ, ಅರಳಹಳ್ಳಿ, ಯರೇಹಳ್ಳಿಯಲ್ಲಿ ಭಾರಿ ಮಳೆಯಾಗುತ್ತಿದೆ. ಮಾವಿನಕೆರೆ, ಬಿಳಕಿ, ಅರಕೆರೆ, ಕಲ್ಲಿಹಾಳ್, ಗುಡಮಘಟ್ಟ, ಮಂಗೋಟೆ, ನಿಂಬೆಗೊಂದಿ, ಹಿರಿಯೂರು, ಅರಳಿಕೊಪ್ಪ ಭಾಗದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಆತಂಕಕ್ಕೀಡದ ವ್ಯಾಪಾರಿಗಳು, ನಿವಾಸಿಗಳು
ಭಾರಿ ಮಳೆಯಿಂದಾಗಿ ಭದ್ರಾವತಿ ತಾಲೂಕು ಮತ್ತು ಪಟ್ಟಣದ ತಗ್ಗು ಪ್ರದೇಶದ ವಿವಿಧೆಡೆ ಜನರು ಆತಂಕಕ್ಕೀಡಾಗಿದ್ದಾರೆ. ಇದೇ ರೀತಿ ಮಳೆ ಮುಂದುವರೆದರೆ ಜಲಾವೃತವಾಗುವ ಭೀತಿ ಎದುರಾಗಿದೆ. ತುರ್ತು ನೆರವು ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200