ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI NEWS, 16 SEPTEMBER 2024 : ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ಅದ್ಧೂರಿ ಮೆರವಣಿಗೆ (Procession) ನಡೆಯಿತು. ಭದ್ರಾವತಿ ನಗರದ ವಿವಿಧೆಡೆ ಮೆರವಣಿಗೆಯಲ್ಲಿ ಸಾಗಿದ ಗಣಪತಿಯನ್ನು ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಎಲ್ಲೆಲ್ಲಿ ಸಾಗಿತು ಮೆರವಣಿಗೆ?
ಬೆಳಗ್ಗೆ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹೊಸಮನೆ ಶಿವಾಜಿ ವೃತ್ತದವರೆಗೂ ತೆರಳಿ ಅಲ್ಲಿಂದ ರಂಗಪ್ಪ ಸರ್ಕಲ್ ಮೂಲಕ ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ. ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮೂಲಕ ಲೋಯರ್ ಹುತ್ತಾ ಬಸ್ ನಿಲ್ದಾಣದವರೆಗೂ ತರಳಿತು. ನಂತರ ತರೀಕೆರೆ ರಸ್ತೆ ಗಾಂಧಿವೃತ್ತದ ಮೂಲಕ ಆಗಮಿಸಿ ನಗರಸಭೆ ಕಚೇರಿ ಎದುರು ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ಡೊಳ್ಳು ಕುಣಿತ, ವೀರಗಾಸೆ, ಕೀಲುಕುದುರೆ, ವಾದ್ಯಮೇಳಗಳು ಭಾಗವಹಿಸಿದ್ದವು. ಇವುಗಳ ಶಬ್ದಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿದರು. ಹೊಸಮನೆ ಮುಖ್ಯ ರಸ್ತೆಯಿಂದಲೂ ಡಿ.ಜೆ. ಸೌಂಡ್ ಮೊಳಗಿತು. ಸೌಂಡ್ ಸಿಸ್ಟಂ ಅಬ್ಬರಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.ಡೊಳ್ಳು, ವಿರಗಾಸೆ, ಕಿಲು ಕುದುರೆ
ರಾರಾಜಿಸಿದ ಕೇಸರಿ, ಫೋಟೊಗಳ ಪ್ರದರ್ಶನ
ಮೆರವಣಿಗೆಯ ಹಾದಿ ಉದ್ದಕ್ಕು ಕೇಸರಿ ಬಾವುಟ ರಾರಾಜಿಸಿದವು. ಯುವಕರು ಬಾವುಟಳನ್ನು ತಿರುಗಿಸುತ್ತ ಘೋಷಣೆ ಕೂಗುತ್ತಿದ್ದರು. ಇನ್ನು, ಬಜರಂಗದಳ ಕಾರ್ಯಕರ್ತ ಸುನಿಲ್ ಕುಮಾರ್, ಶಿವಮೊಗ್ಗದ ಹರ್ಷ, ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಗಳನ್ನು ಹಿಡಿದು ಕೆಲ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಟ ದರ್ಶನ್ ಅಭಿಮಾನಿಗಳು ಸೇಬಿನ ಹಾರ ಹಾಕಿ ಪ್ರಾರ್ಥಿಸಿದರು.
ವಿವಿಧ ಸಂಘ ಸಂಸ್ಥೆಗಳು ಹಾಗೂ ಪದಾಧಿಕಾರಿಗಳು ಹಿಂದೂ ಮಹಾಸಭಾ ಗಣಪತಿಗೆ ವಿವಿಧ ಬಗೆಯ ಹಾರಗಳನ್ನು ಅರ್ಪಿಸಿದರು. ಸೇಬು, ಮೂಸಂಬಿ ಹಣ್ಣಿನ ಹಾರಗಳು, ವಿವಿಧ ಬಗೆಯ ಹೂವಿನ ಹಾರಗಳನ್ನು ಗಣೇಶ ಮೂರ್ತಿಗೆ ಅರ್ಪಣೆ ಮಾಡಿದರು.ವಿವಿಧ ಬಗೆಯ ಹಾರ ಅರ್ಪಣೆ
ಉಪಾಹಾರ, ಪಾನಕ, ಸಿನಿ ತಿನಿಸುಗಳು
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ರಸ್ತೆಯುದ್ದಕ್ಕೂ ವಿವಿಧ ಸಂಘಟನೆಗಳು ಉಪಾಹಾರ, ಊಟದ ವ್ಯವಸ್ಥೆ ಮಾಡಿದ್ದರು. ವಿವಿಧ ಸಿಹಿ ತಿನಿಗಳನ್ನು ಕೂಡ ವಿತರಿಸಲಾಯಿತು. ದಣಿದವರಿಗೆ ಪಾನಕ, ನೀರು ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್ ಆಗಲು PM, CMಗಳೆ ಬರಬೇಕು
ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು
ಇನ್ನು, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ತರೀಕೆರೆ ರಸ್ತೆ ಮಸೀದಿ ಮುಂಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 17 ಪೊಲೀಸ್ ಉಪಾಧೀಕ್ಷಕರು, 45 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 65 ಪಿಎಸ್‌ಐ, 190 ಎಎಸ್‌ಐ, 1450 ಹೆಡ್‌ಕಾನ್‌ಸ್ಟೇಬಲ್ಸ್, 450 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್‌ಎಎಫ್, 5 ಡಿಎಆರ್, ಒಂದು ಕ್ಯೂಆರ್‌ಟಿ ಹಾಗೂ 8 ಕೆಎಸ್‌ಆರ್‌ಪಿ ತುಕಡಿಗಳು ಸೇರಿ 3000ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ದಿಢೀರ್ ಬಲಕ್ಕೆ ತಿರುಗಿದ ಲಾರಿ, ಬೈಕ್ ಸವಾರ ಮೆಗ್ಗಾನ್‌ಗೆ ದಾಖಲು – 3 ಫಟಾಫಟ್ ನ್ಯೂಸ್